ಚಿಂತಾಮಣಿ: ಯಾವುದೇ ರೀತಿಯ ಪ್ರಚಾರಮಾಡದೆ ತಾಲೂಕಿನ ಕೆರೆಗಳನ್ನು ಮೀನುಗಾರಿಕೆ ಇಲಾಖೆಯು ಮೀನು ಸಾಕಾಣಿಕೆಗೆ ಹರಾಜು ಪ್ರಕ್ರಿಯೆ ನಡೆಸುತ್ತಿದ್ದನ್ನು ಖಂಡಿಸಿ ತಾಲೂಕಿನ ಸಾರ್ವಜನಿಕರು ಮತ್ತು ಗುತ್ತಿಗೆದಾರರು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಗರದ ಮೀನುಗಾರಿಕೆ ಇಲಾಖೆಯಲ್ಲಿ ನಡೆಯಿತು.
2020-21ನೇ ಸಾಲಿನಿಂದ2024-25ರ ವರೆಗೆ ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕನ್ನು 5 ವರ್ಷಗಳ ಕಾಲಕ್ಕೆ ಟೆಂಡರ್ ಮತ್ತು ಹರಾಜು ಪ್ರಕ್ರಿಯೆ ನಗರದ ಮೀನುಗಾರಿಕೆ ಇಲಾಖೆಯಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಟೆಂಡರ್ ಮತ್ತು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾರ್ವಜನಿಕರು ಮತ್ತು ಹರಾಜುದಾರರು ಇಲಾಖೆ ಮತ್ತು ಗ್ರಾಪಂ ವತಿಯಿಂದ ಯಾವುದೆ ರೀತಿಯ ಪ್ರಚಾರ ಮಾಡಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೋಟಗಲ್ ಗ್ರಾಪಂನಲ್ಲಿ ಪ್ರಚಾರವೇ ಇಲ್ಲಾ: ತಾಲೂಕಿನ ಕೋಟಗಲ್ ಅಮಾನಿಕೆರೆ,ಕೋರ್ಲಾಪರ್ತಿ ಪಾಪತಿಮ್ಮನಹಳ್ಳಿ ರಾಜನವೂಡೆಡು ಕೆರೆ, ದೊಡ್ಡಗಂಜೂರು ಕೆರೆ, ಕೊಡದವಾಡಿ ಕೆರೆ ಮತ್ತು ಬಸವನಪುರ ಗಬ್ಬಿನಾಯಕನ ಕೆರೆಗಳ ಹರಾಜು ಪ್ರಕ್ರಿಯೆ ಏರ್ಪಡಿಸಿದ್ದ ಈ ಪೈಕಿ ಕೋಟಗಲ್ ಗ್ರಾಪಂ ವ್ಯಾಪ್ತಿಯ ಕೋಟಗಲ್ ಅಮಾನಿಕೆರೆಯಬಗ್ಗೆ ಗ್ರಾಪಂ ಮತ್ತು ಮೀನುಗಾರಿಕೆ ಇಲಾಖೆಯವರು ಪ್ರಚಾರ ಮಾಡದೆ ಟೆಂಡರ್ ಪ್ರಕಿಯೆ ನಡೆಸಿದ್ದಕ್ಕೆ ಕೋಟಗಲ್ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಾಗ್ವಾದ: ಪ್ರಚಾರ ಮಾಡದೆ ಹರಾಜು ಮತ್ತು ಟೆಂಡರ್ ನಡೆಸುತ್ತಿದ್ದನ್ನು ನಿಲ್ಲಿಸುವಂತೆ ಒತ್ತಾಯಿಸಿದ ಸಾರ್ವಜನಿಕರ ವಿರುದ್ಧ ನಿರ್ಲಕ್ಷ್ಯವಾಗಿ ಮಾತನಾಡಿದ ಜಿಲ್ಲಾ ಉಪನಿರ್ದೆಶಕರ ಮಾತುಗಳಿಗೆ ಕುಪಿತಗೊಂಡ ಸಾರ್ವಜನಿಕರು ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದರು.
ಟೆಂಡರ್ ಬಾಕ್ಸ್ ಇಲ್ಲದೇ ಹರಾಜು: ಯಾವುದೇ ಇಲಾಖೆಯ ಟೆಂಡರ್‌ಗಳನ್ನು ಹರಾಜು ಮಾಡುವ ವೇಳೆ ಟೆಂಡರ್ ಅರ್ಜಿ ಹಾಕಲು ಒಂದು ಟೆಂಡರ್ ಬಾಕ್ಸ್ ಇಟ್ಟು ಅದರಲ್ಲಿ ಫಾರಂಗಳನ್ನು ಇಟ್ಟು ಹರಾಜು ನಡೆದ ನಂತರ ಫಾರಂಗಳನ್ನುತೆರೆಯತಕ್ಕದ್ದು. ಆದರೆ ಹರಾಜಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಳಿದ್ದರೂ ಸಹ ಟೆಂಡರ್ ಬಾಕ್ಸ್ ಇಡದೆ ಬಹಿರಂಗವಾಗಿ ಅರ್ಜಿಗಳನ್ನು ಪರಿಶೀಲನೆ ಮಾಡಿದ್ದು ಆಕ್ರೋಶಕ್ಕೆಕಾರಣವಾಯಿತು.
ಟೆಂಡರ್ ಮುಂದೂಡಿಕೆ: ಸಾರ್ವಜನಿಕರ ಒತ್ತಾಯ ಹಾಗೂ ಪ್ರಚಾರದ ಕೊರತೆಯಿಂದಹರಾಜುಪ್ರಕ್ರಿಯೆಯಲ್ಲಿಹೆಚ್ಚಿನಹರಾಜುದಾರರು ಪಾಲ್ಗೊಳ್ಳದ ಕಾರಣ ಕೆರೆಗಳ ಟೆಂಡರ್ ಮತ್ತು ಹರಾಜು ಪ್ರಕ್ರಿಯೆ ಮುಂದೂಡಳಾಗಿದ್ದು,ಪ್ರಚಾರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪಿಡಿಒಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗು ವುದಾಗಿ ತಾಲೂಕು ಸಹಾಯಕ ನಿರ್ದೆಶಕ ಭರತ್‌ಕುಮಾರ್ ತಿಳಿಸಿದರು. ಹರಾಜು ಪ್ರಕ್ರಿಯೆಯಲ್ಲಿ ಜಿಲ್ಲಾ ಉಪನಿರ್ದೇಶಕಿ ಯಶಸ್ವಿನಿ ಹಾಜರಿದ್ದರು.