Advertisement

Ashes23 ಆಸ್ಟ್ರೇಲಿಯಾವು ಕ್ರೀಡಾ ಸ್ಪೂರ್ತಿ ತೋರಿಸಲಿಲ್ಲ: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಾಕ್

11:20 AM Jul 04, 2023 | Team Udayavani |

ಲಂಡನ್: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಾಕ್ ಅವರು ಆ್ಯಶಸ್ ಸರಣಿಯ ಲಾರ್ಡ್ಸ್ ಟೆಸ್ಟ್ ಪಂದ್ಯದ ಸೋಲಿನ ಬಳಿಕ ನಾಯಕ ಬೆನ್ ಸ್ಟೋಕ್ಸ್ ಬೆಂಬಲಕ್ಕೆ ನಿಂತಿದ್ದಾರೆ. ವಿಕೆಟ್ ಕೀಪರ್ ಜಾನಿ ಬೆರಿಸ್ಟೋ ಅವರ ವಿವಾದಾತ್ಮಕ ಸ್ಟಂಪೌಟ್ ಬಳಿಕ ಪ್ರಧಾನಿ ಸುನಾಕ್ ಇಂಗ್ಲೆಂಡ್ ನಾಯಕನ ಬೆಂಬಲಕ್ಕೆ ಬಂದಿದ್ದಾರೆ.

Advertisement

ಲಾರ್ಡ್ಸ್ ಪಂದ್ಯದ ಕೊನೆಯ ದಿನದಾಟದ ವೇಳೆ ಗ್ರೀನ್ ಎಸೆತವನ್ನು ಬೇರಿಸ್ಟೊ ಡಕ್ ಮಾಡಿದರು. ಚೆಂಡು ಕೀಪರ್ ಕೈ ಸೇರಿದ ಬಳಿಕ ಬೇರಿಸ್ಟೋ ನಾನ್ ಸ್ಟ್ರೈಕರ್ ಕಡೆಗೆ ತೆರಳಿದರು. ಈ ವೇಳೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಚೆಂಡನ್ನು ನೇರ ವಿಕೆಟ್ ಗೆ ಎಸೆದರು. ಬೇರಿಸ್ಟೋ ಕ್ರೀಸ್ ನಲ್ಲಿ ಇರದ ಕಾರಣ ಅವರು ಔಟಾದರು. ಇದು ವಿವಾದಕ್ಕೆ ಕಾರಣವಾಯಿತು.

ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ಬೆನ್ ಸ್ಟೋಕ್ಸ್, ನಾನು ಈ ರೀತಿಯಲ್ಲಿ ಬ್ಯಾಟರ್ ನನ್ನು ಔಟ್ ಮಾಡಲು ಬಯಸುವುದಿಲ್ಲ ಎಂದಿದ್ದರು. ಈ ರೀತಿಯಲ್ಲಿ ನಾನು ಗೆಲ್ಲಲು ಬಯಸುವುದಿಲ್ಲ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:KGF ರಾಕಿ ಮುಳುಗಿದ ಸಮಯಕ್ಕೆ ʼಸಲಾರ್‌ʼ ಟೀಸರ್‌ ರಿಲೀಸ್:‌ ಎರಡು ಕಥೆಗೆ ಇದೆಯಾ ಲಿಂಕ್?

ಪ್ರಧಾನಿ ಸುನಾಕ್ ಕೂಡಾ ಸ್ಟೋಕ್ಸ್ ಮಾತಿಗೆ ಸಹಮತ ಸೂಚಿಸಿದ್ದು, ‘ಆಸ್ಟ್ರೇಲಿಯಾ ತಂಡವು ಕ್ರೀಡಾ ಸ್ಪೂರ್ತಿ ತೋರಿಸಲಿಲ್ಲ’ ಎಂದಿದ್ದಾರೆ.

Advertisement

“ಪ್ರಧಾನಿಯವರು ಬೆನ್ ಸ್ಟೋಕ್ಸ್ ಗೆ ಸಹಮತ ನೀಡಿದರು. ಅವರು ಆಸ್ಟ್ರೇಲಿಯಾದ ರೀತಿಯಲ್ಲಿ ಪಂದ್ಯವನ್ನು ಗೆಲ್ಲಲು ಬಯಸುವುದಿಲ್ಲ ಎಂದು ಅವರು ಹೇಳಿದರು” ಎಂದು ವಕ್ತಾರರು ಉಲ್ಲೇಖಿಸಿದ್ದಾರೆ.

ಅಲ್ಲದೆ ಸುನಾಕ್ ಅವರು ಬೆನ್ ಸ್ಟೋಕ್ಸ್ ಅವರ ಬ್ಯಾಟಿಂಗ್ ಸಾಹಸವನ್ನು ಮೆಚ್ಚಿದ್ದರು. ರನ್ ಚೇಸ್ ವೇಳೆ ಸ್ಟೋಕ್ಸ್ 155 ರನ್ ಗಳಿಸಿದ್ದರು. ಸ್ಟೋಕ್ಸ್ ಸಾಹಸದ ಹೊರತಾಗಿಯೂ ಇಂಗ್ಲೆಂಡ್ ತಂಡವು 43 ರನ್ ಅಂತರದಿಂದ ಸೋಲನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next