ಇಂದು ನಡೆದ ರೋಚಕ ಫೈನಲ್ ಕಾದಾಟದಲ್ಲಿ ಅನುಭವಿ ಜೊಕೊವಿಕ್ ಅವರು ಆಸ್ಟ್ರಿಯಾ ಆಟಗಾರ ಡೊಮಿನಿಕ್ ಥೀಮ್ ಅವರಿಂದ ಪ್ರಬಲ ಪೈಪೋಟಿಯನ್ನೇ ಎದುರಿಸಬೆಕಾಯಿತು. ಅಂತಿಮವಾಗಿ 6-4, 4-6, 2-6, 6-3, 6-4 ಸೆಟ್ ಗಳಿಂದ ಮಣಿಸುವ ಮೂಲಕ ತಮ್ಮ ಎಂಟನೇ ಆಸ್ಟ್ರೇಲಿಯಾ ಓಪನ್ ಕಿರೀಟವನ್ನು ಮುಡಿಗೆರಿಸಿಕೊಂಡರು.
Advertisement
ಇದು ಜೊಕೊವಿಕ್ ಅವರ 17ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲುವಾಗಿದೆ. 19 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ರಫೆಲ್ ನಡಾಲ್ ಮತ್ತು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ರೋಜರ್ ಫೆಡರರ್ ಅವರು ಮೊದಲ ಎರಡು ಸ್ಥಾನಗಳಿದ್ದಾರೆ.
32 ವರ್ಷ ಪ್ರಾಯದ ಸರ್ಬಿಯಾದ ಈ ಆಟಗಾರ 2008, 2011, 2012, 2013, 2015, 2016, 2019 ಮತ್ತು 2020ರಲ್ಲಿ ಆಸ್ಟ್ರೇಲಿಯಾ ಓಪನ್ ಕೂಟದ ಚಾಂಪಿಯನ್ ಆಗಿದ್ದಾರೆ.
Related Articles
Advertisement