ರಾಂಚಿ: ಚೇತೇಶ್ವರ ಪೂಜಾರ ಮತ್ತು ವೃದ್ಧಿಮಾನ್ ಸಾಹ ಅವರ ತಾಳ್ಮೆಯ ಬ್ಯಾಟಿಂಗ್ ಸಾಹಸದಿಂದಾಗಿ ಭಾರತವು ರಾಂಚಿಯಲ್ಲಿ ಸಾಗುತ್ತಿರುವ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
ಪೂಜಾರಾ ದ್ವಿಶತಕ, ಸಾಹಾ ಶತಕದ ಸಾಥ್
ನಾಲೆ°à ದಿನದಾಟದಲ್ಲಿ ಭರ್ಜರಿ ಜೊತೆಯಾಟವಾಡಿದ ಪೂಜಾರ ಮತ್ತು ಸಾಹ ದ್ವಿಶತಕ ಮತ್ತು ಶತಕ ಸಿಡಿಸಿ ಸಂಭ್ರಮಿಸಿದರು. 130 ರನ್‌ಗಳಿಸಿದ್ದ ಪೂಜಾರ 202 ರನ್‌ಗಳಿಸಿ ಔಟಾದರು. ಬರೋಬ್ಬರಿ 525 ಎಸೆತಗಳನ್ನು ಎದುರಿಸಿದ್ದ ಅವರ ದ್ವಿಶತಕದಲ್ಲಿ 21 ಬೌಂಡರಿಗಳಿದ್ದವು.
ಪೂಜಾರಾಗೆ ಉತ್ತಮ ಸಾಥ್ ನೀಡಿದ ಸಾಹ ಶತಕ ಸಿಡಿಸಿ ಸಂಭ್ರಮಿಸಿದರು. 18 ರನ್‌ಗಳಿಂದ ಆಟ ಮುಂದುವರಿಸಿದ ಸಾಹಾ 117 ರನ್‌ಗಳಿಸಿ ಔಟಾದರು.
ಅಬ್ಬರಿಸಿದ ಜಡೇಜಾ 54 ರನ್‌ಗಳಿಸಿ ಅಜೇಯರಾಗಿ ಉಳಿದರು. ಉಮೇಶ್ ಯಾದವ್ 16 ರನ್ ಗಳಿಸಿ 16 ರನ್‌ಗಳಿಸಿ ಔಟಾದರು.
9 ವಿಕೆಟ್ ನಷ್ಟಕ್ಕೆ 603 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್ ಮುನ್ನಡೆ ಪಡೆದುಕೊಂಡಿದೆ.
2 ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ 23 ರನ್‌ಗೆ ಮೊದಲ 2 ವಿಕೆಟ್ ಕಳೆದುಕೊಂಡು ಅಘಾತಕ್ಕೊಳಗಾಗಿದೆ. 14 ರನ್‌ಗಳಿಸಿದ್ದ ವಾರ್ನರ್ ಮತ್ತು ನೈಟ್ ವಾಚ್‌ಮನ್ ಆಗಿ ಬಂದಿದ್ದ ಲಿಯೊನ್‌ರನ್ನು ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು.
ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 451 ರನ್‌ಗಳಿಗೆ ಆಲೌಟಾಗಿತ್ತು.