Advertisement

ಆಡಿ ಸಂಸ್ಥೆ ಸಿಇಒ ಬಂಧನ

12:05 PM Jun 19, 2018 | Harsha Rao |

ಫ್ರಾಂಕ್‌ಫ‌ರ್ಟ್‌: ವೋಕ್ಸ್‌ವ್ಯಾಗನ್‌ ಸಂಸ್ಥೆಯ ಡೀಸೆಲ್‌ಗೇಟ್‌ ಪ್ರಕರಣಕ್ಕೆ ಸ‌ಂಬಂಧಿಸಿದಂತೆ ಆಡಿ ಸಂಸ್ಥೆಯ ಸಿಇಒ ರುಪರ್ಟ್‌ ಸ್ಟಾಡ್ಲರ್‌ರನ್ನು ಜರ್ಮನಿಯ ಫ್ರಾಂಕ್‌ಫ‌ರ್ಟ್‌ ನಲ್ಲಿ ಬಂಧಿಸಲಾಗಿದೆ. ಯುರೋಪ್‌ ಮಾರುಕಟ್ಟೆಯಲ್ಲಿ ಡೀಸೆಲ್‌ ಧೂಮ ಹೊರಸೂಸುವಿಕೆ ಪ್ರಮಾಣವನ್ನು

Advertisement

ಸಾಫ್ಟ್ವೇರ್‌ ಬಳಸಿ ವಂಚಿಸಿದ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ವೋಕ್ಸ್‌ವ್ಯಾಗನ್‌ನ ಅಂಗಸಂಸ್ಥೆಯಾಗಿರುವ ಆಡಿ ಸಾಫ್ಟ್ ವೇರ್‌ ವಿಭಾಗವೂ ಈ ಸಾಫ್ಟ್ವೇರ್‌ ನಿರ್ಮಾಣದಲ್ಲಿ ಸಹಾಯ ಮಾಡಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶದ ಸಾಧ್ಯತೆಯಿರುವುದರಿಂದ ರುಪರ್ಟ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಟಾಡ್ಲರ್‌ ಮನೆಯ ಮೇಲೆ ದಾಳಿ ನಡೆಸಿದ ಮ್ಯೂನಿಚ್‌ ಪೊಲೀಸರು, ವಾಹನದ ಮಾಲಿನ್ಯ ಪ್ರದೂಷಣೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next