Advertisement

ಟಿ20 ಸರಣಿ: ಶ್ರೀಲಂಕಾ ವಿರುದ್ಧ10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯ

05:47 PM Jun 08, 2022 | Team Udayavani |

ಕೊಲಂಬೊ: ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಭರ್ಜರಿಯಾಗಿ ಆರಂಭಿಸಿದೆ.

Advertisement

ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಪ್ರಚಂಡ ಗೆಲುವು ಸಾಧಿಸಿದೆ.

ಮಂಗಳವಾರ ರಾತ್ರಿ ಕೊಲಂಬೋದ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 19.3 ಓವರ್‌ಗಳಲ್ಲಿ 128ಕ್ಕೆ ಕುಸಿದರೆ, ಆಸ್ಟ್ರೇಲಿಯ 14 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 134 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ನಾಯಕ ಆರನ್‌ ಫಿಂಚ್‌ 61 ರನ್‌ (40 ಎಸೆತ, 4 ಬೌಂಡರಿ, 4 ಸಿಕ್ಸರ್‌) ಮತ್ತು ಡೇವಿಡ್‌ ವಾರ್ನರ್‌ 70 ರನ್‌ (44 ಎಸೆತ, 9 ಬೌಂಡರಿ) ಹೊಡೆದು ಅಜೇಯರಾಗಿ ಉಳಿದರು.

ಲಂಕಾ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದವರು ವೇಗಿಗಳಾದ ಜೋಶ್‌ ಹ್ಯಾಝಲ್‌ವುಡ್‌ (16ಕ್ಕೆ 4) ಮತ್ತು ಮಿಚೆಲ್‌ ಸ್ಟಾರ್ಕ್‌ (26ಕ್ಕೆ 3).

Advertisement

12 ಓವರ್‌ ಅಂತ್ಯದ ತನಕ ಶ್ರೀಲಂಕಾ ಸುಸ್ಥಿತಿಯಲ್ಲೇ ಇತ್ತು. ಆಗ ಶಣಕ ಪಡೆ 2 ವಿಕೆಟಿಗೆ 100 ರನ್‌ ಪೇರಿಸಿ ಸವಾಲಿನ ಮೊತ್ತದ ಸೂಚನೆ ನೀಡಿತ್ತು. ಆದರೆ ಹ್ಯಾಝಲ್‌ವುಡ್‌ ಒಂದೇ ಓವರ್‌ನಲ್ಲಿ ಕುಸಲ್‌ ಮೆಂಡಿಸ್‌, ಭನುಕ ರಾಜಪಕ್ಸ ಮತ್ತು ದಸುನ್‌ ಶಣಕ ವಿಕೆಟ್‌ ಉರುಳಿಸಿ ಲಂಕೆಯನ್ನು ಸಂಕಷ್ಟಕ್ಕೆ ತಳ್ಳಿದರು. ಮತ್ತೆ ಅದು ಚೇತರಿಸಿಕೊಳ್ಳಲೇ ಇಲ್ಲ. ಈ ಸಾಧನೆಗಾಗಿ ಹ್ಯಾಝಲ್‌ವುಡ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ 19.3 ಓವರ್‌ಗಳಲ್ಲಿ 128 (ಅಸಲಂಕ 38, ನಿಸ್ಸಂಕ 36, ಗುಣತಿಲಕ 26, ಹ್ಯಾಝಲ್‌ವುಡ್‌ 16ಕ್ಕೆ 4, ಸ್ಟಾರ್ಕ್‌ 26ಕ್ಕೆ 3). ಆಸ್ಟ್ರೇಲಿಯ-14 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 134 (ವಾರ್ನರ್‌ ಔಟಾಗದೆ 70, ಫಿಂಚ್‌ ಔಟಾಗದೆ 61).

ಪಂದ್ಯಶ್ರೇಷ್ಠ: ಜೋಶ್‌ ಹ್ಯಾಝಲ್‌ವುಡ್‌.

Advertisement

Udayavani is now on Telegram. Click here to join our channel and stay updated with the latest news.

Next