Advertisement

Paris Games; ಒಲಿಂಪಿಕ್ಸ್‌ ಹಾಕಿ ತಂಡದಲ್ಲಿ ಆಸೀಸ್‌ ಕ್ರಿಕೆಟಿಗನ ಪತ್ನಿ!

10:05 PM Jul 23, 2024 | Team Udayavani |

ಪ್ಯಾರಿಸ್‌: ಆಸ್ಟ್ರೇಲಿಯ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಹೊಡಿಬಡಿ ಆಟಗಾರ ಟಿಮ್‌ ಡೇವಿಡ್‌ ಈಗ ಪತ್ನಿಯ ಕಾರಣದಿಂದ ಸುದ್ದಿಯಲಿದ್ದಾರೆ. ಇವರ ಪತ್ನಿ ಸ್ಟೆಫಾನಿ ಕೆರ್ಶಾ ಆಸ್ಟ್ರೇಲಿಯದ ಹಾಕಿ ಆಟಗಾರ್ತಿಯಾಗಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.

Advertisement

ಅಂದಹಾಗೆ ಕೆರ್ಶಾ ಪಾಲಿಗೆ ಇದು ಎರಡನೇ ಒಲಿಂಪಿಕ್ಸ್‌. 2020ರ ಟೋಕಿಯೊ ಕೂಟದಲ್ಲೂ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದರು. ಆದರೆ ಆಗ ಟಿಮ್‌ ಡೇವಿಡ್‌ ಅಷ್ಟೇನೂ ಚಾಲ್ತಿಯಲ್ಲಿಲ್ಲದ ಕಾರಣ ಕೆರ್ಶಾ ಕೂಡ ಸುದ್ದಿಯಾಗಲಿಲ್ಲ. ಅಲ್ಲದೇ, ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ವಿರುದ್ಧ ಪರಾಭವಗೊಂದ ಆಸೀಸ್‌ ಬೇಗನೇ ಕೂಟದಿಂದ ನಿರ್ಗಮಿಸಿತ್ತು.

ಸ್ಟೆಫಾನಿ ಕೆರ್ಶಾ ಈಗಾಗಲೇ ಹಾಕಿ ತಂಡದೊಂದಿಗೆ ಒಲಿಂಪಿಕ್ಸ್‌ ವಿಲೇಜ್‌ ತಲುಪಿದ್ದು, ಅಭ್ಯಾಸವನ್ನೂ ನಡೆಸಿದ್ದಾರೆ. ಇದರ ಕೆಲವು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next