ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಆರಂಭಗೊಂಡ ಪ್ರವಾಸಿ ಆಸ್ಟ್ರೇಲಿಯ ತಂಡದೆದುರಿನ ನಾಲ್ಕು ಟೆಸ್ಟ್ ಸರಣಿಯ ಮೊದಲ ಪಂದ್ಯದ ಇಂದಿನ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲೀಯ 9 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿದೆ.
ದಿನದಾಟದ ಅಂತ್ಯದಲ್ಲಿ ಆಸೀಸ್‌ನ ಹೆಜೆಲ್‌ವುಡ್ 1 ರನ್ ನೊಂದಿಗೆ, ಮಿಚೆಲ್ ಸ್ಟಾರ್ಕ್ 57 ರನ್ ನೊಂದಿಗೆ ಕ್ರೀಸಿನಲ್ಲಿ ಉಳಿದಿದ್ದು ಮೊದಲ ದಿನವೇ ತಂಡ ಆಲೌಟಾಗುವ ಅವಮಾನವನ್ನು ತಪ್ಪಿಸಿದ್ದಾರೆ.
ಆಸೀಸ್ 9 ವಿಕೆಟ್ ನಷ್ಟಕ್ಕೆ ಗುರಿಯಾಗುವಂತೆ ಮಾಡುವಲ್ಲಿ ಭಾರತದ ಬೌಲರ್‌ಗಳು ಸಫಲರಾದರು. ಆ ಪ್ರಕಾರ ಉಮೇಶ್ ಯಾದವ್ ನಾಲ್ಕು ವಿಕೆಟ್ ಕಿತ್ತರೆ, ಅಶ್ವಿನ್ ಮತ್ತು ಜಡೇಜ ತಲಾ ಎರಡು ವಿಕೆಟ್ ಕಿತ್ತರು. ಜಯಂತ್ ಯಾದವ್ ಒಂದು ವಿಕೆಟ್ ಪಡೆದರು.
ಆಸೀಸ್ ದಾಂಡಿಗರಲ್ಲಿ 68 ರನ್ ಬಾರಿಸಿದ ರೆನ್‌ಶಾ ಗರಿಷ್ಠ ಸ್ಕೋರರ್ ಎನಿಸಿದರು. ಅನಂತರದಲ್ಲಿ ಡೇವಿಡ್ ವಾರ್ನರ್ 38, ಸ್ಟೀವನ್ ಸ್ಮಿತ್ 27, ಹ್ಯಾನ್ಸ್‌ಕಾಂಬ್ 22 ಬಾರಿಸಿದರು.
ಪುಣೆ ಟಸ್ಟ್, ಮೊದಲ ದಿನ, ಆಸೀಸ್, 9/256
ಭಾರತದ ಅಂತಿಮ 11ರ ತಂಡ ಇಂತಿದೆ: ಲೋಕೇಶ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾಣೆ, ವೃದ್ಧಿಮಾನ್ ಸಾಹಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮಾ.
ಆಸೀಸ್ ತಂಡ: ಡೇವಿಡ್ ವಾರ್ನರ್, ಮ್ಯಾಥ್ಯೂ ರೆನ್‌ಶಾ, ಸ್ಟೀವ್ ಸ್ಮಿತ್ (ಕ್ಯಾಪ್ಟನ್), ಶಾನ್ ಮಾಶ್‌ರ, ಪೀಟರ್ ಹ್ಯಾನ್ಸ್‌ಕಾಮ್, ಮಿಚೆಲ್ ಮಾರ್ಶ್, ಮ್ಯಾಥ್ಯೂ ವೇಡ್, ಸ್ಟೀವ್ ಓ ಕೀಫ್, ನ್ಯಾಥನ್ ಲಿಯೋನ್, ಮಿಚೆಲ್ ಸ್ಟಾರ್ಕ್, ಜಾಶ್ ಹ್ಯಾಜೆಲ್‌ವುಡ್.