Advertisement
ಇದರೊಂದಿಗೆ ಹಾಲಿ ಚಾಂಪಿಯನ್ ಆಸೀಸ್ ತನ್ನ 4ನೇ ಪಂದ್ಯದಲ್ಲಿ 2ನೇ ಜಯ ದಾಖಲಿಸಿತು. ಅಂತರ 42 ರನ್.
Related Articles
ಆರನ್ ಫಿಂಚ್ ಆಕ್ರಮಣಕಾರಿ ಆಟದ ಮೂಲಕ ಐರ್ಲೆಂಡ್ ಬೌಲರ್‌ಗಳ ಮೇಲೆರಗಿ ಹೋದರು. 44 ಎಸೆತಗಳಿಂದ 63 ರನ್ ಬಾರಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ 5 ಫೋರ್, 3 ಸಿಕ್ಸರ್‌ಗಳಿಂದ ರಂಗೇರಿಸಿಕೊಂಡಿತು. ಕಳೆದ 8 ಇನ್ನಿಂಗ್ಸ್‌ಗಳಲ್ಲಿ ಫಿಂಚ್ ಹೊಡೆದ ಮೊದಲ ಅರ್ಧ ಶತಕ ಇದಾಗಿದೆ.
Advertisement
ಡೇವಿಡ್ ವಾರ್ನರ್ (8) ಅವರನ್ನು ಬೇಗನೇ ಕಳೆದುಕೊಂಡ ಆಸ್ಟ್ರೇಲಿಯಕ್ಕೆ ಆರನ್ ಫಿಂಚ್-ಮಿಚೆಲ್ ಮಾರ್ಷ್ ಆಧಾರ ವಾದರು. ಇವರ ನಡುವೆ 6 ಓವರ್‌ಗಳ ಜತೆಯಾಟ ಸಾಗಿತು. 52 ರನ್ ಒಟ್ಟುಗೂಡಿತು. ಮಾರ್ಷ್ ಕೂಡ ಆಕ್ರಮಣಕಾರಿ ಆಟವಾಡಿದರು. ಅವರ 28 ರನ್ 2 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಆಸೀಸ್ ಸರದಿಯಲ್ಲಿ ಸಿಡಿದು ನಿಂತ ಮತ್ತೋರ್ವ ಬ್ಯಾಟರ್ ಮಾರ್ಕಸ್ ಸ್ಟೋಯಿನಿಸ್. ಅವರು 3 ಬೌಂಡರಿ, ಒಂದು ಸಿಕ್ಸರ್ ನೆರವಿನಿಂದ 35 ರನ್ ಹೊಡೆದರು.
ಡೆತ್ ಓವರ್‌ನಲ್ಲಿ ಫಿಂಚ್ ಮತ್ತು ಸ್ಟೋಯಿನಿಸ್ ವಿಕೆಟ್ ಉರುಳಿದ್ದರಿಂದ ಆಸೀಸ್ ರನ್‌ಗತಿ ಕುಂಟಿತಗೊಂಡಿತು. ಇನ್ನೂರರ ಗಡಿ ಮರೀಚಿಕೆಯಾಯಿತು.
4 ಓವರ್, 5 ವಿಕೆಟ್!ಐರ್ಲೆಂಡ್ ಚೇಸಿಂಗ್ ಅತ್ಯಂತ ಆಘಾತಕಾರಿಯಾಗಿತ್ತು. ಸ್ಟಾರ್ಕ್, ಮ್ಯಾಕ್ಸ್‌ವೆಲ್, ಕಮಿನ್ಸ್ ಬೌಲಿಂಗ್ ಆಕ್ರಮಣಕ್ಕೆ ತತ್ತರಿಸಿದ ಅದು 4 ಓವರ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಸ್ಕೋರ್ ಕೇವಲ 25 ರನ್ ಆಗಿತ್ತು. ವನ್‌ಡೌನ್ ಬ್ಯಾಟರ್ ಲಾರ್ಕನ್ ಟ್ಯುಕರ್ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು, ಕೆಳ ಕ್ರಮಾಂಕದ ಆಟಗಾರರ ಅಲ್ಪಸ್ವಲ್ಪ ಬೆಂಬಲ ಪಡೆದು ಹೋರಾಟವೊಂದನ್ನು ಸಂಘಟಿಸಿದರು. ಸ್ಕೋರ್ 130ರ ಗಡಿ ದಾಟಿತು. ಟ್ಯುಕರ್ ಪಂದ್ಯದಲ್ಲೇ ಸರ್ವಾಧಿಕ 71 ರನ್ ಬಾರಿಸಿದರು (48 ಎಸೆತ, 9 ಬೌಂಡರಿ, 1 ಸಿಕ್ಸರ್). ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ-5 ವಿಕೆಟಿಗೆ 179 (ಫಿಂಚ್ 63, ಸ್ಟೋಯಿನಿಸ್ 35, ಮಾರ್ಷ್ 28, ಮೆಕಾರ್ಥಿ 29ಕ್ಕೆ 3, ಲಿಟ್ಲ 21ಕ್ಕೆ 2). ಐರ್ಲೆಂಡ್-18.1 ಓವರ್‌ಗಳಲ್ಲಿ 137 (ಟ್ಯುಕರ್ 71, ಡೆಲಾನಿ 14, ಮ್ಯಾಕ್ಸ್‌ವೆಲ್ 14ಕ್ಕೆ 2, ಝಂಪ 19ಕ್ಕೆ 2, ಕಮಿನ್ಸ್ 28ಕ್ಕೆ 2, ಸ್ಟಾರ್ಕ್ 43ಕ್ಕೆ 2).
ಪಂದ್ಯಶ್ರೇಷ್ಠ: ಆರನ್ ಫಿಂಚ್.