Advertisement

ಔರಾದ: ನಾಲ್ವರು ಕಳ್ಳರ ಬಂಧನ, 17 ಬೈಕ್ ವಶಕ್ಕೆ

08:06 PM Apr 29, 2021 | Team Udayavani |

ಔರಾದ :ಹಲವು ದಿನಗಳಿಂದ ಔರಾದ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿ, 7.15 ಲಕ್ಷ ರೂ. ಮೌಲ್ಯದ 17 ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

Advertisement

ತಾಲೂಕಿನ ಡೋಣಗಾಂವ(ಎಂ) ಗ್ರಾಮದ ಶಿವಾಜಿ ನಾಮದೇವ, ತೋರಣಾ ಗ್ರಾಮದ ಶಿವಶರಣಯ್ಯ, ಕೋಟಗ್ಯಾಳ್‌ದ ಸಚಿನ್ ಕುಲಕರ್ಣಿ ಮತ್ತು ಗೋವಿಂದ ನರಸಿಂಗರಾವ್ ಬಂಧಿತ ಆರೋಪಿತರು. ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಿದ ಹಿನ್ನಲೆ ಸಿಪಿಐ ರವಿಂದ್ರನಾಥ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಬುಧವಾರ ತಡರಾತ್ರಿ ಔರಾದ ಉಪ ಬಂಧಿಖಾನೆ ಹತ್ತಿರ ಶಿವಾಜಿ ಎಂಬಾತ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನದ ಕೃತ್ಯ ಬಾಯಿಬಿಟ್ಟಿದ್ದಾನೆ.

ಕಳ್ಳತನ ಕೃತ್ಯದಲ್ಲಿ ಶಿವಶರಣಯ್ಯ ಸಾಥ್ ನೀಡುತ್ತಿದ್ದ. ಕಳುವು ಮಾಡಿದ ವಾಹನಗಳನ್ನು ಸಚಿನ ಮತ್ತು ಗೋವಿಂದ ಅವರಿಗೆ ಕ್ರಮವಾಗಿ 14 ಮತ್ತು 3 ದ್ವಿಚಕ್ರ ವಾಹನಗಳು ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಜತೆಗೆ ಕಳೆದ ಮಾರ್ಚ್‌ನಲ್ಲಿ ಔರಾದ ಪಟ್ಟಣದ ಮಹಿಳೆಯೊಬ್ಬರಿಂದ ದೋಚಿದ ಬಂಗಾರ ಮತ್ತು ಬೆಳ್ಳಿ ಆಭರಣ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಪಿಎಸ್‌ಐ ಮಂಜನಗೌಡ ಪಾಟೀಲ, ಎಎಸ್‌ಐ ಮಾಧವ, ನರಸಾರೆಡ್ಡಿ, ಶಿವಯೋಗಪ್ಪ, ಅನೀಲರೆಡ್ಡಿ ಸೇರಿದಂತೆ ಇನ್ನಿತರರಿದ್ದರು. ಪ್ರಕರಣ ಭೇದಿಸಿರುವ ಪೊಲೀಸ ತಂಡಕ್ಕೆ ಸೂಕ್ತ ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next