Advertisement

Audio controversy: ಬಿ.ಸಿ.ರೋಡ್‌: ಉದ್ವಿಗ್ನಗೊಂಡು ತಿಳಿಯಾದ ಪರಿಸ್ಥಿತಿ

02:10 AM Sep 17, 2024 | Team Udayavani |

ಬಂಟ್ವಾಳ: ಮಿಲಾದ್‌ ರ್‍ಯಾಲಿಗೆ ಸಂಬಂಧಿಸಿ ಸವಾಲೆಸೆದಿರುವ ಆಡಿಯೋ ವಿವಾದ ತಾರಕಕ್ಕೇರಿದ್ದು, ಸೋಮವಾರ ಬೆಳಗ್ಗೆ ಸಾವಿರಾರು ಹಿಂದೂ ಸಂಘಟನೆ ಕಾರ್ಯಕರ್ತರು ಬಿ.ಸಿ.ರೋಡಿನಲ್ಲಿ ಜಮಾಯಿಸಿದ್ದರು. ಒಂದು ಹಂತದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದರೂ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ತಿಳಿಗೊಂಡಿದೆ.

Advertisement

ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಹಾಕಿದ ಸವಾಲಿಗೆ ಉತ್ತರವೆಂಬಂತೆ ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪುವೆಲ್‌ ಬಿ.ಸಿ.ರೋಡಿಗೆ ಆಗಮಿಸಿದ್ದರು. ಅವರು ತಲುಪುತ್ತಿದ್ದಂತೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯ ಬಳಿ ಮೊದಲೇ ಸೇರಿದ್ದ ಸಹಸ್ರಾರು ಹಿಂದೂ ಕಾರ್ಯಕರ್ತರು ಹೆದ್ದಾರಿಯತ್ತ ನುಗ್ಗಿದರು. ಈ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆಯ ಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಪೊಲೀಸರು ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆಯಲೂ ಪ್ರಯತ್ನಿಸಿದರು. ಆದರೆ ಕಾರ್ಯಕರ್ತರು ಮತ್ತೆ ಸನ್ನಿಧಿಯತ್ತ ಮರಳಿದ್ದು, ಶರಣ್‌ ಪಂಪುವೆಲ್‌ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮಿಲಾದ್‌ ರ್‍ಯಾಲಿಗೆ ತಡೆ
ಮಿಲಾದ್‌ ರ್‍ಯಾಲಿಯನ್ನು ಬಿ.ಸಿ. ರೋಡು ಪೇಟೆಗೆ ಬರಲು ಬಿಡಬಾರದು ಎಂದು ಕಾರ್ಯಕರ್ತರು ಪೊಲೀಸರಲ್ಲಿ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೈಕಂಬ, ಗೂಡಿನಬಳಿ ಭಾಗದಿಂದ ಆಗಮಿಸಿದ ರ್ಯಾಲಿಯನ್ನು ತಡೆಹಿಡಿದರು. ಆದರೆ 11 ಗಂಟೆ ಸುಮಾರಿಗೆ ಕೈಕಂಬ ಭಾಗದಿಂದ ಒಂದಷ್ಟು ಯುವಕರು ಏಕಾಏಕಿ ಬೈಕಿನಲ್ಲಿ ಘೋಷಣೆ ಕೂಗುತ್ತಾ ರ್ಯಾಲಿಯ ಮೂಲಕ ಆಗಮಿಸಿದ್ದು, ಈ ವೇಳೆ ಮತ್ತೆ ಹಿಂದೂ ಕಾರ್ಯಕರ್ತರು ಜಮಾಯಿಸಿ ಬಿಗುವಿನ ಸ್ಥಿತಿ ನಿರ್ಮಾಣವಾಯಿತು.ನೀವು ಮಿಲಾದ್‌ ರ್ಯಾಲಿ ಬರಲು ಬಿಡುವುದಿಲ್ಲ ಎಂದು ಹೇಳಿ ರ್ಯಾಲಿಗೆ ಅವಕಾಶ ನೀಡಿದ್ದೀರಿ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರ್ಯಾಲಿಯಲ್ಲಿ ಆಗಮಿಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ಸವಾಲು ಹಾಕಿರುವ ಆರೋಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಮರಳು ದಂಧೆಯಲ್ಲೂ ನಿರತರಾಗಿದ್ದು, ಅವರ ವಿರುದ್ಧ ಕಾಟಾಚಾರದ ಪ್ರಕರಣ ದಾಖಲಿಸುವುದು ಬೇಡ ಎಂದು ಎಸ್‌ಪಿಯವರನ್ನು ಆಗ್ರಹಿಸಿದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್‌.ಚೆನ್ನಪ್ಪ ಕೋಟ್ಯಾನ್‌, ಹಿಂಜಾವೇ, ವಿಹಿಂಪ, ಬಜರಂಗ ದಳದ ಮುಂದಾಳುಗಳಾದ ಪುನೀತ್‌ ಅತ್ತಾವರ, ಪ್ರಸಾದ್‌ಕುಮಾರ್‌ ರೈ, ಭಾಸ್ಕರ್‌ ಧರ್ಮಸ್ಥಳ, ನರಸಿಂಹ ಮಾಣಿ, ನವೀನ್‌ ನೆರಿಯ, ಭುಜಂಗ ಕುಲಾಲ್‌, ಮಿಥುನ್‌ ಕಲ್ಲಡ್ಕ, ಭರತ್‌ ಕುಮೆxàಲು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌ ಹಾಗೂ ದ.ಕ. ಎಸ್‌ಪಿ ಯತೀಶ್‌ ಎನ್‌. ನೇತೃತ್ವದಲ್ಲಿ ಅಡಿಷನಲ್‌ ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಹಾಗೂ ನೂರಾರು ಪೊಲೀಸ್‌ ಸಿಬಂದಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಜತೆಗೆ ಕೆಎಸ್‌ಆರ್‌ಪಿ, ಕೇಂದ್ರೀ ಯ ಮೀಸಲು ಪೊಲೀಸ್‌ ಪಡೆಗಳನ್ನೂ ನಿಯೋಜಿಸಲಾಗಿತ್ತು. ಮಂಗಳೂರು ಸಹಾಯಕ ಕಮಿಷನರ್‌ ಹರ್ಷವರ್ಧನ ಪಿ.ಜೆ., ತಹಶೀಲ್ದಾರ್‌ ಅರ್ಚನಾ ಡಿ.ಭಟ್‌ ಹಾಗೂ ಕಂದಾಯ ಇಲಾಖೆ ಸಿಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದರು.

Advertisement

ಸವಾಲಿಗೆ ಉತ್ತರ ನೀಡಿದ್ದೇವೆ: ಶರಣ್‌ ಪಂಪುವೆಲ್‌
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರಣ್‌ ಪಂಪುವೆಲ್‌, ನಾಗಮಂಗಲ ಗಲಭೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಾನು ನೀಡಿದ ಹೇಳಿಕೆಗೆ ಸಂಬಂಧಿಸಿ ಆತ ಬಿ.ಸಿ.ರೋಡಿಗೆ ಬನ್ನಿ, ನಮ್ಮ ಮೆರೆವಣಿಗೆಯನ್ನು ತಡೆಯಿರಿ ಎಂಬ ಸವಾಲು ಹಾಕಿದ್ದು, ಇದು ಶರಣ್‌ ಪಂಪುವೆಲ್‌ಗೆ ಹಾಕಿದ ಸವಾಲಲ್ಲ, ಹಿಂದೂ ಸಮಾಜ, ಸಂಘಟನೆ ಗಳಿಗೆ ಹಾಕಿದ ಸವಾಲಾಗಿದೆ. ಆತನ ಸವಾಲಿಗೆ ಉತ್ತರವಾಗಿ ಬಿ.ಸಿ.ರೋಡಿಗೆ ಬಂದು ಸಾವಿರಾರು ಕಾರ್ಯಕರ್ತರು ಸೇರುವ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದರು.

ಮೆರವಣಿಗೆ, ಪ್ರತಿಭಟನೆಗೂ ಅವಕಾಶ
ಪತ್ರಕರ್ತರ ಜತೆ ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌. ಮಾತನಾಡಿ, ಸವಾಲನ್ನು ಸ್ವೀಕಾರ ಮಾಡುತ್ತೇವೆ ಎಂದು ಹಿಂದೂ ಕಾರ್ಯ ಕರ್ತರು ಬಿ.ಸಿ.ರೋಡಿನಲ್ಲಿ ಜಮಾ ಯಿಸಿದ್ದು, ಅದಕ್ಕೆ ಅನುಗುಣವಾಗಿ ಪೊಲೀಸ್‌ ಇಲಾಖೆಯಿಂದ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ
ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದೇವೆ. ಹಬ್ಬದ ಮೆರ ವಣಿಗೆಗೆ ಯಾವುದೇ ರೀತಿಯ ತಡೆ ನೀಡದೆ ಅವಕಾಶ ನೀಡಿದ್ದು, ಜತೆಗೆ ಕಾನೂನು ಮೀರದಂತೆ ಪ್ರತಿಭಟನೆಗೂ ಅವಕಾಶ ನೀಡಿದ್ದೇವೆ. ಆಡಿಯೋ ವೈರಲ್‌ ವಿಚಾರಕ್ಕೆ ಸಂಬಂಧಿಸಿ ಇಬ್ಬರನ್ನೂ ಈಗಾಗಲೇ ಬಂಧಿಸಲಾಗಿದೆ. ಹಬ್ಬಕ್ಕೆ ಪೂರ್ವಭಾವಿಯಾಗಿ ಶಾಂತಿ ಸಭೆಗಳನ್ನು ಮಾಡಿ ಸೂಚನೆ ನೀಡಿದ್ದು, ಅವರ ಸಲಹೆಗಳನ್ನೂ ಪಡೆದು ಕೊಂಡಿದ್ದೇವೆ ಎಂದು ತಿಳಿಸಿದರು.

ಹೆದ್ದಾರಿ ಸಂಪೂರ್ಣ ಬ್ಲಾಕ್‌
ಹಿಂದೂ ಸಂಘಟನೆಗಳ ಕಾರ್ಯ ಕರ್ತರು ಹೆದ್ದಾರಿಗೆ ನುಗ್ಗುತ್ತಿದ್ದಂತೆ ಪೊಲೀಸರು ಹೆದ್ದಾರಿಯ ಎರಡೂ ಬದಿಯ ವಾಹನಗಳನ್ನು ತಡೆದಿದ್ದು, ಈ ವೇಳೆ ಸಂಪೂರ್ಣ ಟ್ರಾಫಿಕ್‌ ಜಾಮ್‌ ಉಂಟಾಯಿತು. ಬಳಿಕ ಸರ್ವೀಸ್‌ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ಎರಡೂ ಬದಿಯ ವಾಹನಗಳನ್ನು ಫ್ಲೆ$çಓವರ್‌ ಮೂಲಕ ಕಳುಹಿಸಿಕೊಡಲಾಯಿತು. ಸುಮಾರು ಎರಡು ತಾಸುಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತ್ತು. ಬಳಿಕ ಪೇಟೆಯಲ್ಲಿ ಜನಸಂಚಾರ ವಿರಳವಾಗಿತ್ತು

ಬಂಟ್ವಾಳ ಪುರಸಭಾ ವ್ಯಾಪ್ತಿ: 48 ಗಂಟೆ ಮದ್ಯದಂಗಡಿ ಬಂದ್‌
ಬಂಟ್ವಾಳ: ಬಂಟ್ವಾಳದಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ಅವರು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 48 ಗಂಟೆಗಳ ಕಾಲ ಮದ್ಯದಂಗಡಿಗಳನ್ನು ಬಂದ್‌ ಮಾಡಿ ಆದೇಶ ನೀಡಿದ್ದಾರೆ. ಬಂಟ್ವಾಳ ತಹಶೀಲ್ದಾರ್‌ ಕೋರಿಕೆಯಂತೆ ಡಿ.ಸಿ.ಯವರು ಘೋಷಣೆ ಮಾಡಿರುತ್ತಾರೆ.

ಭಾರೀ ಸಂಖ್ಯೆಯ ಪೊಲೀಸ್‌ ನಿಯೋಜನೆ
ಹೇಳಿಕೆ, ಪ್ರತಿ ಹೇಳಿಕೆ, ಸವಾಲಿನ ಹಿನ್ನೆಲೆಯಲ್ಲಿ ಬಿ.ಸಿ. ರೋಡ್‌ ಪರಿಸರದಲ್ಲಿ ಸೋಮವಾರ ಭಾರೀ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. 6 ಕೆಎಸ್‌ಆರ್‌ಪಿ ಬಸ್‌, ಕೇಂದ್ರ ಮೀಸಲು ಪೊಲೀಸ್‌ ಪಡೆ ಮತ್ತು ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ನ ನಾಲ್ಕು ಬಸ್‌ ಹಾಗೂ ಜಿಲ್ಲಾ ಸಶಸ್ತ್ರ ಪೊಲೀಸ್‌ ಪಡೆಯ 3 ವಾಹನ ಮತ್ತು ಜಿಲ್ಲೆಯ ವಿವಿಧ ಠಾಣೆಗಳಿಂದ 200 ಮಂದಿ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ಶರಣ್‌, ಪುನೀತ್‌ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಈದ್‌ ಮಿಲಾದ್‌ ಮೆರವಣಿಗೆ ಬಗ್ಗೆ ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪುವೆಲ್‌ ಮತ್ತು ಬಜರಂಗದಳದ ಪುನೀತ್‌ ಅತ್ತಾವರ ವಿರುದ್ಧ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next