Advertisement

World Cup: ಮ್ಯಾಕ್ಸವೆಲ್ ಬಳಿಕ ಮತ್ತೊಂದು ಆಘಾತ; ಆಸೀಸ್ ಗೆ ತೆರಳಿದ ಪ್ರಮುಖ ಆಲ್ ರೌಂಡರ್

12:11 PM Nov 02, 2023 | Team Udayavani |

ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಆರಂಭಿಕ ಪಂದ್ಯಗಳಲ್ಲಿ ಸೋಲನುಭವಿಸಿ ನಂತರ ಪುಟಿದೆದ್ದ ಆಸ್ಟ್ರೇಲಿಯಾ ಸದ್ಯ ಉತ್ತಮ ಪ್ರದರ್ಶನ ನೀಡುತ್ತಿದೆ. ಸತತ ಪಂದ್ಯಗಳನ್ನು ಗೆದ್ದು ಸೆಮಿ ಫೈನಲ್ ಪ್ರವೇಶದ ಅವಕಾಶ ಜೀವಂತವಾಗಿರಿಸಿಕೊಂಡಿರುವ ಆಸೀಸ್ ಗೆ ಇದೀಗ ಹಿನ್ನಡೆಯೊಂದು ಎದುರಾಗಿದೆ.

Advertisement

ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಅವರು ಈಗಾಗಲೇ ಗಾಯಗೊಂಡು ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರ ನಡುವೆಯೇ ಮತ್ತೋರ್ವ ಆಲ್ ರೌಂಡರ್ ಮಿಚೆಲ್ ಮಾರ್ಷ್ ಕೂಡಾ ಮುಂದಿನ ಪಂದ್ಯಕ್ಕೆ ತಂಡಕ್ಕೆ ಲಭ್ಯವಿರುವುದಿಲ್ಲ.

ವೈಯಕ್ತಿಕ ಕಾರಣಗಳಿಗೆ ಮಿಚೆಲ್ ಮಾರ್ಷ್ ಅವರು ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಅವರು ಯಾವಾಗ ಮರಳಿ ಭಾರತಕ್ಕೆ ಬರುತ್ತಾರೆ ಎನ್ನುವುದು ಖಚಿತವಾಗಿಲ್ಲ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಮಾರ್ಷ್ ಎಷ್ಟು ಸಮಯದವರೆಗೆ ಅಲಭ್ಯರಾಗುತ್ತಾರೆ ಮತ್ತು ತಂಡಕ್ಕೆ ಬದಲಿ ಆಟಗಾರನ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆಯೇ ಎಂಬುದರ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿಲ್ಲ.

ಗಾಯಗೊಂಡಿರುವ ಮಾರ್ಕಸ್ ಸ್ಟೋಯಿನಸ್ ಅವರು ಮುಂದಿನ ಪಂದ್ಯದಲ್ಲಿ ಆಸೀಸ್ ತಂಡಕ್ಕೆ ಲಭ್ಯರಾಗುವ ನಿರೀಕ್ಷೆಯಿದೆ.

Advertisement

ಬಿದ್ದು ಗಾಯಮಾಡಿಕೊಂಡ ಮ್ಯಾಕ್ಸವೆಲ್: ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಗಾಲ್ಫ್ ಕಾರ್ಟ್‌ನಿಂದ ಬಿದ್ದು ಮುಖ ಮತ್ತು ಕಾಲಿಗೆ ಗಾಯ ಮಾಡಿ ಕೊಂಡಿದ್ದಾರೆ. ಇದರಿಂದ ಅವರು ನ. 4ರಂದು ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಅತೀ ಮುಖ್ಯ ವಾದ ಪಂದ್ಯದಲ್ಲಿ ಆಡುವುದಿಲ್ಲ.

ಕ್ಲಬ್‌ ಹೌಸ್‌ನಿಂದ ತಂಡದ ಬಸ್‌ ಇರುವಲ್ಲಿಗೆ ಗಾಲ್ಫ್ ಕಾರ್ಟ್‌ನಲ್ಲಿ ಹೋಗುತ್ತಿರುವ ವೇಳೆ ಮ್ಯಾಕ್ಸ್‌ ವೆಲ್‌ ಬಿದ್ದರು. ಮುಖ ಮತ್ತು ಕಾಲಿಗೆ ಗಾಯವಾಗಿದ್ದರಿಂದ ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗ ಬೇಕಾಗುತ್ತದೆ. ಹಾಗಾಗಿ ಇಂಗ್ಲೆಂಡ್‌ ವಿರುದ್ಧದ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next