Advertisement
ಉದ್ದೇಶವೇನು?:ಚಂದ್ರನಲ್ಲಿ ಇಳಿದು ಅಡ್ಡಾಡುವ ರೋವರ್, ಅಲ್ಲಿ ಆಮ್ಲಜನಕ ಮಿಶ್ರಿತ ಮಣ್ಣನ್ನು ಸಂಗ್ರಹಿಸಲಿದೆ. ಭವಿಷ್ಯದಲ್ಲಿ ಈ ಮಣ್ಣಿನಿಂದ ದೀರ್ಘ ಕಾಲಾವಧಿವರೆಗೆ ಬಾಹ್ಯಾಕಾಶದಲ್ಲಿ ಉಳಿದುಕೊಳ್ಳುವ ಗಗನಯಾತ್ರಿಗಳಿಗೆ ಸೂಕ್ತವಾದ ಪರಿಕರಗಳು, ವೈಜ್ಞಾನಿಕ ವ್ಯವಸ್ಥೆಗಳನ್ನು ಕಲ್ಪಿಸಲು ನೆರವಾಗಲಿದೆ. ಚಂದ್ರನಲ್ಲಿನ ಕಲ್ಲುಬಂಡೆಗಳ ಕೆರೆದು ಅವುಗಳ ಮೇಲ್ಮೈ ನ ಸ್ಯಾಂಪಲ್ ಸಂಗ್ರಹಿಸಲಿರುವ ಇದು ಚಂದ್ರನಲ್ಲಿರಬಹುದಾದ ನೀರನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.
60x60x50 ಸೆಂ.ಮೀ. ಯಂತ್ರವು ಇದಾಗಿರಲಿದ್ದು, ಇದನ್ನು ಜಪಾನ್‌ನ ಐಸ್ಪೇಸ್ ಎಂಬ ಕಂಪನಿ ನಿರ್ಮಿಸಿರುವ ಹಕುಟೋ ಎಂಬ ಲ್ಯಾಂಡರ್‌ನಲ್ಲಿ ಅಳವಡಿಸಲಾಗುತ್ತದೆ. ರೋವರನ್ನೂ ಐಸ್ಪೇಸ್ ಕಂಪನಿಯೇ ನಿರ್ಮಿಸಿದ್ದು, ಅದರಲ್ಲಿ ಕ್ಯಾಮೆರಾಗಳು, ಸೆನ್ಸರ್‌ಗಳು, ಮಣ್ಣನ್ನು ಸಂಗ್ರಹಿಸಲು ಯಾಂತ್ರೀಕೃತ ಕೈ ಇರುತ್ತದೆ ಎಂದು ಹೇಳಲಾಗಿದೆ.