Advertisement
ಇನ್ನು ಹದಿನೈದೇ ತಿಂಗಳಲ್ಲಿ 7ನೇ ಟಿ20 ವನಿತಾ ವಿಶ್ವಕಪ್ ನಡೆಯಲಿದೆ. 10 ತಂಡಗಳ ನಡುವಿನ ಈ ಪಂದ್ಯಾವಳಿ 2020ರ ಫೆ. 21ರಿಂದ ಮಾ. 8ರ ತನಕ ಸಾಗಲಿದೆ. ಒಟ್ಟು 23 ಪಂದ್ಯಗಳನ್ನು ಆಡಲಾಗುವುದು. ಅದೇ ವರ್ಷದ ಅ. 18ರಿಂದ ನ. 15ರ ತನಕ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, 45 ಪಂದ್ಯಗಳನ್ನು ಆಡಲಾಗುವುದು. ಆಸ್ಟ್ರೇಲಿಯದ 8 ನಗರಗಳ 13 ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಲಾಗುವುದು. ಒಂದೇ ವರ್ಷ, ಒಂದೇ ದೇಶದ ಆತಿಥ್ಯದಲ್ಲಿ ಈ 2 ವಿಶ್ವಕಪ್ ಪಂದ್ಯಾವಳಿಗಳನ್ನು ಪ್ರತ್ಯೇಕವಾಗಿ ನಡೆಸುವುದು ಇದೇ ಮೊದಲು.
ಇಲ್ಲಿಯ ತನಕ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ “ವರ್ಲ್ಡ್ ಟಿ20′ ಎಂಬ ಹೆಸರನ್ನು ಹೊಂದಿತ್ತು. 2020ರಿಂದ ಇದು “ಟಿ20 ವರ್ಲ್ಡ್ ಕಪ್’ ಎಂದು ಕರೆಯಲ್ಪಡಲಿದೆ ಎಂಬುದಾಗಿ ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.