Advertisement

ಭಾರತದ 20 ಪ್ರಾಚೀನ ಶಿಲ್ಪ-ಕಲಾಕೃತಿಗಳ ಮರಳಿಸಿದ ಆಸ್ಟ್ರೇಲಿಯಾ

08:55 PM Mar 21, 2022 | Team Udayavani |

ನವದೆಹಲಿ: ಭಾರತದಿಂದ ಅಕ್ರಮವಾಗಿ ಬೇರೆ ದೇಶಗಳಿಗೆ ಒಯ್ಯಲಾಗಿದ್ದ ಪುರಾತನ ವಸ್ತುಗಳನ್ನು ಮರಳಿ ಸ್ವದೇಶಕ್ಕೆ ತರುವ ಪ್ರಕ್ರಿಯೆ ಮುಂದುವರಿದಿದೆ. ಅದರಂತೆ, ಸೋಮವಾರ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ 29 ಶಿಲ್ಪಗಳು ಹಾಗೂ ಕಲಾಕೃತಿಗಳನ್ನು ಆಸ್ಟ್ರೇಲಿಯಾ ಮರಳಿಸಿದೆ.

Advertisement

ಭಾರತ-ಆಸ್ಟ್ರೇಲಿಯಾ ಶೃಂಗಕ್ಕೂ ಮುನ್ನವೇ ಈ ಎಲ್ಲ ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲಾಗಿದೆ. ವರ್ಚುವಲ್‌ ಶೃಂಗಕ್ಕೆ ತೆರಳುವ ಮೊದಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಎಲ್ಲ ಕಲಾಕೃತಿಗಳನ್ನೂ ಪರಿಶೀಲಿಸಿದ್ದಾರೆ. ಜತೆಗೆ, ಇವುಗಳನ್ನು ಭಾರತಕ್ಕೆ ಮರಳಿಸಲು ಕ್ರಮ ಕೈಗೊಂಡ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

ವಿವಿಧ ರಾಜ್ಯಗಳ ಶಿಲ್ಪಗಳು
ಭಾರತಕ್ಕೆ ಮರಳಿರುವ ಶಿಲ್ಪಗಳು ಮತ್ತು ಕಲಾಕೃತಿಗಳೆಲ್ಲವೂ ಮರಳುಗಲ್ಲು, ಅಮೃತಶಿಲೆ, ಕಂಚು, ಹಿತ್ತಾಳೆ ಮತ್ತು ಕಾಗದದಿಂದ ತಯಾರಿಸಿರುವಂಥದ್ದು. ಇವುಗಳು ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ ಮೂಲದ ಶಿಲ್ಪಗಳಾಗಿವೆ.

ಇದನ್ನೂ ಓದಿ:ಎಲ್ಲೋಡು ಗ್ರಾಮ ಪಂಚಾಯತ್ ಸುತ್ತಮುತ್ತ ಚಿರತೆಗಳ ಭೀತಿ ; ಭಯದಲ್ಲಿ ಜನತೆ

ಯಾವ್ಯಾವ ಶಿಲ್ಪಗಳಿವೆ?
9 ಅಥವಾ 10ನೇ ಶತಮಾನದ ಶಿವ ಭೈರವ, 12ನೇ ಶತಮಾನದ ಬಾಲ ಸಂತ ಸಂಬಂದಾರ್‌, ಕುಳಿತಿರುವ ಭಂಗಿಯಲ್ಲಿರುವ ರಾಜಸ್ಥಾನದ ಜೈನ ಮುನಿಯ ಶಿಲ್ಪ, ಮಹಾರಾಜ ಶ್ರೀ ಕಿಶನ್‌ ಪರ್ಶದ್‌ ಯಾಮಿನ್‌ ಲಾಲಾ ದೀನ್‌ ದಯಾಳ್‌ ಅವರ ಕಲಾಕೃತಿ, ಹೀರಾಲಾಲ್‌ ಎ ಗಾಂಧಿಯರ ಭಾವಚಿತ್ರವಿರುವ ಕಲಾಕೃತಿ ಇತ್ಯಾದಿ.

Advertisement

6 ವಿಭಾಗಗಳಾಗಿ ವಿಂಗಡಣೆ
ಈ ಪುರಾತನ ವಸ್ತುಗಳನ್ನು 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ, ಶಿವ ಮತ್ತು ಅವನ ಅನುಯಾಯಿಗಳು, ಶಕ್ತಿಯ ಆರಾಧನೆ, ವಿಷ್ಣು ಮತ್ತು ವಿಷ್ಣುವಿನ ಅವತಾರಗಳು, ಜೈನ ಸಂಪ್ರದಾಯ, ಕಲಾಕೃತಿ ಹಾಗೂ ಅಲಂಕಾರಿಕ ವಸ್ತುಗಳು. ಇವುಗಳೆಲ್ಲವೂ 9-10ನೇ ಶತಮಾನಗಳಷ್ಟು ಹಳೆಯ ಕಲಾಕೃತಿಗಳಾಗಿವೆ.

ಇತರ ರಾಷ್ಟ್ರಗಳಿಂದ ಬಂದ ಕಲಾಕೃತಿಗಳು
157- ಅಮೆರಿಕದಿಂದ ಹಿಂದಕ್ಕೆ ಬಂದವು
200-ನಾನಾ ದೇಶಗಳಿಂದ ಈವರೆಗೆ ಭಾರತಕ್ಕೆ ಬಂದ ಕಲಾಕೃತಿಗಳು

 

 

Advertisement

Udayavani is now on Telegram. Click here to join our channel and stay updated with the latest news.

Next