Advertisement

510 ಕೋಟಿ ರೂ.ಗೆ ‘ಬಾರ್’ ಹರಾಜು…ಹಳ್ಳಿಯ ‘ಮದ್ಯದಂಗಡಿ’ಗೆ ಭಾರಿ ಡಿಮ್ಯಾಂಡ್

03:49 PM Mar 08, 2021 | Team Udayavani |

ರಾಜಸ್ಥಾನ : ಇಲ್ಲಿನ ಹನುಮಾನಗರ್ ಜಿಲ್ಲೆಯ ಹಳ್ಳಿಯ ಮದ್ಯದಂಗಡಿಯೊಂದು 510 ಕೋಟಿ ರೂ.ಗೆ ಹರಾಜುಗೊಂಡು ಗಮನ ಸೆಳೆದಿದೆ.

Advertisement

ಅಬಕಾರಿ ಇಲಾಖೆ ನಡೆಸಿದ ಇ-ಹರಾಜು ಪ್ರಕ್ರಿಯೆಯಲ್ಲಿ ನೊಹಾರ್ ಗ್ರಾಮದಲ್ಲಿಯ ಬಾರ್ ಅತೀ ಹೆಚ್ಚು ಹಣಕ್ಕೆ ಬಿಕರಿಯಾಗಿದೆ. ಮುಂಜಾನೆ 11 ಗಂಟೆಗೆ ಪ್ರಾರಂಭವಾದ ಹರಾಜು ಪ್ರಕ್ರಿಯೆ ಮಧ್ಯರಾತ್ರಿ 2 ಗಂಟೆಗೆ ಕೊನೆಗೊಂಡಿದೆ. ಈ ಬಾರ್ ಮೂಲ ಬೆಲೆ 72 ಲಕ್ಷ ನಿಗದಿಯಾಗಿತ್ತು. ಆದರೆ, ಹರಾಜಿನಲ್ಲಿ ಬರೋಬ್ಬರಿ 510 ಕೋಟಿ ರೂ. ಬೆಲೆ ಪಡೆದುಕೊಂಡಿದೆ. ಈ ಮಟ್ಟದಲ್ಲಿ ಬೇಡಿಕೆ ಬಂದಿರುವುದು ಅಬಕಾರಿ ಇಲಾಖೆಯ ಅಧಿಕಾರಿಗಳನ್ನೇ ಚಕಿತರನ್ನಾಗಿಸಿದೆ. ಕಳೆದ ವರ್ಷ 65 ಲಕ್ಷ ರೂ.ಗಳಿಗೆ ಇದೇ ಬಾರ್ ಬಿಕರಿಯಾಗಿತ್ತು.

ಈ ಹಿಂದಿನ ಬಿಜೆಪಿ ಅಧಿಕಾರದ ವೇಳೆ ಮಾಜಿ ಮುಖ್ಯಮಂತ್ರಿ ವಸುಂದರಾ ರಾಜೆ ಮದ್ಯದಂಗಡಿ ಹರಾಜು ವ್ಯವಸ್ಥೆ ರದ್ದುಪಡಿಸಿದ್ದರು. ಆದರೆ, ಹಾಲಿ ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್  ಇ-ಹರಾಜು  ವ್ಯವಸ್ಥೆಗೆ ಮರುಚಾಲನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next