Advertisement

Australia vs India; ಏಕೈಕ ವನಿತಾ ಟೆಸ್ಟ್‌: ಆಸೀಸ್‌ ವಿರುದ್ಧ ಮೊದಲ ಜಯಕ್ಕೆ ಕಾತರ

12:32 AM Dec 21, 2023 | Team Udayavani |

ಮುಂಬಯಿ: ಮೊನ್ನೆಯಷ್ಟೇ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಏಕೈಕ ಟೆಸ್ಟ್‌ನಲ್ಲಿ 347 ರನ್ನುಗಳ ದಾಖಲೆ ಅಂತರದಿಂದ ಕೆಡವಿದ ಭಾರತದ ವನಿತೆಯರೀಗ ಮತ್ತೂಂದು ಪ್ರಬಲ ತಂಡವಾದ ಆಸ್ಟ್ರೇಲಿಯಕ್ಕೂ ಆಘಾತ ವಿಕ್ಕುವ ಯೋಜನೆಯಲ್ಲಿದ್ದಾರೆ. ಈ ಏಕಮಾತ್ರ ಟೆಸ್ಟ್‌ ಗುರು ವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ.

Advertisement

ಭಾರತ-ಆಸ್ಟ್ರೇಲಿಯ ಕಳೆದ 46 ವರ್ಷಗಳ ಅವಧಿ ಯಲ್ಲಿ 10 ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖೀ ಆಗಿವೆ. ಆದರೆ ಭಾರತ ಒಂದರಲ್ಲೂ ಗೆದ್ದಿಲ್ಲ. ಆಸ್ಟ್ರೇಲಿಯ 4 ಟೆಸ್ಟ್‌ ಗಳನ್ನು ಜಯಿಸಿದ್ದು, 5 ಸರಣಿಗಳಲ್ಲಿ ಮೂರನ್ನು ತನ್ನ ದಾಗಿಸಿಕೊಂಡಿದೆ. ಈ ಬಾರಿ ಭಾರತದ ಮುಂದೆ ಗೆಲುವಿನ ಉತ್ತಮ ಅವಕಾಶವಿದೆ ಎಂಬುದೊಂದು ನಿರೀಕ್ಷೆ.

ಆಸ್ಟ್ರೇಲಿಯ ಕೂಡ ಇಂಗ್ಲೆಂಡ್‌ನ‌ಷ್ಟೇ ಅಥವಾ ಇಂಗ್ಲೆಂಡ್‌ಗಿಂತಲೂ ಪ್ರಬಲ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮೊನ್ನೆ ಇಂಗ್ಲೆಂಡ್‌ ಸ್ಥಿತಿ ಏನಾಯಿತು ಎಂಬುದನ್ನು ಗಮನಿಸಿದಾಗ ಹರ್ಮನ್‌ಪ್ರೀತ್‌ ಕೌರ್‌ ಬಳಗದ ಮೇಲೆ ಭಾರೀ ನಂಬಿಕೆ ಮೂಡುತ್ತದೆ. ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ದೀಪ್ತಿ ಶರ್ಮ ಘಾತಕ ಪ್ರದರ್ಶನ ನೀಡಿ ಹೀತರ್‌ ನೈಟ್‌ ಪಡೆಯನ್ನು ಹೊಡೆದುರುಳಿಸಿದ್ದರು. ಇದು ಕಲ್ಪನೆಗೂ ಮೀರಿದ ಫ‌ಲಿತಾಂಶ. ಆಸೀಸ್‌ ಕೂಡ ಸ್ಪಿನ್ನಿಗೆ ಅಂಜಿದರೆ ಭಾರತದ ಮೇಲುಗೈ ಖಚಿತ.

ಪೂಜಾ ವಸ್ತ್ರಾಕರ್‌, ರೇಣುಕಾ ಸಿಂಗ್‌, ರಾಜೇಶ್ವರಿ ಗಾಯಕ್ವಾಡ್‌ ಕೂಡ ಇಂಗ್ಲೆಂಡ್‌ ವಿರುದ್ಧ ಬಿಗಿ ದಾಳಿ ಸಂಘಟಿಸಿದ್ದರು. ಆಸ್ಟ್ರೇಲಿಯ ವಿರುದ್ಧವೂ ಇದೇ ಬೌಲಿಂಗ್‌ ಕಾಂಬಿನೇಶನ್‌ ಮುಂದುವರಿಯಲಿದೆ.

ಶುಭಾ ಬದಲು ಪ್ರಿಯಾ
ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಬ್ಯಾಟಿಂಗ್‌ ಮಿಂಚು ಹರಿಸಿದ ಎಡಗೈ ಆಟಗಾರ್ತಿ ಕನ್ನಡತಿ ಶುಭಾ ಸತೀಶ್‌ ಕೈಬೆರಳಿನ ಮೂಳೆ ಮುರಿತಕ್ಕೆ ಸಿಲುಕಿದ ಕಾರಣ ಆಸೀಸ್‌ ಎದುರಿನ ಸ್ಪರ್ಧೆಗೆ ಲಭ್ಯರಿರುವುದಿಲ್ಲ. ಇದೊಂದು ಹಿನ್ನಡೆ ಆಗಲೂಬಹುದು. ಇವರ ಬದಲು ಪ್ರಿಯಾ ಪೂನಿಯ ಸೇರ್ಪಡೆಗೊಂಡಿದ್ದಾರೆ. ಆದರೆ ನೆಟ್ಸ್‌ನಲ್ಲಿ ಕಾಣಿಸಿಕೊಂಡ ಹಲೀìನ್‌ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚು.

Advertisement

ಇಂಗ್ಲೆಂಡ್‌ ವಿರುದ್ಧ ನಾಯಕಿ ಕೌರ್‌ (49 ಮತ್ತು ಅಜೇಯ 44), ಜೆಮಿಮಾ (68), ಯಾಸ್ತಿಕಾ (66) ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಆದರೆ ಮಂಧನಾ ಅವರಿಂದ ದೊಡ್ಡ ಇನ್ನಿಂಗ್ಸ್‌ ಒಂದು ಹೊರ ಹೊಮ್ಮಬೇಕಿದೆ. 2021-22ರಲ್ಲಿ ಕೊನೆಯ ಸಲ ಆಸ್ಟ್ರೇ ಲಿಯವನ್ನು ಕೆರಾರದಲ್ಲಿ ಎದುರಿಸಿದಾಗ ಮಂಧನಾ ಮೊದಲ ಇನ್ನಿಂಗ್ಸ್‌ನಲ್ಲಿ 127 ರನ್‌ ಬಾರಿಸಿದ್ದರು.

ಆಸ್ಟ್ರೇಲಿಯ ಬರೋಬ್ಬರಿ 40 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್‌ ಆಡುತ್ತಿದೆ ಎಂಬುದೇ ವಿಶೇಷ. 1984ರಲ್ಲಿ ಕೊನೆಯ ಸಲ ಭಾರತಕ್ಕೆ ಬಂದಾಗ 4 ಪಂದ್ಯಗಳ ಸರಣಿ ಡ್ರಾಗೊಂಡಿತ್ತು (0-0). ಹೀಲಿ, ಎಲ್ಲಿಸ್‌ ಪೆರ್ರಿ, ಆ್ಯಶ್ಲಿ ಗಾರ್ಡನರ್‌, ಬೆತ್‌ ಮೂನಿ ಅವರಂಥ ಅನುಭವಿಗಳು ತಂಡದಲ್ಲಿದ್ದಾರೆ.

 ಆರಂಭ: ಬೆಳಗ್ಗೆ 9.00 n ಪ್ರಸಾರ: ಸ್ಪೋರ್ಟ್ಸ್ 18

ಮುಖಾಮುಖಿ
10 ಟೆಸ್ಟ್‌, 04ಆಸೀಸ್‌ ಜಯ, 00ಭಾರತ ಜಯ, 06 ಡ್ರಾ

Advertisement

Udayavani is now on Telegram. Click here to join our channel and stay updated with the latest news.

Next