Advertisement

ಫ‌ಲಿತಾಂಶ ತಿರುಚಿ ಆಡಿಯೋ ಬಹಿರಂಗ

12:48 AM Jan 05, 2021 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಜಾರ್ಜಿಯಾದಲ್ಲಿ ಹೇಗಾದರೂ ಮಾಡಿ ಜೋ ಬೈಡೆನ್‌ ಗೆಲುವನ್ನು ತಿರುಚಿ, ತಾವು ಜಯ ಗಳಿಸಿರುವುದಾಗಿ ಘೋಷಿಸಿ ಎಂದು ಅಲ್ಲಿನ ಚುನಾವಣ ಮುಖ್ಯಸ್ಥರಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸುತ್ತಿರುವ ಆಡಿಯೋ ಟೇಪ್‌ವೊಂದು ಈಗ ಬಿಡುಗಡೆಯಾಗಿದೆ.

Advertisement

ಈ ಆಡಿಯೋ ಅಮೆರಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಅಧ್ಯಕ್ಷೀಯ ಚುನಾ ವಣೆಯಲ್ಲಿ ಸೋಲುಂಡ ಟ್ರಂಪ್‌ಗೆ ತೀವ್ರ ಮುಖಭಂಗ ವಾಗಿದೆ. ಒಂದು ಗಂಟೆ ಕಾಲ ಚುನಾವಣ ಅಧಿಕಾರಿಯೊಂದಿಗೆ ಟ್ರಂಪ್‌ ಮಾತನಾಡಿರುವ ಆಡಿಯೋವನ್ನು ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಯೊಂದು ರಹಸ್ಯವಾಗಿ ರೆಕಾರ್ಡ್‌ ಮಾಡಿಕೊಂಡಿತ್ತು. ಜಾರ್ಜಿಯಾದಲ್ಲಿ ಟ್ರಂಪ್‌ 11,779 ಮತಗಳಿಂದ ಸೋತಿದ್ದರು. “ಬೈಡೆನ್‌ ಗೆಲುವನ್ನು ತಪ್ಪಿಸಲೇಬೇಕಾಗಿದೆ. ನಾನು ಜಯಗಳಿಸಲುಬೇಕಾದ 11,780 ಮತಗಳನ್ನು ಹೇಗಾದರೂ ಮಾಡಿ ಜೋಡಿಸಿ’ ಎಂದು ಟ್ರಂಪ್‌ ಕೇಳಿಕೊಂಡಿದ್ದರು. ಟ್ರಂಪ್‌ ಅವರ ಈ ಕೃತ್ಯವು ಅಧಿಕಾರದ ದುರ್ಬಳಕೆ ಹಾಗೂ ಸಂಭಾವ್ಯ ಕ್ರಿಮಿನಲ್‌ ಅಪರಾಧ ಎಂದು ಕಾನೂನು ತಜ್ಞರು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next