Advertisement
ಕೋವಿಡ್-19 ಕಾರಣ “ಕ್ರಿಕೆಟ್ ಆಸ್ಟ್ರೇಲಿಯ’ ಶೇ. 15ರಷ್ಟು ಹುದ್ದೆ ಗಳನ್ನು ಕಡಿತಗೊಳಿಸಲು ನಿರ್ಧರಿಸಿದ ಪರಿಣಾಮ ಗ್ರೇಮ್ ಹಿಕ್ ಅವರು ಕೆಲಸ ಕಳೆದುಕೊಳ್ಳಬೇಕಾಯಿತು.
“ಗ್ರೇಮ್ ಹಿಕ್ ಅಮೋಘ ರೀತಿಯಲ್ಲೇ ತಮ್ಮ ಕರ್ತವ್ಯ ನಿಭಾ ಯಿಸಿದ್ದಾರೆ. ಆದರೆ ಕೋವಿಡ್-19 ತಂದೊಡ್ಡಿರುವ ಸಂಕಟದ ಕಾರಣ ಶೇ. 15ರಷ್ಟು ಸಿಬಂದಿಗಳನ್ನು ಕೆಲಸದಿಂದ ಕೈಬಿಡುವುದು ಅನಿವಾರ್ಯವಾಗಿದೆ. ಹಿಕ್ ಅವರನ್ನು ಈ ಸಾಲಿಗೆ ಸೇರಿಸಿರುವುದು ಅತ್ಯಂತ ಕಠಿನ ನಿರ್ಧಾರ’ ಎಂಬುದಾಗಿ ಆಸ್ಟ್ರೇಲಿಯ ತಂಡದ ಪ್ರಧಾನ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಕಾಸ್ಟ್-ಕಟ್ಟಿಂಗ್‌ನಿಂದಾಗಿ ಸ್ಟೀವ್ ವೋ, ರಿಕಿ ಪಾಂಟಿಂಗ್ ಅವರಂಥ ಘಟಾನುಘಟಿ ಮಾಜಿ ಕ್ರಿಕೆಟಿಗರನ್ನು ತಂಡದ ಮೆಂಟರ್ ಆಗಿ ನೇಮಿಸುವ ಜಸ್ಟಿನ್ ಲ್ಯಾಂಗರ್ ಪ್ರಯತ್ನಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂದು ಭಾವಿಸಲಾಗಿದೆ. ಸದ್ಯ ಇಲ್ಲಿ ನೂತನ ನೇಮಕಾತಿ ಇಲ್ಲ.
Related Articles
Advertisement