Advertisement

ವಿದ್ಯಾರ್ಥಿ ಬೌನ್ಸರ್‌ಗೆ ಸ್ಟೀನ್‌ ಸ್ಮಿತ್‌ ಕಕ್ಕಾಬಿಕ್ಕಿ!

10:05 AM Feb 22, 2020 | Sriram |

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಜೊಹಾನ್ಸ್‌ಬರ್ಗ್‌ಗೆ ಆಗಮಿಸಿರುವ ಆಸ್ಟ್ರೇಲಿಯ ತಂಡದ ತಾರಾ ಬ್ಯಾಟ್ಸ್‌ಮನ್‌ ಸ್ಟೀವನ್‌ ಸ್ಮಿತ್‌ ಅವರಿಗೆ 16 ವರ್ಷದ ವಿದ್ಯಾರ್ಥಿಯೊಬ್ಬ ಬೌನ್ಸರ್‌ ಎಸೆದು ಸುದ್ದಿಯಾಗಿದ್ದಾನೆ. ನೆಟ್‌ ಅಭ್ಯಾಸದ ವೇಳೆ ಬಾಲಕ ಎಸೆದ ಬೌನ್ಸರ್‌ಗೆ ಸ್ಮಿತ್‌ ಗಲಿಬಿಲಿಗೊಂಡಿದ್ದಾರೆ!

Advertisement

ಕಳೆದ ಸಲ ದಕ್ಷಿಣ ಆಫ್ರಿಕಾ ಪ್ರವಾಸ ತೆರಳಿದ ವೇಳೆ ಚೆಂಡು ವಿರೂಪ ಪ್ರಕರಣಕ್ಕೆ ಸಿಲುಕಿ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಬ್ಯಾನ್‌ಕ್ರಾಫ್ಟ್ ನಿಷೇಧಗೊಂಡಿದ್ದರು. ಅನಂತರ ಆಫ್ರಿಕಾ ನೆಲದಲ್ಲಿ ಮೊದಲ ಸರಣಿಯನ್ನು ಆಡಲು ಸ್ಮಿತ್‌ ಆಗಮಿಸಿದ್ದಾರೆ. ಗುರುವಾರ ನೆಟ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕ ಎಸೆದ ಬೌನ್ಸರ್‌ಗೆ ಉತ್ತರಿಸಲು ಸ್ಮಿತ್‌ಗೆ ಒದ್ದಾಡಿದರು.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆಸೀಸ್‌ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next