Advertisement
ವೆಸ್ಟ್ ಇಂಡೀಸ್ ಗಳಿಸಿದ್ದು 9 ವಿಕೆಟಿಗೆ 145 ರನ್. ಆಸ್ಟ್ರೇಲಿಯ ಅಗ್ರ ಕ್ರಮಾಂಕದ ಕುಸಿತಕ್ಕೊಳಗಾಗಿ 58ಕ್ಕೆ 5 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 19.5 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಿ ಗೆದ್ದು ಬಂದಿತು.
ಶೆಲ್ಡನ್ ಕಾಟ್ರೆಲ್ ಪಾಲಾದ ಅಂತಿಮ ಓವರ್‌ನಲ್ಲಿ ಆಸೀಸ್ ಜಯಕ್ಕೆ 11 ರನ್ ಅಗತ್ಯವಿತ್ತು. ವೇಡ್ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಲೆಕ್ಕಾಚಾರವನ್ನು ಸರಳಗೊಳಿಸಿದರು. ದ್ವಿತೀಯ ಎಸೆತದಲ್ಲಿ ಜೀವದಾನದ ಜತೆಗೆ 2 ರನ್ ಕೂಡ ಸಿಕ್ಕಿತು. 3ನೇ ಎಸೆತದಲ್ಲಿ ಸಿಂಗಲ್ ಬಂತು. ಬಳಿಕ ಮಿಚೆಲ್ ಸ್ಟಾರ್ಕ್ ಸರದಿ. ಅವರು 4ನೇ ಹಾಗೂ 5ನೇ ಎಸೆತದಲ್ಲಿ ಅವಳಿ ರನ್ ತೆಗೆದು ಆಸ್ಟ್ರೇಲಿಯದ ಗೆಲುವು ಸಾರಿದರು. ಇದಕ್ಕೂ ಮುನ್ನ ಆರನ್ ಫಿಂಚ್ ಕಪ್ತಾನನ ಆಟವಾಡಿ 58 ರನ್ ಬಾರಿಸಿದರು (53 ಎಸೆತ, 6 ಬೌಂಡರಿ). ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಟಿಮ್ ಡೇವಿಡ್ ಸೊನ್ನೆ ಸುತ್ತಿ ಹೋದಾಗ ಪಂದ್ಯ ವಿಂಡೀಸ್ ಕೈಯಲ್ಲಿತ್ತು. ಆದರೆ ಫಿಂಚ್-ವೇಡ್ 6ನೇ ವಿಕೆಟಿಗೆ 69 ರನ್ ಒಟ್ಟುಗೂಡಿಸಿ ಹೋರಾಟ ಜಾರಿಯಲ್ಲಿರಿಸಿದರು. ಆಸೀಸ್ ಆರಂಭಿಕರಾದ ವಾರ್ನರ್, ಗ್ರೀನ್ ಗಳಿಕೆ ತಲಾ 14 ರನ್. ಮಾರ್ಷ್ 3 ರನ್ನಿಗೆ ಉದುರಿದರು.
Related Articles
Advertisement
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-9 ವಿಕೆಟಿಗೆ 145 (ಮೇಯರ್ 39, ಸ್ಮಿತ್ 27, ರೀಫರ್ 19, ಹೇಝಲ್‌ವುಡ್ 35ಕ್ಕೆ 3, ಕಮಿನ್ಸ್ 22ಕ್ಕೆ 2, ಸ್ಟಾರ್ಕ್ 40ಕ್ಕೆ 2). ಆಸ್ಟ್ರೇಲಿಯ-19.5 ಓವರ್‌ಗಳಲ್ಲಿ 7 ವಿಕೆಟಿಗೆ 146 (ಫಿಂಚ್ 58, ವೇಡ್ ಔಟಾಗದೆ 39, ಜೋಸೆಫ್ 17ಕ್ಕೆ 2, ಕಾಟ್ರೆಲ್ 49ಕ್ಕೆ 2).
ಪಂದ್ಯಶ್ರೇಷ್ಠ: ಆರನ್ ಫಿಂಚ್.