Advertisement

ಹ್ಯಾಟ್ರಿಕ್‌ ಸೋಲು; ಕೈಜಾರಿದ ಸರಣಿ

12:30 AM Mar 14, 2019 | Team Udayavani |

ಹೊಸದಿಲ್ಲಿ: ಕೋಟ್ಲಾ ಕೋಟೆಗೆ ಲಗ್ಗೆ ಹಾಕಲು ವಿಫ‌ಲವಾದ ಕೊಹ್ಲಿ ಪಡೆ ಸತತ 3 ಸೋಲುಂಡು ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸರಣಿಯನ್ನು ಒಪ್ಪಿಸಿದೆ. ಬುಧವಾರ ಹೊಸದಿಲ್ಲಿಯಲ್ಲಿ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಭಾರತಕ್ಕೆ 35 ರನ್ನುಗಳ ಸೋಲುಣಿಸಿದ ಕಾಂಗರೂ ತಂಡ ಇತ್ತೀಚೆಗೆ ತವರಿನಲ್ಲಿ ಅನುಭವಿಸಿದ ಸರಣಿ ಸೋಲಿಗೆ ಸೇಡು ತೀರಿಸಿಕೊಂಡು ಮೆರೆದಾಡಿತು. 

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 9 ವಿಕೆಟಿಗೆ 272 ರನ್‌ ಪೇರಿಸಿ ಸವಾಲೊಡ್ಡಿದರೆ, ಭಾರತ ಸರಿಯಾಗಿ 50 ಓವರ್‌ಗಳಲ್ಲಿ 237ಕ್ಕೆ ಆಲೌಟ್‌ ಆಯಿತು. ಮುಂಬರುವ ವಿಶ್ವಕಪ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಸರಣಿಯಲ್ಲಿ 2-0 ಮುನ್ನಡೆಯಲ್ಲಿದ್ದೂ ಹ್ಯಾಟ್ರಿಕ್‌ ಸೋಲಿಗೆ ತುತ್ತಾದದ್ದು ಟೀಮ್‌ ಇಂಡಿಯಾ ಪಾಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.

ಅಗ್ರ ಕ್ರಮಾಂಕದ ವೈಫ‌ಲ್ಯ
ಚೇಸಿಂಗ್‌ ಆರಂಭಿಸಿದ ಭಾರತ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿತು. ರೋಹಿತ್‌ ಶರ್ಮ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡರೂ ಧವನ್‌, ಕೊಹ್ಲಿ, ಪಂತ್‌, ವಿಜಯ್‌ ಶಂಕರ್‌ ಆಸೀಸ್‌ ದಾಳಿಯನ್ನು ತಡೆದು ನಿಲ್ಲುವಲ್ಲಿ ವಿಫ‌ಲರಾದರು. ರವೀಂದ್ರ ಜಡೇಜ ಸೊನ್ನೆ ಸುತ್ತಿ ನಿರ್ಗಮಿಸಿದರು. 29ನೇ ಓವರ್‌ ವೇಳೆ 132 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ಭಾರತ ಸೋಲಿನತ್ತ ಮುಖ ಮಾಡಿತು. ಇದರಲ್ಲಿ ರೋಹಿತ್‌ ವಿಕೆಟ್‌ ಕೂಡ ಸೇರಿತ್ತು. 

ಆದರೆ 7ನೇ ವಿಕೆಟಿಗೆ ಜತೆಗೂಡಿದ ಕೇದಾರ್‌ ಜಾಧವ್‌-ಭುವನೇಶ್ವರ್‌ ಕುಮಾರ್‌ ದಿಟ್ಟ ಹೋರಾಟವೊಂದನ್ನು ಪ್ರದರ್ಶಿಸಿ ಗೆಲುವಿನ ಆಸೆ ಚಿಗುರಿಸಿದರು. ಈ ಜೋಡಿಯಿಂದ 7ನೇ ವಿಕೆಟಿಗೆ 91 ರನ್‌ ಹರಿದು ಬಂತು. ಮತ್ತೂಂದು ಸ್ಪೆಲ್‌ ಬೌಲಿಂಗ್‌ ದಾಳಿಗೆ ಬಂದ ಕಮಿನ್ಸ್‌ ಈ ಜೋಡಿಯನ್ನು ಬೇರ್ಪಡಿಸಿ ಮತ್ತೆ ಆಸೀಸ್‌ಗೆ ಮೇಲುಗೈ ಒದಗಿಸಿದರು. 54 ಎಸೆತಗಳಿಂದ 46 ಮಾಡಿದ ಭುವನೇಶ್ವರ್‌ (3 ಬೌಂಡರಿ, 2 ಸಿಕ್ಸರ್‌) ಎದುರಾಳಿ ನಾಯಕ ಫಿಂಚ್‌ಗೆ ಕ್ಯಾಚಿತ್ತರು. 

ಮುಂದಿನ ಓವರ್‌ನಲ್ಲೇ ರಿಚರ್ಡ್‌ಸನ್‌ ದೊಡ್ಡ ಬೇಟೆಯಾಡಿ ಕೇದಾರ್‌ ಜಾಧವ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಸರಣಿಯ ಆರಂಭಿಕ ಪಂದ್ಯದಲ್ಲಿ ಧೋನಿ ಜತೆಗೂಡಿ ಭಾರತದ ಗೆಲುವು ಸಾರಿದ್ದ ಜಾಧವ್‌ ಗಳಿಕೆ 44 ರನ್‌ (57 ಎಸೆತ, 4 ಬೌಂಡರಿ, 1 ಸಿಕ್ಸರ್‌). ಅಲ್ಲಿಗೆ ಭಾರತದ ಸೋಲು ಖಚಿತಗೊಂಡಿತು. 

Advertisement

ಖ್ವಾಜಾ, 2ನೇ ಶತಕದ ಮಜಾ
ಎಡಗೈ ಆರಂಭಕಾರ ಉಸ್ಮಾನ್‌ ಖ್ವಾಜಾ ಸರಣಿಯಲ್ಲಿ 2ನೇ ಶತಕ ದಾಖಲಿಸುವ ಮೂಲಕ ಆಸೀಸ್‌ ಪಾಲಿನ ಆಪತಾºಂಧವರೆನಿಸಿದರು. ರಾಂಚಿಯಲ್ಲಿ 104 ರನ್‌ ಬಾರಿಸಿ ತಮ್ಮ ಏಕದಿನ ಶತಕದ ಖಾತೆ ತೆರೆದಿದ್ದ ಖ್ವಾಜಾ, ಇಲ್ಲಿ 106 ಎಸೆತಗಳಿಂದ ಸರಿಯಾಗಿ 100 ರನ್‌ ಬಾರಿಸಿದರು. 33ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ಭಾರತದ ದಾಳಿಯನ್ನು ದಂಡಿಸುತ್ತ ಸಾಗಿದರು. ಸಿಡಿಸಿದ್ದು 10 ಫೋರ್‌, 2 ಸಿಕ್ಸರ್‌. ಹಿಂದಿನ ಮೊಹಾಲಿ ಪಂದ್ಯದಲ್ಲಿ 91 ರನ್ನಿಗೆ ಔಟಾಗುವ ಮೂಲಕ ಖ್ವಾಜಾ ಶತಕ ತಪ್ಪಿಸಿಕೊಂಡಿದ್ದರು. ಹೀಗೆ ಭಾರತದಲ್ಲಿ ಆಡಲಾದ ಸತತ 3 ಏಕದಿನ ಪಂದ್ಯಗಳಲ್ಲಿ 90 ಪ್ಲಸ್‌ ರನ್‌ ಬಾರಿಸಿದ ಕೇವಲ 2ನೇ ಆಟಗಾರನೆಂಬ ಹಿರಿಮೆ ಖ್ವಾಜಾ ಅವರದ್ದಾಯಿತು. ಎಬಿ ಡಿ ವಿಲಿಯರ್ ಮೊದಲಿಗ.ಹೈದರಾಬಾದ್‌ನ ಆರಂಭಿಕ ಪಂದ್ಯದಲ್ಲಿ ಉಸ್ಮಾನ್‌ ಖ್ವಾಜಾ 50 ರನ್‌ ಹೊಡೆದು ಓಟ ಆರಂಭಿಸಿದ್ದರು. ಇದರೊಂದಿಗೆ ಈ ಸರಣಿಯಲ್ಲಿ ಒಟ್ಟು 383 ರನ್‌ ಪೇರಿಸಿದರು.

ಖ್ವಾಜಾ 2 ಉಪಯುಕ್ತ ಜತೆಯಾಟದಲ್ಲಿ ಪಾಲ್ಗೊಂಡು ಆಸ್ಟ್ರೇಲಿಯದ ಸವಾಲಿನ ಮೊತ್ತಕ್ಕೆ ಕಾರಣರಾದರು. ನಾಯಕ ಫಿಂಚ್‌ ಜತೆ ಮೊದಲ ವಿಕೆಟಿಗೆ 76 ರನ್‌ ಒಟ್ಟುಗೂಡಿಸಿದರೆ, ಪೀಟರ್‌ ಹ್ಯಾಂಡ್ಸ್‌ ಕಾಂಬ್‌ ಜತೆಗೂಡಿ ದ್ವಿತೀಯ ವಿಕೆಟಿಗೆ 99 ರನ್‌ ಪೇರಿಸಿದರು. 

ಹಿಡಿತ ಸಾಧಿಸಿದ ಭಾರತ
ಖ್ವಾಜಾ-ಹ್ಯಾಂಡ್ಸ್‌ಕಾಂಬ್‌ ಓಟ ಕಂಡಾಗ ಹಿಂದಿನ ಪಂದ್ಯದಂತೆ ಕೋಟ್ಲಾದಲ್ಲೂ ಆಸೀಸ್‌ 350ರ ಗಡಿ ಸಮೀಪಿಸುವ ನಿರೀಕ್ಷೆ ದಟ್ಟವಾಗಿತ್ತು. 33ನೇ ಓವರ್‌ ವೇಳೆ ಆಸೀಸ್‌ ಒಂದೇ ವಿಕೆಟಿಗೆ 175 ರನ್‌ ಪೇರಿಸಿ ಮುನ್ನುಗ್ಗುತ್ತಿತ್ತು. ಆದರೆ ಖ್ವಾಜಾ ವಿಕೆಟ್‌ ಬಿದ್ದೊಡನೆ ಭಾರತದ ಬೌಲರ್‌ಗಳು ಹಿಡಿತ ಸಾಧಿಸಿದರು, ಕಾಂಗರೂ ಓಟಕ್ಕೆ ಕಡಿವಾಣ ಬಿತ್ತು. ಖ್ವಾಜಾ, ಮ್ಯಾಕ್ಸ್‌
ವೆಲ್‌ (1), ಕಳೆದ ಪಂದ್ಯದ ಶತಕ ಸಾಹಸಿ ಹ್ಯಾಂಡ್ಸ್‌ಕಾಂಬ್‌ (52) ಅವರ ವಿಕೆಟ್‌ 7 ರನ್‌ ಅಂತರದಲ್ಲಿ ಉರುಳಿತು. 

ಮೊಹಾಲಿಯಲ್ಲಿ ಪಂದ್ಯ ತಿರುಗಿಸಿದ ಟರ್ನರ್‌ ಮತ್ತು ತಂಡಕ್ಕೆ ವಾಪಸಾದ ಸ್ಟೋಯಿನಿಸ್‌ ಇಬ್ಬರೂ ಇಪ್ಪತ್ತರ ಗಡಿಯಲ್ಲಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಜೇ ರಿಚರ್ಡ್‌ಸನ್‌ ಸಿಡಿದು ನಿಂತು, ಬುಮ್ರಾ ಎಸೆತದಲ್ಲಿ ಸತತ 4 ಬೌಂಡರಿ ಬಾರಿಸಿದ್ದರಿಂದ ಮೊತ್ತ 270ರ ಗಡಿ ದಾಟಿತು.

ಹೊರಗುಳಿದ ರಾಹುಲ್‌, ಚಾಹಲ್‌
ಭಾರತ ಈ ಪಂದ್ಯಕ್ಕಾಗಿ 5 ಮಂದಿ ಸ್ಪೆಷಲಿಸ್ಟ್‌ ಬೌಲರ್‌ಗಳೊಂದಿಗೆ ಕಣಕ್ಕಿಳಿಯಿತು.  ಕೆ.ಎಲ್‌. ರಾಹುಲ್‌ ಬದಲು ಮೊಹಮ್ಮದ್‌ ಶಮಿ ಬಂದರೆ, ಯಜುವೇಂದ್ರ ಚಾಹಲ್‌ ಬದಲು ರವೀಂದ್ರ ಜಡೇಜ ಅವರಿಗೆ ಅವಕಾಶ ನೀಡಲಾಯಿತು.ಆಸ್ಟ್ರೇಲಿಯ ತಂಡದಲ್ಲೂ 2 ಬದಲಾವಣೆ ಕಂಡುಬಂತು. ಶಾನ್‌ ಮಾರ್ಷ್‌ ಮತ್ತು ಜಾಸನ್‌ ಬೆಹೆÅಂಡಾಫ್ì ಬದಲು ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ನಥನ್‌ ಲಿಯೋನ್‌ ಆಡಲಿಳಿದರು.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಉಸ್ಮಾನ್‌ ಖ್ವಾಜಾ    ಸಿ ಕೊಹ್ಲಿ ಬಿ ಭುವೇಶ್ವರ್‌    100
ಆರನ್‌ ಫಿಂಚ್‌    ಬಿ ಜಡೇಜ    27
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಪಂತ್‌ ಬಿ ಶಮಿ    52
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಕೊಹ್ಲಿ ಬಿ ಜಡೇಜ    1
ಮಾರ್ಕಸ್‌ ಸ್ಟೋಯಿನಿಸ್‌    ಬಿ ಭುವನೇಶ್ವರ್‌    20
ಆ್ಯಶrನ್‌ ಟರ್ನರ್‌    ಸಿ ಜಡೇಜ ಬಿ ಕುಲದೀಪ್‌    20
ಅಲೆಕ್ಸ್‌ ಕ್ಯಾರಿ    ಸಿ ಪಂತ್‌ ಬಿ ಶಮಿ    3
ಜೇ ರಿಚರ್ಡ್‌ಸನ್‌    ರನೌಟ್‌    29
ಪ್ಯಾಟ್‌ ಕಮಿನ್ಸ್‌    ಸಿ ಮತ್ತು ಬಿ ಭುವನೇಶ್ವರ್‌    15
ನಥನ್‌ ಲಿಯೋನ್‌    ಔಟಾಗದೆ    1
ಇತರ        4
ಒಟ್ಟು  (9 ವಿಕೆಟಿಗೆ)        272
ವಿಕೆಟ್‌ ಪತನ: 1-76, 2-175, 3-178, 4-182, 5-210, 6-225, 7-229, 8-263, 9-272.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        10-0-48-3
ಮೊಹಮ್ಮದ್‌ ಶಮಿ        9-0-57-2
ಜಸ್‌ಪ್ರೀತ್‌ ಬುಮ್ರಾ        10-0-39-0
ಕುಲದೀಪ್‌ ಯಾದವ್‌        10-0-74-1
ರವೀಂದ್ರ ಜಡೇಜ        10-0-45-2
ಕೇದಾರ್‌ ಜಾಧವ್‌        1-0-8-0
ಭಾರತ
ರೋಹಿತ್‌ ಶರ್ಮ    ಸ್ಟಂಪ್ಡ್ ಕ್ಯಾರಿ ಬಿ ಝಂಪ    56
ಶಿಖರ್‌ ಧವನ್‌    ಸಿ ಕ್ಯಾರಿ ಬಿ ಕಮಿನ್ಸ್‌    12
ವಿರಾಟ್‌ ಕೊಹ್ಲಿ    ಸಿ ಕ್ಯಾರಿ ಬಿ ಸ್ಟೋಯಿನಿಸ್‌    20
ರಿಷಭ್‌ ಪಂತ್‌    ಸಿ ಟರ್ನರ್‌ ಬಿ ಲಿಯೋನ್‌    16
ವಿಜಯ್‌ ಶಂಕರ್‌    ಸಿ ಖ್ವಾಜಾ ಬಿ ಝಂಪ    16
ಕೇದಾರ್‌ ಜಾಧವ್‌  ಸಿ ಮ್ಯಾಕ್ಸ್‌ವೆಲ್‌ ಬಿ ರಿಚರ್ಡ್‌ಸನ್‌    44
ರವೀಂದ್ರ ಜಡೇಜ    ಸ್ಟಂಪ್ಡ್ ಕ್ಯಾರಿ ಬಿ ಝಂಪ    0
ಭುವನೇಶ್ವರ್‌ ಕುಮಾರ್‌    ಸಿ ಫಿಂಚ್‌ ಬಿ ಕಮಿನ್ಸ್‌    46
ಮೊಹಮ್ಮದ್‌ ಶಮಿ    ಸಿ ಮತ್ತು ಬಿ ರಿಚರ್ಡ್‌ಸನ್‌    3
ಕುಲದೀಪ್‌ ಯಾದವ್‌    ಬಿ ಸ್ಟೋಯಿನಿಸ್‌    8
ಜಸ್‌ಪ್ರೀತ್‌ ಬುಮ್ರಾ    ಔಟಾಗದೆ    1
ಇತರ        15
ಒಟ್ಟು  (50 ಓವರ್‌ಗಳಲ್ಲಿ ಆಲೌಟ್‌)    237
ವಿಕೆಟ್‌ ಪತನ: 1-15, 2-68, 3-91, 4-120, 5-132, 6-132, 7-223, 8-223, 9-230.
ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌        10-1-38-2
ಜೇ ರಿಚರ್ಡ್‌ಸನ್‌        10-0-47-2
ಮಾರ್ಕಸ್‌ ಸ್ಟೋಯಿನಿಸ್‌        4-0-31-2
ನಥನ್‌ ಲಿಯೋನ್‌        10-1-34-1
ಆ್ಯಡಂ ಝಂಪ        10-1-46-3
ಗ್ಲೆನ್‌ ಮ್ಯಾಕ್ಸ್‌ವೆಲ್‌        6-0-34-0

ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಉಸ್ಮಾನ್‌ ಖ್ವಾಜಾ

Advertisement

Udayavani is now on Telegram. Click here to join our channel and stay updated with the latest news.

Next