Advertisement

ತ್ರಿದಿನ ಅಭ್ಯಾಸ ಪಂದ್ಯಕ್ಕೆ ಸ್ಟೀವನ್‌ ಸ್ಮಿತ್‌ ಅಣಿ

11:20 PM Aug 25, 2019 | Team Udayavani |

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ವೇಳೆ ಜೋಫ್ರಾ ಆರ್ಚರ್‌ ಅವರಿಂದ ಬೌನ್ಸರ್‌ ಏಟು ತಿಂದ ಸ್ಟೀವನ್‌ ಸ್ಮಿತ್‌ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಲು ಸಜ್ಜಾಗಿದ್ದಾರೆ. ಗುರುವಾರ ಡರ್ಬಿಶೈರ್‌ ವಿರುದ್ಧ ಆರಂಭವಾ ಗಲಿರುವ ತ್ರಿದಿನ ಪಂದ್ಯದಲ್ಲಿ ಸ್ಮಿತ್‌ ಕಣಕ್ಕಿಳಿಯುವ ಸಾಧ್ಯತೆ ಇದೆ.

Advertisement

ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ವೇಳೆ ಈ ದುರ್ಘ‌ಟನೆ ಸಂಭವಿಸಿತ್ತು. ಏಟು ತಿಂದ ಬಳಿಕವೂ ಸ್ಮಿತ್‌ ಬ್ಯಾಟಿಂಗಿಗೆ ಮರಳಿದ್ದರು. ಆದರೆ ವಿಶ್ರಾಂತಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಈಗ ನಡೆಯುತ್ತಿರುವ ಲೀಡ್ಸ್‌ ಟೆಸ್ಟ್‌ನಲ್ಲಿ ಸ್ಮಿತ್‌ ಆಡಲಿಳಿದಿಲ್ಲ. ಲಾರ್ಡ್ಸ್‌ ಟೆಸ್ಟ್‌ ಬಳಿಕ ರವಿವಾರ ಸ್ಮಿತ್‌ ಮೊದಲ ಸಲ ಅಭ್ಯಾಸಕ್ಕಿಳಿದು ಬೌಲರ್‌ಗಳನ್ನು ಎದುರಿಸಿದರು. 25 ನಿಮಿಷಗಳ ಕಾಲ ಸ್ಮಿತ್‌ ಅಭ್ಯಾಸ ನಡೆಸಿದ್ದು, ರನ್ನಿಂಗ್‌ ಮೂಲಕವೂ ಗಮನ ಸೆಳೆದರು.

 

Advertisement

Udayavani is now on Telegram. Click here to join our channel and stay updated with the latest news.

Next