ಇಂದೋರ್: ಭಾರತ ವಿರುದ್ಧದ ಬಾರ್ಡರ್-ಗಾವಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಅದರೊಂದಿಗೆ ಜೂನ್ ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮೊದಲ ತಂಡವಾಗಿ ಅರ್ಹತೆ ಪಡೆದಿದೆ.
ಪಂದ್ಯಕ್ಕೂ ಮೊದಲು, ಆಸ್ಟ್ರೇಲಿಯಾವು ಶೇಕಡಾ 66.67 ಅಂಕಗಳನ್ನು ಹೊಂದಿತ್ತು. ಭಾರತವು 64.06 ಶೇಕಡಾ ಅಂಕಗಳನ್ನು ಹೊಂದಿತ್ತು. ಇಂದೋರ್ ಪಂದ್ಯದ ಬಳಿಕ ಇದೀಗ, ಸ್ಟೀವ್ ಸ್ಮಿತ್ ನೇತೃತ್ವದ ಕಾಂಗರೂ ತಂಡವು ಶೇಕಡಾ 68.52 ಅಂಕಗಳನ್ನು ಹೊಂದಿದ್ದು, ರೋಹಿತ್ ಶರ್ಮಾ ನೇತೃತ್ವದ ಭಾರತ ಶೇಕಡಾ 60.29 ಅಂಕಗಳಿಗೆ ಇಳಿದಿದೆ. ಆದರೆ ಎರಡನೇ ಸ್ಥಾನದಲ್ಲಿದೆ.
ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಮಾರ್ಚ್ 9 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಬೇಕಾಗಿದೆ.
ಇದನ್ನೂ ಓದಿ:ನಟ ಶಾರುಖ್ ಖಾನ್ ಐಶಾರಾಮಿ ಬಂಗಲೆ ಪ್ರವೇಶಿಸಲು ಯತ್ನ; ಇಬ್ಬರು ಯುವಕರ ಬಂಧನ
ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ (ಶೇಕಡಾ 53.33) ಈ ತಿಂಗಳ ಕೊನೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡುತ್ತಿದೆ. ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಸೋತರೆ ಮತ್ತು ಸರಣಿಯು 2-2 ರಿಂದ ಅಂತ್ಯಗೊಂಡರೆ, ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ 2-0 ನಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ, ರೋಹಿತ್ ಶರ್ಮಾ ತಂಡವು ಫೈನಲ್ ಗೆ ಅರ್ಹತೆ ಪಡೆಯುವುದಿಲ್ಲ.
ಇಂದೋರ್ ಪಂದ್ಯದಲ್ಲಿ ಗೆಲುವಿಗೆ 76 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯಾ ಕೇವಲ ಒಂದು ವಿಕೆಟ್ ಕಳದುಕೊಂಡು ಜಯ ಸಾಧಿಸಿತು. ಈ ಮೂಲಕ ಮೊದಲೆರಡು ಪಂದ್ಯ ಗೆದ್ದಿದ್ದ ಟೀಂ ಇಂಡಿಯಾಗೆ ತಿರುಗೇಟು ನೀಡಿದೆ.