ಮೆಲ್ಬೋರ್ನ್: ಭಾರತ ವಿರುದ್ಧ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಏಕದಿನ ಸರಣಿಗೆ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಹಲವಾರು ಬದಲಾವಣೆ ಮಾಡಿಕೊಂಡಿದ್ದು, ಟೆಸ್ಟ್ ಮಾದರಿಯಲ್ಲಿ ಮಿಂಚಿದ ಮಾರ್ನಸ್ ಲಬುಶೇನ್ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ಕಡೆಯದಾಗಿ ಏಕದಿನ ಪಂದ್ಯವಾಡಿದ್ದು ಆರು ತಿಂಗಳ ಹಿಂದೆ. ಏಕದಿನ ವಿಶ್ವಕಪ್ ನಂತರ ಕಾಂಗರೂಗಳು ಯಾವುದೇ ಏಕದಿನ ಪಂದ್ಯವಾಡಿಲ್ಲ.
ಮುಂದಿನ ಜನರಿಯಲ್ಲಿ ಆಸೀಸ್ ತಂಡ ಭಾರತಕ್ಕೆ ಆಗಮಿಸಲಿದ್ದು ಮೂರು ಏಕದಿನ ಪಂದ್ಯವಾಡಲಿದೆ. ಜನವರಿ 14ರಂದು ಮೊದಲ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಎರಡನೇ ಪಂದ್ಯ ರಾಜ್ ಕೋಟ್ ಮತ್ತು ಅಂತಿಮ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.
ವಿಶ್ವಕಪ್ ನಲ್ಲಿ ಆಡಿದ್ದ ಉಸ್ಮಾನ್ ಖ್ವಾಜಾ, ಶಾನ್ ಮಾರ್ಶ್, ನಥನ್ ಕೌಲ್ಟರ್ ನೈಲ್, ಮ್ಯಾಕ್ಸ ವೆಲ್, ಸ್ಟೋಯಿನಸ್ ಮತ್ತು ನಥನ್ ಲಿಯಾನ್ ಈ ಸರಣಿಯಲ್ಲಿ ಸ್ಥಾನ ಪಡೆದಿಲ್ಲ.
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್, ಸೀನ್ ಆಬೋಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ ಕಾಂಬ್, ಜೋಶ್ ಹ್ಯಾಜಲ್ ವುಡ್, ಮಾರ್ನಸ್ ಲ್ಯಾಬುಶೇನ್, ಕೇನ್ ರಿಚರ್ಡ್ ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಶ್ಟನ್ ಟರ್ನರ್, ಡೇವಿಡ್ ವಾರ್ನರ್ , ಆಡಂ ಜಾಂಪಾ.