Advertisement
ಮಹೋತ್ಸವದ ಕೊನೆಯ ದಿನವನ್ನು ಮಾರ್ಗದರ್ಶಿ ಮಾತೆಯ ಹಬ್ಬವೆಂದು ಆಚರಿಸಲಾಯಿತು. ಬೆಳಗ್ಗಿನ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ನೆರವೇರಿ ಸಿದರು. ಬಳಿಕ ಪ್ರವಚನ ನೀಡಿದ ಅವರು, ದೈನಂದಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನೆರವೇರಿಸಿ, ನಿರ್ಮಲ ಹೃದಯವಂತಿಕೆಯಿಂದ ದೇವರಿಗೆ ವಿಧೇಯರಾಗಿ ಬಾಳಿದಾಗ ಬದುಕಿನಲ್ಲಿ ಪಾವಿತ್ರ್ಯ ಪಡೆಯಲು ಸಾಧ್ಯ ಎಂದರು.
ಈ ಪುಣ್ಯ ಕ್ಷೇತ್ರವನ್ನು ಬಸಿಲಿಕಾವೆಂದು ಘೋಷಿಸಿದ ಅನಂತರ ಇಲ್ಲಿಗಾಗಮಿಸುವ ದೇಶ ವಿದೇಶಗಳ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಈ ಬಾರಿ ಜನಜಾತ್ರೆಯೇ ನೆರೆದಿತ್ತು. ಹರಕೆ ಹೊತ್ತವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಂತ ಲಾರೆನ್ಸರ ಮುಖಾಂತರ ದೇವರಲ್ಲಿ ಪ್ರಾರ್ಥಿಸಿದರು. ಪಾಪ ನಿವೇದನೆ ಮುಖಾಂತರ ಮನಃಪರಿವರ್ತನೆ ಮಾಡಿಕೊಂಡರು.