Advertisement

ಭಾರತೀಯರು ಅಧಿಕವಾಗಿ ಬಳಸುವ “457 ವೀಸಾ’ಕ್ಕೆ ಆಸ್ಟ್ರೇಲಿಯಾ ಕತ್ತರಿ

12:23 PM Apr 18, 2017 | udayavani editorial |

ಮೆಲ್ಬೋರ್ನ್: ತಾತ್ಕಾಲಿಕ ವಿದೇಶೀ ಕೆಲಸಗಾರರು, ವಿಶೇಷವಾಗಿ ಭಾರತೀಯರು, ಗರಿಷ್ಠ 95,000 ಸಂಖ್ಯೆಯಲ್ಲಿ ಬಳಸುವ ವೀಸಾ ಸೌಕರ್ಯವನ್ನು ಆಸ್ಟ್ರೇಲಿಯ ಇಂದು ರದ್ದು ಮಾಡಿದೆ.

Advertisement

ಆಸ್ಟ್ರೇಲಿಯದಲ್ಲೀಗ ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ “457 ವೀಸಾ’ ಎಂದೇ ಚಿರಪರಿಚಿತವಾಗಿರುವ ವೀಸಾ ಕಾರ್ಯಕ್ರಮವನ್ನು ತಾನು ರದ್ದು ಪಡಿಸಿರುವುದಾಗಿ ಆಸ್ಟ್ರೇಲಿಯ ಸರಕಾರ ಹೇಳಿದೆ. 

ವರ್ಷಕ್ಕೆ ಸುಮಾರು 95,000 ವೀಸಾಗಳನ್ನು ವಿದೇಶೀಯರಿಗೆ, ವಿಶೇಷವಾಗಿ ಭಾರತೀಯರಿಗೆ, ನಾಲ್ಕು ವರ್ಷಗಳ ಕೌಶಲಯುಕ್ತ ತಾತ್ಕಾಲಿಕ ಉದ್ಯೋಗಳಿಗಾಗಿ ಆಸ್ಟ್ರೇಲಿಯ ಸರಕಾರ ನೀಡುವುದು ವಾಡಿಕೆ. ಆದರೆ ಈಗ ತನ್ನ ದೇಶದ ತರುಣರಿಗೇ ಉದ್ಯೋಗ ಇಲ್ಲವಾಗಿರುವುದರಿಂದ ತಾನು ವಿದೇಶೀಯರಿಗೆ ತಾತ್ಕಾಲಿಕ ಉದ್ಯೋಗದ ವೀಸಾ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಆಸೀಸ್‌ ಸರಕಾರ ಹೇಳಿದೆ. 

“ನಮ್ಮದು ಮೂಲತಃ ವಲಸಿಗರ ದೇಶವಾಗಿದೆ. ಹಾಗಿದ್ದರೂ ನಾವು ನಮ್ಮ ದೇಶದ ಯುವಕರಿಗೆ ಆದ್ಯತೆಯಲ್ಲಿ ಉದ್ಯೋಗ ನೀಡಬೇಕಾಗಿದೆ. ಹಾಗಾಗಿ ನಾವು 457 ವೀಸಾ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ’ ಎಂದು ಆಸೀಸ್‌ ಪ್ರಧಾನಿ ಮಾಲ್ಕಂ ಟರ್ನ್ಬುಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next