Advertisement

24 ವರ್ಷಗಳ ನಂತರ ಪಾಕಿಸ್ಥಾನಕ್ಕೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

04:38 PM Feb 27, 2022 | Team Udayavani |

ಇಸ್ಲಾಮಾಬಾದ್ : 24 ವರ್ಷಗಳ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ಥಾನ ಪ್ರವಾಸಕ್ಕೆ ಆಗಮಿಸಿದ್ದು,ತಂಡದ 18 ಸದಸ್ಯರು ಭಾನುವಾರ ಬೆಳಗಿನ ಜಾವ ಚಾರ್ಟರ್ಡ್ ವಿಮಾನದಲ್ಲಿ ಇಸ್ಲಾಮಾಬಾದ್ ಗೆ ಬಂದಿಳಿದಿದ್ದಾರೆ.

Advertisement

ಆಸೀಸ್ ಉಪನಾಯಕ ಸ್ಟೀವ್ ಸ್ಮಿತ್, ಇಸ್ಲಾಮಾಬಾದ್ ಮೂಲದ ಉಸ್ಮಾನ್ ಖ್ವಾಜಾ ಮತ್ತು ಸ್ಪಿನ್ನರ್‌ಗಳಾದ ಆಷ್ಟನ್ ಅಗರ್ ಮತ್ತು ಮಿಚೆಲ್ ಸ್ವೆಪ್ಸನ್ ಶುಕ್ರವಾರ ಪ್ರಾರಂಭವಾಗುವ ಮೂರು-ಟೆಸ್ಟ್ ಪಂದ್ಯಗಳ ಅಭಿಯಾನಕ್ಕಾಗಿ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

ಈ ಪ್ರವಾಸವು ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ಯಾಟ್ ಕಮ್ಮಿನ್ಸ್ ಅವರ ಮೊದಲ ಸಾಗರೋತ್ತರ ಟೆಸ್ಟ್ ಆಗಿದ್ದು, ಈ ತಿಂಗಳ ಆರಂಭದಲ್ಲಿ ತರಬೇತುದಾರರ ರಾಜೀನಾಮೆಯ ನಂತರ ಜಸ್ಟಿನ್ ಲ್ಯಾಂಗರ್ ಅವರ ನವ ಯುಗದ ಆರಂಭವಾಗಿದೆ.

ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ಟೆಸ್ಟ್ ಸರಣಿಗೆ ಮಧ್ಯಂತರ ಆಧಾರದ ಮೇಲೆ ತಂಡವನ್ನು ಮುನ್ನಡೆಸುತ್ತಿದ್ದಾರೆ, ರಾವಲ್ಪಿಂಡಿಯಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಏಕೈಕ ಟಿ 20 ಪಂದ್ಯದ ಮೂಲಕ ಪ್ರವಾಸ ಕೊನೆಗೊಳ್ಳುತ್ತದೆ.

2009 ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್‌ನ ಮೇಲೆ ಇಸ್ಲಾಮಿಕ್ ಉಗ್ರಗಾಮಿಗಳು ದಾಳಿ ನಡೆಸಿ, ಆರು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಹತ್ಯೆಗೈದ ನಂತರ ಅಂತರರಾಷ್ಟ್ರೀಯ ತಂಡಗಳು ಹೆಚ್ಚಾಗಿ ಪಾಕಿಸ್ಥಾನದಿಂದ ದೂರ ಉಳಿದಿದ್ದವು.

Advertisement

ಆಸ್ಟ್ರೇಲಿಯಾ ತಂಡವು 1998 ರಲ್ಲಿ ಪಾಕಿಸ್ಥಾನದಲ್ಲಿ ಕೊನೆಯದಾಗಿ ಆಡಿದ್ದು, ಮೂರು ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಮೂರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆತಿಥೇಯರನ್ನು ಸೋಲಿಸಿತ್ತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ರಾವಲ್ಪಿಂಡಿಯಲ್ಲಿ ನಡೆದಿದ್ದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಮಾಡುವ ಮೊದಲು ಭದ್ರತಾ ಭಯದಿಂದಾಗಿ ನ್ಯೂಜಿಲೆಂಡ್ ತನ್ನ ಸೀಮಿತ ಓವರ್‌ಗಳ ಪಾಕಿಸ್ಥಾನ ಪ್ರವಾಸವನ್ನು ಸ್ಥಗಿತಗೊಳಿಸಿದ್ದನ್ನು ಸ್ಮರಿಸಬಹುದಾಗಿದೆ.

ಪಂದ್ಯಗಳು

4-8 ಮಾರ್ಚ್ – 1 ನೇ ಟೆಸ್ಟ್, ರಾವಲ್ಪಿಂಡಿ
12-16 ಮಾರ್ಚ್ – 2 ನೇ ಟೆಸ್ಟ್, ಕರಾಚಿ
21-25 ಮಾರ್ಚ್ – 3 ನೇ ಟೆಸ್ಟ್, ಲಾಹೋರ್

ಮಾರ್ಚ್ 29 – 1 ನೇ ಏಕದಿನ , ರಾವಲ್ಪಿಂಡಿ
ಮಾರ್ಚ್ 31 – 2 ನೇ ಏಕದಿನ, ರಾವಲ್ಪಿಂಡಿ
ಏಪ್ರಿಲ್ 2 – 3 ನೇ ಏಕದಿನ ರಾವಲ್ಪಿಂಡಿ

5 ಏಪ್ರಿಲ್ – ಟಿ 20, ರಾವಲ್ಪಿಂಡಿ

Advertisement

Udayavani is now on Telegram. Click here to join our channel and stay updated with the latest news.

Next