Advertisement

Women’s T20 World Cup: ಆಸೀಸ್‌ಗೆ ಸುಲಭದ ತುತ್ತಾದ ಲಂಕಾ

09:36 PM Oct 05, 2024 | Team Udayavani |

ಶಾರ್ಜಾ: ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಮಣಿಸುವ ಮೂಲಕ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವನಿತಾ ಟಿ20 ವಿಶ್ವಕಪ್‌ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ.

Advertisement

ಶನಿವಾರದ  “ಎ’ ವಿಭಾಗದ ಮುಖಾಮುಖೀಯಲ್ಲಿ ಬ್ಯಾಟಿಂಗ್‌ ಆಯ್ದುಕೊಂಡ ಲಂಕಾ ಗಳಿಸಿದ್ದು 7ಕ್ಕೆ 93 ರನ್‌ ಮಾತ್ರ. ಇದರಲ್ಲಿ 13 ರನ್‌ ಎಕ್ಸ್‌ಟ್ರಾ ರೂಪದಲ್ಲಿ ಬಂದಿತ್ತು. ಜವಾಬಿತ್ತ ಆಸ್ಟ್ರೇಲಿಯ 14.2 ಓವರ್‌ಗಳಲ್ಲಿ 4 ವಿಕೆಟಿಗೆ 94 ರನ್‌ ಬಾರಿಸಿತು. ಲಂಕಾ ಆರಂಭಿಕ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧವೂ ಸೋಲನುಭವಿಸಿತ್ತು.

ಆಸೀಸ್‌ ಬೌಲಿಂಗ್‌ನಲ್ಲಿ 3 ಮೇಡನ್‌ ಓವರ್‌ಗಳಿದ್ದವು. ಮೆಗಾನ್‌ ಶಟ್‌ 12ಕ್ಕೆ 3, ಸೋಫಿ ಮೊಲಿನಾಕ್ಸ್‌ 20ಕ್ಕೆ 2 ವಿಕೆಟ್‌ ಕೆಡವಿದರು. ಅಜೇಯ 29 ರನ್‌ ಮಾಡಿದ ನೀಲಾಕ್ಷಿ ಡಿ ಸಿಲ್ವ ಲಂಕಾ ಸರದಿಯ ಟಾಪ್‌ ಸ್ಕೋರರ್‌. ಆಸೀಸ್‌ ಚೇಸಿಂಗ್‌ ವೇಳೆ ಓಪನರ್‌ ಬೆತ್‌ ಮೂನಿ ಅಜೇಯ 43 ರನ್‌ ಹೊಡೆದರು.

ಪಂದ್ಯದ ತಿರುವು:

ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾದ ಲಂಕಾ, 12 ಓವರ್‌ ವೇಳೆಗಾಗಲೇ ಕೇವಲ 56 ರನ್‌ ಬಾರಿಸಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌:

ಶ್ರೀಲಂಕಾ-7 ವಿಕೆಟಿಗೆ 93 (ನೀಲಾಕ್ಷಿ ಡಿ ಸಿಲ್ವ ಔಟಾಗದೆ 29, ಹರ್ಷಿತಾ ಮಾಧವಿ 23, ಹಾಸಿನಿ ಪೆರೇರ 16, ಮೆಗಾನ್‌ ಶಟ್‌ 12ಕ್ಕೆ 3, ಮೊಲಿನಾಕ್ಸ್‌ 20ಕ್ಕೆ 2). ಆಸ್ಟ್ರೇಲಿಯ-14.2 ಓವರ್‌ಗಳಲ್ಲಿ 4 ವಿಕೆಟಿಗೆ 94 (ಮೂನಿ ಔಟಾಗದೆ 43, ಪೆರ್ರಿ 17).

ಪಂದ್ಯಶ್ರೇಷ್ಠ: ಮೆಗಾನ್‌ ಶಟ್‌.

 

Advertisement

Udayavani is now on Telegram. Click here to join our channel and stay updated with the latest news.

Next