Advertisement

ಟಿ20: ವೈಟ್‌ವಾಶ್‌ ತಪ್ಪಿಸಿಕೊಂಡ ಶ್ರೀಲಂಕಾ

11:45 PM Feb 20, 2022 | Team Udayavani |

ಮೆಲ್ಬರ್ನ: ಆಸ್ಟ್ರೇಲಿಯ ಎದುರಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 5 ವಿಕೆಟ್‌ ಜಯ ಸಾಧಿಸಿದ ಶ್ರೀಲಂಕಾ ವೈಟ್‌ವಾಶ್‌ ಅವಮಾನದಿಂದ ಪಾರಾಗಿದೆ. ಮೊದಲ ನಾಲ್ಕೂ ಪಂದ್ಯಗಳನ್ನು ಜಯಿಸಿದ್ದ ಆಸೀಸ್‌ ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌ ಹಾಕಿತ್ತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 6 ವಿಕೆಟಿಗೆ 154 ರನ್‌ ಮಾಡಿದರೆ, ಶ್ರೀಲಂಕಾ 19.5 ಓವರ್‌ಗಳಲ್ಲಿ 5 ವಿಕೆಟಿಗೆ 155 ರನ್‌ ಬಾರಿಸಿತು.

ಕೇನ್‌ ರಿಚರ್ಡ್‌ಸನ್‌ ಪಾಲಾದ ಅಂತಿಮ ಓವರ್‌ನಲ್ಲಿ ಲಂಕಾ ಜಯಕ್ಕೆ 9 ರನ್‌ ಬೇಕಿತ್ತು.

ದಸುನ್‌ ಶಣಕ 3ನೇ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಲೆಕ್ಕಾಚಾರವನ್ನು ಸರಳಗೊಳಿಸಿದರು. ಚೇಸಿಂಗ್‌ ವೇಳೆ ಅಜೇಯ 69 ರನ್‌ ಮಾಡಿದ ಆರಂಭಕಾರ ಕುಸಲ್‌ ಮೆಂಡಿಸ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಸರಣಿಶ್ರೇಷ್ಠರೆನಿಸಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-6 ವಿಕೆಟಿಗೆ 154 (ವೇಡ್‌ ಔಟಾಗದೆ 43, ಮ್ಯಾಕ್ಸ್‌ವೆಲ್‌ 29, ಚಮೀರ 30ಕ್ಕೆ 2, ಕುಮಾರ 34ಕ್ಕೆ 2). ಶ್ರೀಲಂಕಾ-19.5 ಓವರ್‌ಗಳಲ್ಲಿ 5 ವಿಕೆಟಿಗೆ 155 (ಮೆಂಡಿಸ್‌ ಔಟಾಗದೆ 69, ಶಣಕ 35, ಅಸಲಂಕ 20, ಕೇನ್‌ ರಿಚರ್ಡ್‌ಸನ್‌ 28ಕ್ಕೆ 2).

Advertisement

ಪಂದ್ಯಶ್ರೇಷ್ಠ: ಕುಸಲ್‌ ಮೆಂಡಿಸ್‌. ಸರಣಿಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್‌.

 

Advertisement

Udayavani is now on Telegram. Click here to join our channel and stay updated with the latest news.

Next