Advertisement

ವನಿತೆಯರ ಆರ್ಭಟಕ್ಕೆ ಮಳೆಯಿಂದ ತಡೆ

11:30 PM Oct 07, 2021 | Team Udayavani |

ಗೋಲ್ಡ್‌ ಕೋಸ್ಟ್‌: ಗುರುವಾರದ ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಆಗ ಕೌರ್‌ ಬಳಗ 15.2 ಓವರ್‌ಗಳಲ್ಲಿ 4 ವಿಕೆಟಿಗೆ 131 ರನ್‌ ರಾಶಿ ಹಾಕಿತ್ತು.

Advertisement

ಈ ಪಂದ್ಯದಲ್ಲಿ ಭಾರತೀಯರ ಬ್ಯಾಟಿಂಗ್‌ ಬಿರುಸಿನಿಂದ ಕೂಡಿತ್ತು. ಎಲ್ಲರ ಸ್ಟ್ರೈಕ್‌ರೇಟ್‌ ನೂರರ ಗಡಿ ದಾಟಿತ್ತು. 10 ಎಸೆತಗಳಿಂದ 17 ರನ್‌ ಬಾರಿಸಿದ ಮಂಧನಾ (2 ಬೌಂಡರಿ, 1 ಸಿಕ್ಸರ್‌), 3 ಸಿಕ್ಸರ್‌ಗಳಿಂದಲೇ 18 ರನ್‌ ಹೊಡೆದ ಶಫಾಲಿ ವರ್ಮ, 5 ಎಸೆತಗಳಿಂದ 3 ಬೌಂಡರಿ ಸಿಡಿಸಿದ ಕೌರ್‌ ಅವರೆಲ್ಲ ಚಿಕ್ಕದಾದರೂ ಸ್ಫೋಟಕ ಆಟದ ಮೂಲಕ ಗಮನ ಸೆಳೆದರು. ಶಫಾಲಿ-ಮಂಧನಾ 10ರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿದರು. 3.2 ಓವರ್‌ಗಳಿಂದ 31 ರನ್‌ ಹರಿದು ಬಂತು.

ಜೆಮಿಮಾ ರೋಡ್ರಿಗಸ್‌ ಅವರ ಜಬರ್ದಸ್ತ್ ಬ್ಯಾಟಿಂಗ್‌ ಭಾರತದ ಸರದಿಯ ವಿಶೇಷ ಆಕರ್ಷಣೆ ಆಗಿತ್ತು. ಅವರು 36 ಎಸೆತಗಳಿಂದ 49 ರನ್‌ (7ಬೌಂಡರಿ) ಬಾರಿಸಿ ರಿಚಾ ಘೋಷ್‌ ಅವರೊಂದಿಗೆ ಅಜೇಯರಾಗಿ ಉಳಿದರು. ರಿಚಾ ಗಳಿಕೆ 13 ಎಸೆತಗಳಿಂದ 17 ರನ್‌ (3 ಫೋರ್‌). ಭಾರತದ ಈ ಸ್ಫೋಟಕ ಆಟ ದಿಂದಾಗಿ ಆಸ್ಟ್ರೇಲಿಯ ಪವರ್‌ ಪ್ಲೇ ಅವಧಿಯಲ್ಲಿ ಅಪರೂಪಕ್ಕೆ 50 ಪ್ಲಸ್‌ ರನ್‌ ಬಿಟ್ಟುಕೊಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next