Advertisement

ಮೊಗಲ್‌ ದೊರೆ ಔರಂಗಜೇಬ್‌ ಭಯೋತ್ಪಾದಕ: ಬಿಜೆಪಿ ಸಂಸದ

12:00 PM Feb 10, 2018 | udayavani editorial |

ಹೊಸದಿಲ್ಲಿ : ”ಮೊಗಲ್‌ ದೊರೆ ಔರಂಗಜೇಬ್‌ ಒಬ್ಬ ಭಯೋತ್ಪಾದಕ; ಆದರೆ ಆತನ ಸಹೋದರ ದಾರಾ ಶಿಕೋ ಒಬ್ಬ ಪಂಡಿತನಾಗಿದ್ದ; ಹಿಂದೂ ಮುಸ್ಲಿಂ ಧರ್ಮಗಳ ಉನ್ನತ ಮೌಲ್ಯಗಳನ್ನು ಒಂದುಗೊಳಿಸುವ ಆಶಯ ಹೊಂದಿದ್ದ ಮತ್ತು ತನ್ನ ಬದುಕಿನ ಬಗ್ಗೆ ಮಹತ್ತರ ಜಿಜ್ಞಾಸೆ, ಜಾಗೃತಿ ಹೊಂದ ಬಯಸಿದ್ದ” ಎಂದು ಬಿಜೆಪಿ ಸಂಸದ ಮಹೇಶ್‌ ಗಿರಿ ಹೇಳಿದ್ದಾರೆ.

Advertisement

“ಔರಂಗಜೇಬ್‌ಮತ್ತು ದಾರಾ ಶಿಕೋ – ಇಬ್ಬರು ಸಹೋದರರ ಜೀವನಗಾಥೆ’ ಕುರಿತ ವಿಚಾರ ಸಂಕಿರಣದ ಉದ್ಘಾಟನೆಯ ಬಳಿಕ ಸಂಸದ ಮಹೇಶ್‌ ಗಿರಿ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. 

ಇಲ್ಲಿನ ಐಜಿಎನ್‌ಸಿಎ ಯಲ್ಲಿ ಏರ್ಪಡಿಸಲಾಗಿದ್ದ ಈ ವಿಚಾರ ಸಂಕಿರಣದ ಅಂಗವಾಗಿ “ದಾರಾ ಶಿಕೋ – ಇಸ್ಲಾಮಿನ ಮರೆತುಹೋದ ದೊರೆ’ ಎಂಬ ಪರಿಕಲ್ಪನೆಯ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿತು. 

ಸಂಸದ ಮಹೇಶ್‌ ಗಿರಿ ಮತನಾಡುತ್ತಾ, “ಔರಂಗಜೇಬ ಇಂದಿನ ದೃಷ್ಟಿಕೋನದಲ್ಲಿ ನೋಡಿದರೆ ಒಬ್ಬ ಭಯೋತ್ಪಾದಕ; ಆತನ ದಷ್ಕೃತ್ಯಗಳಿಗೆ ಸಿಗಬೇಕಾಗಿದ್ದ ಶಿಕ್ಷೆ ಆತನಿಗೆ ಸಿಗಲೇ ಇಲ್ಲ; ಈಗ ಕನಿಷ್ಠ ಆತನ ಹೆಸರಿನ ಮಾರ್ಗದ ಹೆಸರನ್ನು ಬದಲಾಯಿಸಲಾಗಿರುವುದು ಸಮಾಧಾನದ ಸಂಗತಿ’ ಎಂದು ಸುದ್ದಿಗಾರರಿಗೆ ತಿಳಿಸಿದರು. 

ದಿಲ್ಲಿ ಲುಟೇನ್ಸ್‌ ಪ್ರದೇಶದಲ್ಲಿನ ಔರಂಗಜೇಬ್‌ ಮಾರ್ಗದ ಹೆಸರನ್ನು 2015ರಲ್ಲಿ ಬದಲಾಯಿಸಿ ಅದಕ್ಕೆ ಎಪಿಜೆ ಅಬ್ದುಲ್‌ ಕಲಾಂ ಅವರ ಹೆಸರನ್ನು ಇಡಲಾಗಿತ್ತು. ಸ್ವತಃ ಸಂಸದ ಗಿರಿ ಅವರೇ ಈ ಮಾರ್ಗ ಪುನರ್‌ ನಾಮಕರಣ ಪ್ರಸ್ತಾವವನ್ನು ಕೇಂದ್ರ ಸರಕಾರದ ಮುಂದಿಟ್ಟು ಅದು ಕಾರ್ಯಗತವಾಗುವಂತೆ ಮಾಡಿದ್ದರು. 

Advertisement

ಔರಂಗಜೇಬ್‌ ಮಾರ್ಗದ ಹೆಸರನ್ನು ಬದಲಾಯಿಸುವದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ನ ಯತ್ನಕ್ಕೆ ಮುಸ್ಲಿಂ ಗುಂಪುಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದವು. ಈ ರೀತಿ ಪುನರ್‌ ನಾಮಕರಣ ಮಾಡುವ ಮೂಲಕ ದೇಶದಲ್ಲಿ ಇತಿಹಾಸವನ್ನು ತಿರುಚುವ ಯತ್ನಕ್ಕೆ ಪೂರ್ವ ನಿದರ್ಶನ ಸಿಕ್ಕಂತಾಗುವುದು ಎಂದು ಆ ಗುಂಪುಗಳು ಗುಡುಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next