Advertisement

ಎಲ್ಲರ ಮೆಚ್ಚಿನ “ಪಾಕಶಾಲೆ’

04:05 PM Jun 23, 2018 | |

ರಾಜರಾಜೇಶ್ವರಿ ನಗರದ ಮುಖ್ಯರಸ್ತೆಯಲ್ಲಿ ಸಾಗಿ, ಐಡಿಯಲ್‌ ಟೌನ್‌ಶಿಪ್‌ ತಲುಪಿದರೆ ಅಲ್ಲೊಂದು ಶಾಲೆ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಆ ಶಾಲೆಯನ್ನು ಮಕ್ಕಳೂ ದ್ವೇಷಿಸೋದಿಲ್ಲ. ಯಾಕೆ ಗೊತ್ತಾ? ಅದು ಪಾಠಶಾಲೆಯಲ್ಲ, ಪಾಕಶಾಲೆ!

Advertisement

  “ಪಾಕಶಾಲೆ’ ಹೋಟೆಲ್‌, ಬೆಂಗಳೂರಿಗರ ಪ್ರಿಯವಾದ ಆಹಾರ ತಾಣಗಳಲ್ಲೊಂದು. ಇಲ್ಲಿ ಸಿಗುವ ಉತ್ತರ ಭಾರತೀಯ ಶೈಲಿ, ಚೈನೀಸ್‌, ತಂದೂರಿ ಶೈಲಿಯ ಖಾದ್ಯಗಳು ಒಂದಕ್ಕಿಂತ ಒಂದು ಭಿನ್ನ. 

ಕರಾವಳಿ ಹೋಟೆಲ್‌
ಈ “ಪಾಕಶಾಲೆ’ಯ ಮುಖ್ಯಸ್ಥರು ಹರೀಶ್‌ ಎಂ ಶೆಟ್ಟಿ. ಇವರು ಮೂಲತಃ ಕುಂದಾಪುರದ ಹೊಸೂರಿನವರು. ಹೋಟೆಲ್‌ ಉದ್ಯಮದಲ್ಲಿ ಕುಂದಾಪುರದವರದ್ದು ಎತ್ತಿದ ಕೈ. ಹಾಗಾಗಿ ಇಲ್ಲಿ ಸಿಗುವ ಆಹಾರಗಳ ವೈವಿಧ್ಯಗಳು ಒಂದೆರಡಲ್ಲ. ಒಂದಕ್ಕಿಂತ ಒಂದರದ್ದು ವಿಶಿಷ್ಟ ರುಚಿ. 

ಕೃತಕ ಬಣ್ಣಕ್ಕೆ ಜಾಗವಿಲ್ಲ
ರುಚಿ, ಬಣ್ಣ ಹೆಚ್ಚಲಿ ಎಂದು ಹೋಟೆಲ್‌ನ ಖಾದ್ಯಗಳಿಗೆ ರಾಸಾಯನಿಕಗಳನ್ನು ಬಳಸುವುದು ಸಹಜ. ಆದರೆ, ಇಲ್ಲಿ ಸಿಗುವ ಯಾವುದೇ ಆಹಾರಕ್ಕೂ ಕೃತಕ ಬಣ್ಣ ಮತ್ತು ಸೋಡ ಬಳಸುವುದಿಲ್ಲ. ಸಾಮಾನ್ಯವಾಗಿ ಇಲ್ಲಿ ತಯಾರಾಗುವ ಎಲ್ಲಾ ಖಾದ್ಯಗಳೂ ಅಪ್ಪಟ ದೇಸೀಯ ಕಾಶ್ಮೀರದ ಮೆಣಸಿನ ಪುಡಿ ಮತ್ತು ಬ್ಯಾಡಗಿ ಮೆಣಸಿನ ಪುಡಿಯಿಂದ ಮಾಡಲ್ಪಡುತ್ತವೆ. 

ಕಲಾಸ್ವಾದ ಸವಿಯಿರಿ
“ಪಾಕಶಾಲೆ’ಯ ಇನ್ನೊಂದು ವೈಶಿಷ್ಟéವೆಂದರೆ, ಆತಿಥ್ಯ ಮತ್ತು ಇಲ್ಲಿನ ಆವರಣ. ನಗುಮೊಗದಿಂದ ಊಟ ಬಡಿಸುವ ಸಿಬ್ಬಂದಿಯಿದ್ದಾರೆ ಇಲ್ಲಿ. ಸುತ್ತಲಿನ ಗೋಡೆಗಳ ಮೇಲೆ ಆಕರ್ಷಕ ಕಲಾಕೃತಿಗಳನ್ನು ಇರಿಸಲಾಗಿದೆ. ಯಾವುದೋ ಕಲಾ ಗ್ಯಾಲರಿಯಲ್ಲಿ ಕುಳಿತು ಆಹಾರ ಸವಿದ ಅನುಭವವಾಗುತ್ತದೆ. 
   “ಪಾಕಶಾಲೆ’ ಆರಂಭವಾಗಿ 5 ವರ್ಷಗಳಾಗಿದೆ. ಬಹಳಷ್ಟು ಗ್ರಾಹಕರು ಬೆಂಗಳೂರಿನ ಬೇರೆ ಬೇರೆ ಸ್ಥಳದಿಂದ ಇಲ್ಲಿಗೆ ಬರುತ್ತಾರೆ. ಒಮ್ಮೆ ಬಂದವರು, ನಂತರದ ದಿನಗಳಲ್ಲಿ ತಮ್ಮ ಪರಿಚಯದ ಹಲವರನ್ನು ಇಲ್ಲಿಗೆ ಕರೆ ತರುತ್ತಿದ್ದಾರೆ. ಹಾಗಾಗಿ ಇದು ಆಹಾರಪ್ರಿಯರ ರಜಾ ದಿನದ ಫೇವರಿಟ್‌ ತಾಣ ಇದಾಗಿದೆ. 

Advertisement

ಏನೇನಿದೆ ಗೊತ್ತಾ?
ಪುದೀನ ಲಿಂಬು ಸಿಕಂಜಿ, ಮಕಾಯಿ ಶೋರ್ಬಾ, ಪನ್ನೀರ್‌ ಟಿಕಲಾಲ್‌, ಮೇತಿ ಪರೋಟ, ಕಾರ್ನ್ ಮೇತಿ ಪಲಾವ್‌, ಸಬಿcದಮ್‌ ಬಿರಿಯಾನಿ, ದಾಲ್‌ ಮಖಾನಿ ಇತ್ಯಾದಿ ಖಾದ್ಯಗಳು ಲಭ್ಯ. ಪ್ರತಿದಿನ ತಾಜಾ ತರಕಾರಿ, ಹಣ್ಣು, ಬೆಣ್ಣೆ, ತುಪ್ಪ ಬಳಸಲಾಗುತ್ತದೆ.

ಒಂದು ಬಫೆಟ್‌ನಲ್ಲಿ 35 ಐಟಂ!
ಇಲ್ಲಿ ಸಿಗುವ ಬಫೆಟ್‌ ಮಾದರಿಯ ಊಟದಲ್ಲಿ ಬರೋಬ್ಬರಿ 35 ಆಹಾರ ಪದಾರ್ಥಗಳಿರುತ್ತವೆ. ಕೈಗೆಟುಕುವ ದರದಲ್ಲಿ ನೀವಿದನ್ನು ಸವಿಯಬಹುದು. ಈ ಊಟ, ಸೋಮವಾರದಿಂದ ಶುಕ್ರವಾರದವರೆಗೆ 12.30 ರಿಂದ 3 ಗಂಟೆಯವರೆಗೆ ಲಭ್ಯವಿದೆ.

ಐದು ವರ್ಷಗಳಿಂದ ಸಾವಿರಾರು ಗ್ರಾಹಕರ ಹೊಟ್ಟೆಗೆ, ಮನಸ್ಸಿಗೆ ಖುಷಿ ಕೊಟ್ಟಿರುವ ತೃಪ್ತಿ ನಮಗಿದೆ. ಗ್ರಾಹಕರ ತೃಪ್ತಿಯೇ ನಮಗೆ ಸ್ಫೂರ್ತಿ. ಮುಂದೆಯೂ ಇದೇ ರೀತಿ ಉತ್ತಮ ಸೇವೆ ನೀಡುವ ಆಶಯ ನಮ್ಮದು. 
– ಹರೀಶ್‌ ಎಂ. ಶೆಟ್ಟಿ, ಮಾಲೀಕ

ಪಾಕಶಾಲೆ, ನಂ.335, ಐಡಿಯಲ್‌ ಹೋಂ ಟೌನ್‌ಶಿಪ್‌, ರಾಜರಾಜೇಶ್ವರಿ ನಗರ 
ಸಮಯ: 
ಮಧ್ಯಾಹ್ನ 12-3.30
ಸಂಜೆ 6.30-10 
ಸಂಪರ್ಕ : 9538100114/ 080- 28606460

 ಚಿತ್ರ, ಲೇಖನ: ಬಳಕೂರು ಎಸ್‌.ವಿ. ನಾಯಕ

Advertisement

Udayavani is now on Telegram. Click here to join our channel and stay updated with the latest news.

Next