Advertisement

ಮೊದಲ ಟೆಸ್ಟ್ ; ಆಸೀಸ್ ವಿರುದ್ಧ ಟೀಮ್ ಇಂಡಿಯಾಕ್ಕೆ 144 ರನ್ ಗಳ ಮುನ್ನಡೆ

06:24 PM Feb 10, 2023 | Team Udayavani |

ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 144 ರನ್ ಗಳ ಮುನ್ನಡೆ ಸಾಧಿಸಿದೆ.

Advertisement

77 ರನ್ ಗಳಿಂದ ಆತ ಮುಂದುವರಿಸಿದ ಭಾರತ ದಿನದ ಆಟದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿ ಆಟ ಮುಂದುವರಿಸಿದೆ. 66 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 52 ರನ್ ಗಳಿಸಿರುವ ಅಕ್ಷರ್ ಪಟೇಲ್ ಮೂರನೇ ದಿನ ಆಟ ಮುಂದುವರಿಸಲಿದ್ದಾರೆ.

ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮ 120 ರನ್ ಗಳಿಸಿ ಔಟಾದರು. ರಾಹುಲ್ 20, ಆರ್. ಅಶ್ವಿನ್ 23, ಪೂಜಾರ 7, ಕೊಹ್ಲಿ 12, ಸೂರ್ಯಕುಮಾರ್ ಯಾದವ್ 8 , ಮೊದಲ ಟೆಸ್ಟ್ ಪಂದ್ಯವಾಡಿದ ವಿಕೆಟ್ ಕೀಪರ್ ಶ್ರೀಕರ್ ಭರತ್ 8 ರನ್ ಗಳಿಸಿ ಔಟಾದರು.

ಇದನ್ನೂ ಓದಿ : ನಾಗ್ಪುರ ಟೆಸ್ಟ್ ಶತಕದೊಂದಿಗೆ ಹೊಸ ದಾಖಲೆ ಬರೆದ ನಾಯಕ ರೋಹಿತ್ ಶರ್ಮಾ

ಆಸೀಸ್ ಪರ ಬೌಲಿಂಗ್ ನಲ್ಲಿ ಟಾಡ್ ಮರ್ಫಿ 5 ವಿಕೆಟ್ ಪಡೆದು ಗಮನ ಸೆಳೆದರು.

Advertisement

ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 177 ರನ್ನುಗಳ ಸಣ್ಣ ಮೊತ್ತಕ್ಕೆ ಸರ್ವಪತನ ಕಂಡಿತ್ತು. ಜಡೇಜ 5 ವಿಕೆಟ್‌ ಕಿತ್ತು ಗಮನ ಸೆಳೆದಿದ್ದರು.

ಆಸ್ಟ್ರೇಲಿಯ ಒಟ್ಟು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆ ಬಳಿಕ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next