Advertisement

ಅಬ್ಬರಿಸಿದ ಆಸೀಸ್ ಆಟಗಾರರು ; ಭಾರತಕ್ಕೆ 375 ರ ಬೃಹತ್ ಸವಾಲು

01:24 PM Nov 27, 2020 | Suhan S |

ಸಿಡ್ನಿ : ಭಾರತ – ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಫಿಂಚ್ ಪಡೆ ಕೊಹ್ಲಿ ಬಾಯ್ಸ್ ಗೆ 375 ರ ಬೃಹತ್ ಗುರಿ ನೀಡಿದೆ.

Advertisement

ಆರಂಭಿಕ ಜೋಡಿಗಳಾಗಿ ಕ್ರೀಸಿಗಿಳಿದ ವಾರ್ನರ್ ಹಾಗೂ ನಾಯಕ ಫಿಂಚ್ ತಂಡಕ್ಕೆ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. 6 ಬೌಂಡರಿ ಸಹಿತ 69 ರನ್ ಗಳಿಸಿದ  ವಾರ್ನರ್  ಶಮಿ ಎಸೆತದಲ್ಲಿ ರಾಹುಲ್ ಕೈಗೆ ಕೀಪರ್ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಕಪ್ತಾನ ಆರೋನ್ ಫಿಂಚ್ ಜವಾಬ್ದಾರಿಯ ಆಟವನ್ನು ನೀಡಿ ಶತಕ ಬಾರಿಸಿದರು.9 ಬೌಂಡರಿ 2 ಸಿಕ್ಸರ್ ನೊಂದಿಗೆ 114 ರನ್ ಗಳಿಸಿದ ಫಿಂಚ್ ಬುಮ್ರ ಎಸೆತದಲ್ಲಿ ರಾಹುಲ್ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಸ್ಟೀವನ್ ಸ್ಮಿತ್ ಬಿರುಸಿನಿಂದ ಬ್ಯಾಟ್ ಬೀಸಿ ಅಮೋಘ 105 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮ ಕೆಲ ಓವರ್ ಗಳಲ್ಲಿ ಮ್ಯಾಕ್ಸ್ ವೆಲ್  ಬಿರುಸಿ ನಿಂದ ಬ್ಯಾಟ್ ಬೀಸಿ ತಂಡಕ್ಕೆ 45 ರನ್ ಗಳ ಕೊಡುಗೆ ನೀಡಿ ,ಸ್ಕೋರ್ ಬೋರ್ಡ್ ಮುಂದುವರಿಕೆಗೆ ನೆರವಾದರು.

ಇದನ್ನೂ ಓದಿ : ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

ಆಸ್ಟ್ರೇಲಿಯಾ ನಿಗದಿತ 50 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 374 ರನ್ ಪೇರಿಸಿ ಭಾರತಕ್ಕೆ 375 ರ ಸವಾಲನ್ನು ನೀಡಿದೆ.

ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರು ,ಬುಮ್ರ, ಯಜುವೇಂದ್ರ ಚಹಲ್, ನವದೀಪ್ ಸೈನಿ ದುಬಾರಿಯಾದರೂ ತಲಾ 1 ವಿಕೆಟ್ ಪಡೆದರು. ಕೀಪರ್ ಕೆ.ಎಲ್.ರಾಹುಲ್ 3 ಕ್ಯಾಚ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next