Advertisement
ನವದೆಹಲಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕರು, ”ಮುಂದಿನ ವಾರದ ಸಂಸತ್ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಜತೆಗೆ, ಆಡಿಯೋ ಟೇಪ್‌ನಲ್ಲಿ ನ್ಯಾಯಮೂರ್ತಿಗಳನ್ನು ಶಾ ನಿಭಾಯಿಸುತ್ತಾರೆಂದು ಯಡಿಯೂರಪ್ಪ ಅವರು ಹೇಳಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯ್ ಅವರೇ, ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆಗೆ ಮುಂದಾಗಬೇಕು” ಎಂದು ಆಗ್ರಹಿಸಿದ್ದಾರೆ.
Related Articles
Advertisement
ಕೆಜಿಎಫ್: ‘ಯಡಿಯೂರಪ್ಪ ನನಗೆ ಪರಿಚಿತರು. ಅವರ ಧ್ವನಿ ಚೆನ್ನಾಗಿ ಗೊತ್ತು. ಅನೇಕರು ಬೇರೆ ಮೊಬೈಲ್‌ನಲ್ಲಿ ಫೋನ್ ಮಾಡು ತ್ತಾರೆ. ಅವರ ಹೆಸರು ಮೊಬೈಲ್‌ನಲ್ಲಿ ಫೀಡ್ ಆಗದಿ ದ್ದರೂ, ಧ್ವನಿ ಕೇಳಿದ ತಕ್ಷಣ ಯಾರೆಂದು ತಿಳಿಯುತ್ತದೆ. ಸಹಜವಾಗಿ ಅದು ಅವರದ್ದು ಅಲ್ಲ’ ಎಂದು ಹೇಳಿದ್ದೇನೆ ಎಂದು ರಮೇಶ್‌ಕುಮಾರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು ಪತ್ರ ಬರೆದಿದ್ದು ಆಡಿಯೋವನ್ನೂ ಕಳುಹಿಸಿ ದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ಕೇಳಿದ್ದೇನೆ. ಇನ್ನೊಂದು ಆಡಿಯೋ ಬಗ್ಗೆ ತನಗೆ ತಿಳಿದಿಲ್ಲ. ಮುಖ್ಯಮಂತ್ರಿಗಳು ಕಳುಹಿಸಿರುವ ಆಡಿಯೋ ಸಂಬಂಧ ಸೋಮವಾರ ಸದನ ಸೇರಿದಾಗ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಸಮಾಧಾನಕ್ಕೆ ಉತ್ತರಿಸಬೇಕಿದೆ: ಅಸೆಂಬ್ಲಿಯಲ್ಲಿ ಸ್ಪೀಕರ್ ಆಗಿ ಹೊರಗೆ ಮಾತನಾಡುವ ಹಾಗಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಬರಲು ತನ್ನ ಹೆಸರನ್ನು ಎಲ್ಲೋ ಒಂದು ಕಡೆ ಎಳೆದಿದ್ದಾರೆಂಬ ವಿಚಾರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಾಧಾನ ಆಗಲು ಉತ್ತರ ನೀಡಬೇಕಾಗಿದೆ ಎಂದರು.
ಊಹಾಪೋಹ: ಸದನದಲ್ಲಿ ಕುದುರೆ ವ್ಯಾಪಾರದ ಬಗ್ಗೆ ತನ್ನ ಮುಂದೆ ಚರ್ಚೆ ನಡೆದಿಲ್ಲ. ಇವೆಲ್ಲಾ ಊಹಾಪೋಹ. ಯಾವುದೇ ರಾಜಕೀಯ ಪಕ್ಷದವರು ಅವರ ಪಕ್ಷದಿಂದ ಆರಿಸಿ ಬಂದವರು, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಇಲ್ಲವೇ ಸದಸ್ಯತ್ವ ಬಿಟ್ಟುಕೊಡುತ್ತಿದ್ದೇವೆ ಎಂಬ ಬಗ್ಗೆ ಯಾವ ಪಕ್ಷದವರೂ ದೂರು ನೀಡಿಲ್ಲ ಎಂದರು.
ಬಿಎಸ್‌ವೈ ಆಮಿಷ ಗಂಭೀರ ಪರಿಗಣನೆ
ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಾಸಕರಿಗೆ ಆಮಿಷವೊಡ್ಡಿರುವ ಧ್ವನಿಸುರುಳಿಯಲ್ಲಿ ಸ್ಪೀಕರ್ ಅವರ ಹೆಸರು ಉಲ್ಲೇಖವಾಗಿರುವುದರಿಂದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಧ್ವನಿಸುರುಳಿ ಕುರಿತು ಸಭಾಧ್ಯಕ್ಷ ರಮೇಶ ಕುಮಾರ ಸೋಮವಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ತನಿಖೆಯಾಗಬೇಕು. ಈ ಕುರಿತು ಕಾಂಗ್ರೆಸ್ ಎಸಿಬಿಗೆ ದೂರು ಕೊಡುವ ಕುರಿತು ಚಿಂತನೆ ನಡೆಸಿದೆ. ಗೃಹ ಇಲಾಖೆ ಸಹ ಧ್ವನಿಸುರುಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅದನ್ನು ಎಫ್ಎಸ್‌ಎಲ್ ವರದಿಗೆ ಕಳುಹಿಸಿದರೆ ಸತ್ಯಾಸತ್ಯತೆ ಬಯಲಿಗೆ ಬರಲಿದೆ. ಈ ಕುರಿತು ಚಿಂತನೆ ನಡೆದಿದೆ ಎಂದರು.
ನಕಲಿ ಸಿಡಿ ಸೃಷ್ಟಿ: ಆರೋಪ
ಬೆಂಗಳೂರು: ಬಜೆಟ್ ಮಂಡಿಸುತ್ತೇನೋ, ಇಲ್ಲವೋ ಎಂಬ ಆತಂಕದಲ್ಲಿದ್ದ ಕುಮಾರಸ್ವಾಮಿ, ಸರ್ಕಾರದ ವೈಫಲ್ಯ ಮುಚ್ಚಿಡುವುದಕ್ಕಾಗಿ ಬಿ.ಎಸ್.ಯಡಿಯೂ ರಪ್ಪ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಜನತೆಗೆ ಮುಖ್ಯಮಂತ್ರಿ ತಪ್ಪು ಸಂದೇಶ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ನವರಿಗೆ ನಕಲಿ ಮಾಹಿತಿ ಬಿಡುಗಡೆ ಮಾಡುವುದೇ ಅಭ್ಯಾಸವಾಗಿದೆ. ಉಗ್ರಪ್ಪ ಕೂಡ ಈ ಹಿಂದೆ ನಕಲಿ ಆಡಿಯೋ ಬಿಡುಗಡೆ ಮಾಡಿದ್ದರು. ಆಗ ಕಾಂಗ್ರೆಸ್‌ನ ಶಿವರಾಮ್ ಹೆಬ್ಟಾರ್ ಅವರೇ ಛೀಮಾರಿ ಹಾಕಿದ್ದರು. ಬಿಎಸ್‌ವೈ-ಅನಂತ್ ಕುಮಾರ್ ಮಾತಾ ಡಿದ್ದಾರೆ ಎಂದು ಉಗ್ರಪ್ಪ ಇನ್ನೊಂದು ನಕಲಿ ಸಿಡಿಯಲ್ಲಿ ಆರೋಪ ಮಾಡಿದ್ದರು. ಇದರ ದೂರು ನೀಡಿದ್ದೇವೆ. ಕುಮಾರಸ್ವಾಮಿ ಕೂಡ ಯಡಿಯೂರಪ್ಪ ಅವರನ್ನು ಬ್ಲಾಕ್‌ವೆುೕಲ್ ಮಾಡಲು ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.