Advertisement
ಹಿಂದೆ ಗ್ರಾಮದ ಅಭಿವೃದ್ಧಿ,ದೇಗುಲ ನಿರ್ಮಾಣ, ಜೀರ್ಣೋದ್ಧಾರ, ಇತರೆ ಸಾಮಾಜಿಕ ಸೇವಾ ಕಾರ್ಯಕ್ಕೆ ದೇಣಿಗೆ ನೀಡುವ ಅಭ್ಯರ್ಥಿಗೆ ಷರತ್ತು ವಿಧಿಸಿ ಒಮ್ಮತದಿಂದ ಆಯ್ಕೆ ಮಾಡುವುದು ಅಲ್ಲಲ್ಲಿ ನಡೆಯುತ್ತಿತ್ತು. ಈಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಸದಸ್ಯ ಸ್ಥಾನವನ್ನೇ ಹಣಕ್ಕಾಗಿ ಹರಾಜು ಹಾಕುತ್ತಿರುವ ಬೆಳವಣಿಗೆಗಳು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತದ್ದಾಗಿದೆ.
Related Articles
Advertisement
2 ಸ್ಥಾನ ತಲಾ 2 ಲಕ್ಷಕ್ಕೆ ಹರಾಜು:
ಕೆಂಬಾಳು ಗ್ರಾಪಂನ ಬೈರಾಪುರದಲ್ಲಿ ಎರಡು ಸ್ಥಾನಕ್ಕೆ ಹರಾಜು ಆಗಿದ್ದು, ಬಿಸಿಎಂಎ ಸ್ಥಾನ 2 ಲಕ್ಷ ರೂ., ಸಾಮಾನ್ಯ ಸ್ಥಾನ 5 ಲಕ್ಷ ರೂ., ಕಕ್ಕೇಹಳ್ಳಿಯಲ್ಲಿ ಗ್ರಾಮಸ್ಥರು ಸಭೆ ಸೇರಿ ಗ್ರಾಮಕ್ಕೆ 4.50 ಲಕ್ಷ ರೂ. ಯಾರು ನೀಡುತ್ತಾರೋಅವರನ್ನು ಸದಸ್ಯರನ್ನಾಗಿಮಾಡುವಂತೆ ತಿಳಿಸಿದ್ದರಿಂದ ಸಾಮಾನ್ಯ ಸ್ಥಾನದ ವ್ಯಕ್ತಿಯೋರ್ವ ಹಣ ಕೊಡುವ ಮೂಲಕ ಪರೋಕ್ಷವಾಗಿ ಹರಾಜಿನಲ್ಲಿ ಸದಸ್ಯರಾಗಲು ಹೊರಟಿದ್ದಾನೆ.
ಗೊಂದಲ ಸೃಷ್ಟಿ: ಬಾಗೂರು ಹೋಬಳಿ ಅಣತಿ ಗ್ರಾಮದಲ್ಲಿ ನಾಲ್ಕು ಸ್ಥಾನಕ್ಕೆ ಮಾತುಕತೆ ನಡೆದಿದ್ದು, ಎರಡು ಸ್ಥಾನ ಬಿಜೆಪಿ ಬೆಂಬಲಿತರು ಒಂದು ಸ್ಥಾನಜೆಡಿಎಸ್, ಮತ್ತೂಂದು ಸ್ಥಾನ ಕಾಂಗ್ರೆಸ್‌ಗೆ ಒಪ್ಪಿಗೆಆಗಿತ್ತು. ಆದರೆ, ಸಭೆಯಲ್ಲಿ ಗೊಂದಲ ಸೃಷ್ಟಿ ಆಗಿದ್ದರಿಂದ ನಾಲ್ಕು ಸ್ಥಾನಕ್ಕೆ ಮೂರು ಪಕ್ಷದವರು ಅಭ್ಯರ್ಥಿಯನ್ನುಕಣಕ್ಕೆ ಇಳಿಸಿದ್ದಾರೆ. ಹಿರೀಸಾವೆ ಹೋಬಳಿ ದಿಡಗ ಹಳೇ ಗ್ರಾಮದ ಮೂರು ಸ್ಥಾನಗಳಿಂದ ಮಾರಮ್ಮ ದೇವಸ್ಥಾನ ನಿರ್ಮಾಣಕ್ಕೆ 11 ಲಕ್ಷ ರೂ. ಪಡೆಯಲು
ತೀರ್ಮಾನವಾಗಿದೆ. ಕರಿಕ್ಯಾತನಹಳ್ಳಿ 17 ಲಕ್ಷ ರೂ. ಮತ್ತು ಮೇಳಹಳ್ಳಿ 3 ಲಕ್ಷ ರೂ. ಅನ್ನು ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣಕ್ಕೆ ನೀಡಲುಒಪ್ಪಿಗೆಯಾಗಿದೆ. ಹೊಸಹಳ್ಳಿ ಮತ್ತು ನಾಗನಹಳ್ಳಿ ಗ್ರಾಮಗಳ 3 ಸ್ಥಾನಗಳು 16 ಲಕ್ಷ ರೂ.ಗೆ ಮಾತುಕತೆ ನಡೆದಿದ್ದು, ಎರಡು ಗುಂಪುಗಳಿಂದಲೂ ನಾಮಪತ್ರ ಸಲ್ಲಿಕೆ ಆಗಿದೆ. ಹಿಂಪಡೆಯುವ ಒಳಗೆ ಗ್ರಾಮಸ್ಥರುಸಭೆ ಸೇರಿ ಅಂತಿಮ ತೀರ್ಮಾನ ಮಾಡಲಿದ್ದಾರೆ.
ವರ್ಷದ ಹಿಂದೆಯೇ ಕೊಟ್ಟಿದ್ರು: ಕಬ್ಬಳಿ ಗ್ರಾಮ ಪಂಚಾಯಿತಿಯ ದಾಸರಹಳ್ಳಿ ವೀರಭದ್ರ ದೇವಸ್ಥಾನ ನಿರ್ಮಾಣಕ್ಕೆ ವ್ಯಕ್ತಿಯೊಬ್ಬರು ವರ್ಷದ ಹಿಂದೆಯೇ 5 ಲಕ್ಷ ರೂ. ನೀಡಿದ್ದು ಇವರ ಆಯ್ಕೆ ಸುಲಭವಾಗಿದೆ. ಮಂಡಲೀಕನಹಳ್ಳಿಯ ಬಸವೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಹಣ ಕೊಡುವುದಾಗಿ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದು ಗ್ರಾಮಸ್ಥರು ಸಮ್ಮತಿಸಿದ್ದಾರೆ.
ಬೆಳಗೀಹಳ್ಳಿ ಪಂಚಾಯಿತಿಯ ಚಿಕ್ಕೋನಹಳ್ಳಿ ಒಂದು ಸ್ಥಾನಕ್ಕೆ4 ಲಕ್ಷ ರೂ. ನಿಗದಿಯಾಗಿದ್ದು,ಕೆಲವರ ಒಪ್ಪಿಗೆ ಇಲ್ಲದೆ ಮತ್ತೆ ಸಭೆ ನಡೆಯಬೇಕಿದೆ, ಇದೇ ಪಂಚಾಯ್ತಿವ್ಯಾಪ್ತಿಯಬದ್ದಿಕೆರೆ ಗ್ರಾಮದ2 ಸ್ಥಾನಗಳು 16.5 ಲಕ್ಷಕ್ಕೆ ನಿಗದಿಯಾಗಿದ್ದು, ಬಸವೇಶ್ವರಸ್ವಾಮಿ ರಥ ನಿರ್ಮಾಣಕ್ಕೆ ಹಣ ಬಳಸಲು ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ.
ಹಿರೀಸಾವೆ ಪಂಚಾಯ್ತಿಯ ಕೊಳ್ಳೇನಹಳ್ಳಿಯಲ್ಲಿ 4 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆದು ಗ್ರಾಮದಲ್ಲಿ ಒಮ್ಮತ ಸಿಗದ ಪರಿಣಾಮ ಚುನಾವಣೆಗೆ ಸಿದ್ಧರಾಗಿದ್ದಾರೆ. ಶ್ರವಣಬೆಳಗೊಳ, ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿಯ ಕೆಲ ಗ್ರಾಮದಲ್ಲಿ ಮುಖಂಡರು ಗೌಪ್ಯ ಸಭೆ ಸೇರಿ ಹಣಕ್ಕೆ ತೀರ್ಮಾನ ಮಾಡಿದ್ದು, ಅವಿರೋಧ ಆಯ್ಕೆಗೆ ಮುಂದಾಗಿದ್ದಾರೆ.
ಗ್ರಾಮಸ್ಥರು ವಿರೋಧ ಇಲ್ಲದೆ ಇದ್ದರೆ ಆ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾಗಲು ಚುನಾವಣೆಯಲ್ಲಿ ಅವಕಾಶ ಇರುತ್ತದೆ.ಇದರ ಬದಲಾಗಿ ಹಣದ ಮೂಲಕ ಅವಿರೋಧ ಆಯ್ಕೆ ಮಾಡುವುದು ತರವಲ್ಲ. – ಜಗದೀಶ್, ಉಪವಿಭಾಗಾಧಿಕಾರಿ
– ಶಾಮಸುಂದರ್ ಕೆ.ಅಣ್ಣೆನಹಳ್ಳಿ