Advertisement

ಕಾಂಗರೂಗಳನ್ನು ಕುಗ್ಗಿಸಲು ಹತ್ತಾರು ದಾರಿಗಳು!

02:06 AM Sep 05, 2019 | Sriram |

ಮ್ಯಾಂಚೆಸ್ಟರ್‌: ಎದುರಾಳಿಯನ್ನು ಹೇಗೆ ಕಂಗೆಡಿಸಬಹುದು ಎಂಬುದನ್ನು ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಆ್ಯಶಸ್‌ ಕ್ರಿಕೆಟ್ ಸರಣಿ ವೇಳೆ ಕಲಿಯಬಹುದು.

Advertisement

ಬುಧವಾರ ಮ್ಯಾಂಚೆಸ್ಟರ್‌ನಲ್ಲಿ 4ನೇ ಟೆಸ್ಟ್‌ ಶುರುವಾಗಿದೆ. ಇದಕ್ಕೂ ಮೊದಲೇ ಮ್ಯಾಂಚೆಸ್ಟರ್‌ ಸಾರಿಗೆ ಅಧಿಕಾರಿಗಳು ಬೋರ್ಡ್‌ ಒಂದನ್ನು ಹಾಕಿ ಆಸೀಸ್‌ ತಂಡಕ್ಕೆ ಸ್ವಾಗತ ಕೋರಿದ್ದಾರೆ. ಅದರಲ್ಲಿ ಹೀಗೆ ಬರೆಯಲಾಗಿದೆ: ‘ಬೆನ್‌ ಸ್ಟೋಕ್ಸ್‌ ಮತ್ತು ಆಸ್ಟ್ರೇಲಿಯ ನಡುವೆ ಸೆ. 4ರಿಂದ 8ರ ವರೆಗೆ 4ನೇ ಟೆಸ್ಟ್‌. ಮರಳು (ಸ್ಯಾಂಡ್‌) ನಿಮ್ಮ ಯಾನವನ್ನು ಸ್ಥಗಿತಗೊಳಿಸುತ್ತದೆ. ಟ್ರ್ಯಾಮ್‌ನಲ್ಲಿ ಪ್ರಯಾಣಿಸಿ…’

ಏನು ಹೀಗೆಂದರೆ? ‘ಈ ರಸ್ತೆ ಅಷ್ಟು ಚೆನ್ನಾಗಿಲ್ಲ. ಇದರಲ್ಲಿ ಮರಳು ಹರಡಿಕೊಂಡಿದೆ. ಇದರಿಂದ ವಾಹನಗಳು ಜಾರಿ ಅಪಘಾತವಾಗಬಹುದು’ ಎನ್ನುವುದು ನೇರ ಅರ್ಥ.

ಒಳಾರ್ಥ ಬೇರೆಯೇ ಇದೆ. ಕಳೆದ ವರ್ಷ ಆಸ್ಟ್ರೇಲಿಯದ ಸ್ಮಿತ್‌, ವಾರ್ನರ್‌, ಬಾನ್‌ಕ್ರಾಫ್ಟ್ ಸ್ಯಾಂಡ್‌ಪೇಪರ್‌ ಬಳಸಿ ಚೆಂಡುವಿರೂಪ ಮಾಡಿ ಒಂದು ವರ್ಷ ನಿಷೇಧ ಕ್ಕೊಳಗಾಗಿದ್ದರು. ಅದನ್ನೇ ಇಲ್ಲಿ ಪರೋಕ್ಷವಾಗಿ ಪ್ರಸ್ತಾವಿಸಿ ಆಸ್ಟ್ರೇಲಿಯವನ್ನು ಮಾನಸಿಕವಾಗಿ ಕುಗ್ಗಿಸುವ ಯತ್ನ ಮಾಡಲಾಗಿದೆ!

ಇಲ್ಲಿನ ಓಲ್ಡ್ ಟ್ರಾಫ‌ರ್ಡ್‌ ಅಂಗಳದಲ್ಲಿ ಬುಧವಾರ ಮೊದಲ್ಗೊಂಡ ಆ್ಯಶಸ್‌ ಸರಣಿಯ 4ನೇ ಟೆಸ್ಟ್‌ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುತ್ತಿರುವ ಆಸ್ಟ್ರೇಲಿಯ 3 ವಿಕೆಟಿಗೆ 170 ರನ್‌ ಮಾಡಿ ಆಡುತ್ತಿದೆ.

Advertisement

ಡೇವಿಡ್‌ ವಾರ್ನರ್‌ (0) ಮತ್ತು ಮಾರ್ಕಸ್‌ ಹ್ಯಾರಿಸ್‌ (13) 28 ರನ್‌ ಆಗುವಷ್ಟರಲ್ಲಿ ಸ್ಟುವರ್ಟ್‌ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದಾಗ ಆಸೀಸ್‌ ತೀವ್ರ ಸಂಕಟಕ್ಕೆ ಸಿಲುಕಿತ್ತು. ಆದರೆ ಮಾರ್ನಸ್‌ ಲಬುಶೇನ್‌ (67) ಮತ್ತು ಸ್ಟೀವನ್‌ ಸ್ಮಿತ್‌ (ಬ್ಯಾಟಿಂಗ್‌ 80) ಸೇರಿಕೊಂಡು ತಂಡದ ರಕ್ಷಣೆಗೆ ನಿಂತರು. ಸ್ಮಿತ್‌ ಜತೆ ಹೆಡ್‌ (18) ಕ್ರೀಸ್‌ನಲ್ಲಿದ್ದಾರೆ. 5 ಪಂದ್ಯಗಳ ಸರಣಿಯೀಗ 1-1 ಸಮಬಲದಲ್ಲಿದೆ.

ಆ್ಯಶಸ್‌: ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯಕ್ಕೆ ಮಳೆ
ಇಲ್ಲಿನ ಓಲ್ಡ್ ಟ್ರಾಫ‌ರ್ಡ್‌ ಅಂಗಳದಲ್ಲಿ ಬುಧವಾರ ಮೊದಲ್ಗೊಂಡ ಆ್ಯಶಸ್‌ ಸರಣಿಯ 4ನೇ ಟೆಸ್ಟ್‌ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುತ್ತಿರುವ ಆಸ್ಟ್ರೇಲಿಯ 3 ವಿಕೆಟಿಗೆ 170 ರನ್‌ ಮಾಡಿ ಆಡುತ್ತಿದೆ. ಡೇವಿಡ್‌ ವಾರ್ನರ್‌ (0) ಮತ್ತು ಮಾರ್ಕಸ್‌ ಹ್ಯಾರಿಸ್‌ (13) 28 ರನ್‌ ಆಗುವಷ್ಟರಲ್ಲಿ ಸ್ಟುವರ್ಟ್‌ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದಾಗ ಆಸೀಸ್‌ ತೀವ್ರ ಸಂಕಟಕ್ಕೆ ಸಿಲುಕಿತ್ತು. ಆದರೆ ಮಾರ್ನಸ್‌ ಲಬುಶೇನ್‌ (67) ಮತ್ತು ಸ್ಟೀವನ್‌ ಸ್ಮಿತ್‌ (ಬ್ಯಾಟಿಂಗ್‌ 80) ಸೇರಿಕೊಂಡು ತಂಡದ ರಕ್ಷಣೆಗೆ ನಿಂತರು. ಸ್ಮಿತ್‌ ಜತೆ ಹೆಡ್‌ (18) ಕ್ರೀಸ್‌ನಲ್ಲಿದ್ದಾರೆ. 5 ಪಂದ್ಯಗಳ ಸರಣಿಯೀಗ 1-1 ಸಮಬಲದಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next