Advertisement
ಇಲ್ಲಿನ “ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಆಸ್ಟ್ರೇಲಿಯ 9 ವಿಕೆಟ್‌ಗಳ ಜಯ ಸಾಧಿಸಿತು. ನಮೀಬಿಯಾ 17 ಓವರ್‌ಗಳಲ್ಲಿ 72 ರನ್ನಿಗೆ ಕುಸಿದರೆ, ಮಿಚೆಲ್ ಮಾರ್ಷ್ ಬಳಗ ಕೇವಲ 5.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 74 ರನ್ ಬಾರಿಸಿತು.
Related Articles
ಲೆಗ್‌ಸ್ಪಿನ್ನರ್ ಆ್ಯಡಂ ಝಂಪ ನಮೀಬಿಯಾಕ್ಕೆ ಜಬರ್ದಸ್ತ್ ಆಘಾತವಿಕ್ಕಿದರು. ಇವರ ಸಾಧನೆ 12 ರನ್ನಿಗೆ 4 ವಿಕೆಟ್. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್ ಉಡಾಯಿಸಿದ ಆಸ್ಟ್ರೇಲಿಯದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
Advertisement
ಸಂಕ್ಷಿಪ್ತ ಸ್ಕೋರ್: ನಮೀಬಿಯಾ-17 ಓವರ್‌ಗಳಲ್ಲಿ 72 (ಎರಾಸ್ಮಸ್ 36, ವಾನ್ ಲಿಂಜೆನ್ 10, ಝಂಪ 12ಕ್ಕೆ 4, ಸ್ಟೋಯಿನಿಸ್ 9ಕ್ಕೆ 2, ಹೇಝಲ್‌ವುಡ್ 18ಕ್ಕೆ 2). ಆಸ್ಟ್ರೇಲಿಯ-5.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 74 (ವಾರ್ನರ್ 20, ಹೆಡ್ ಔಟಾಗದೆ 34, ಮಾರ್ಷ್ ಔಟಾಗದೆ 18, ವೀಸ್ 15ಕ್ಕೆ 1). ಪಂದ್ಯಶ್ರೇಷ್ಠ: ಆ್ಯಡಂ ಝಂಪ.