Advertisement

ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್ ಪಂದ್ಯವನ್ನು ಮುಂದೂಡಿದ ಕ್ರಿಕೆಟ್ ಆಸ್ಟ್ರೇಲಿಯಾ

11:14 AM Nov 05, 2021 | Team Udayavani |

ಮೆಲ್ಬೋರ್ನ್: ಅಫ್ಘಾನಿಸ್ಥಾನ ವಿರುದ್ಧ ಈ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಮುಂದೂಡಿದೆ. ಅಫ್ಘಾನ್ ನಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರಿಗೆ ಕ್ರೀಡೆಯನ್ನು ಆಡುವುದನ್ನು ನಿಷೇಧಿಸಿದ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಂಡಿದೆ.

Advertisement

ಚರ್ಚೆಯ ಬಳಿಕ ಈ ತಿಂಗಳು ಹೋಬರ್ಟ್‌ನಲ್ಲಿ ನಡೆಯಬೇಕಿದ್ದ ಪುರುಷರ ಟೆಸ್ಟ್ ಅನ್ನು ಯೋಜಿಸಿದಂತೆ ಮುಂದುವರಿಯುವುದಿಲ್ಲ ಎಂದು ನಿರ್ಧರಿಸಲಾಯಿತು ಎಂದು ಆಸ್ಟ್ರೇಲಿಯಾದ ಕ್ರಿಕೆಟ್ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ ನಲ್ಲಿ ಅಫ್ಘಾನಿಸ್ತಾನದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ, ಹಿರಿಯ ತಾಲಿಬಾನ್ ನಾಯಕರು ಅಫ್ಘಾನ್ ಮಹಿಳೆಯರು ಇನ್ನು ಮುಂದೆ ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯನ್ನು ಆಡುವುದಿಲ್ಲ ಎಂದು ಹೇಳಿದ್ದರು. ಇಸ್ಲಾಮಿಕ್ ಕಾನೂನಿನ ಆಡಳಿತದಡಿಯಲ್ಲಿ ಮಹಿಳೆಯರಿಗೆ ಶಾಲೆಗೆ ಹೋಗುವುದನ್ನು ಮತ್ತು ಇತರ ಸಾರ್ವಜನಿಕ ಕ್ಷೇತ್ರಗಳಿಂದ ಕೂಡ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ವಿಂಡೀಸ್ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ

ಮಹಿಳಾ ಕ್ರಿಕೆಟ್ ಮೇಲಿನ ನಿಷೇಧವು ಜಾರಿಯಲ್ಲಿದ್ದರೆ ಟೆಸ್ಟ್ ಅನ್ನು ರದ್ದುಗೊಳಿಸಬೇಕೆಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗರು ಈ ಹಿಂದೆಯೇ ಸೂಚಿಸಿದ್ದರು.

Advertisement

ಅಫ್ಘಾನಿಸ್ತಾನದ ಕ್ರಿಕೆಟಿಗರು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ಆದರೆ ಮುಂಬರುವ ನ್ಯೂಜಿಲೆಂಡ್‌ ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್‌ನಲ್ಲಿ ದೇಶವು ತಂಡವನ್ನು ಕಣಕ್ಕಿಳಿಸಲು ವಿಫಲವಾದರೆ ಅವರು ಅಂತರರಾಷ್ಟ್ರೀಯ ನಿಷೇಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next