ಪರ್ತ್: ಆಸ್ಟ್ರೇಲಿಯ- ಪಾಕಿಸ್ಥಾನ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಗೆ ಗುರುವಾರ ಪರ್ತ್‌ನಲ್ಲಿ ಚಾಲನೆ ಲಭಿಸಲಿದೆ. ಎರಡೂ ತಂಡಗಳು ತಮ್ಮ ಆಡುವ ಬಳಗವನ್ನು ಪ್ರಕಟಿಸಿದ್ದು, ಪಾಕ್ ತಂಡದಲ್ಲಿ ಇಬ್ಬರು ಪದಾರ್ಪಣೆ ಮಾಡ ಲಿದ್ದಾರೆ. ಹಾಗೆಯೇ ಟ್ರ್ಯಾವಿಸ್ ಹೆಡ್ ಮರಳಿ ಆಸ್ಟ್ರೇಲಿಯ ತಂಡದ ಉಪನಾಯಕರಾಗಿ ನೇಮಿಸಲ್ಪಟ್ಟಿದ್ದಾರೆ.
ಪೇಸ್ ಬೌಲರ್‌ಗಳಾದ ಆಮೀರ್ ಜಮಾಲ್ ಮತ್ತು ಖುರ್ರಂ ಶಾಜಾದ್ ಪಾಕ್ ತಂಡದ ಹೊಸಬರು. ಮಾಜಿ ನಾಯಕ ಸಫìರಾಜ್ ಅಹ್ಮದ್ ಕೀಪರ್ ಆಗಿದ್ದಾರೆ. ಈ ರೇಸ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಹಿಂದುಳಿದರು. ಶಾನ್ ಮಸೂದ್ ಅವರಿಗೆ ಮೊದಲ ಸಲ ನಾಯಕತ್ವದ ಅಗ್ನಿಪರೀಕ್ಷೆ ಎದುರಾಗಿದೆ. ಈವರೆಗೆ 12 ಸಲ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿರುವ ಪಾಕಿಸ್ಥಾನ ಒಮ್ಮೆಯೂ ಸರಣಿ ಗೆದ್ದಿಲ್ಲ.
ಸ್ಟೀವನ್ ಸ್ಮಿತ್ ನಾಯಕರಾಗಿದ್ದ ಸಮಯ ದಲ್ಲಿ ಟ್ರ್ಯಾವಿಸ್ ಹೆಡ್ ಆಸೀಸ್ ತಂಡದ ಉಪನಾಯಕರಾಗಿದ್ದರು. ಆಸ್ಟ್ರೇ ಲಿಯ ಕೊನೆಯ ಟೆಸ್ಟ್ ಪಂದ್ಯ ವನ್ನು ಜುಲೈ ಯಲ್ಲಿ ಇಂಗ್ಲೆಂಡ್ ವಿರುದ್ಧ ಆಡಿತ್ತು. ಆಗ ತಂಡದಲ್ಲಿದ್ದ ಟಾಡ್ ಮರ್ಫಿ ಬದಲು ನಥನ್ ಲಿಯಾನ್ ಮರಳಿ ಆಡುವ ಬಳಗ ವನ್ನು ಸೇರಿ ಕೊಂಡಿದ್ದಷ್ಟೇ ಆಸೀಸ್ ಹನ್ನೊಂ ದರ ಬಳಗದಲ್ಲಿ ಸಂಭವಿಸಿದ ಬದಲಾವಣೆ.
ಆಸ್ಟ್ರೇಲಿಯ: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್. ನಥನ್ ಲಿಯಾನ್, ಹೇಝಲ್‌ವುಡ್.
ಪಾಕಿಸ್ಥಾನ: ಶಾನ್ ಮಸೂದ್ (ನಾಯಕ), ಇಮಾಮ್ ಉಲ್ ಹಕ್, ಅಬ್ದುಲ್ಲ ಶಫೀಕ್, ಬಾಬರ್ ಆಜಂ, ಸೌದ್ ಶಕೀಲ್, ಸರ್ಫ್ ರಾಜ್ ಅಹ್ಮದ್, ಸಲ್ಮಾನ್ ಅಲಿ ಆಘಾ, ಫಾಹೀಮ್ ಅಶ್ರಫ್, ಶಾಹೀನ್ ಶಾ ಅಫ್ರಿದಿ, ಅಮೀರ್ ಜಮಾಲ್, ಖುರ್ರಂ ಶಾಜಾದ್.