Advertisement

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

01:44 AM Apr 28, 2024 | Team Udayavani |

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಅಬ್ಬರ ಹೆಚ್ಚ ತೊಡ ಗಿದ್ದು, ಪ್ರಧಾನಿ ಮೋದಿ ಅವರು 2 ದಿನಗಳಲ್ಲಿ ಕಿತ್ತೂರು ಕರ್ನಾ ಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ 5 ಕಡೆಗಳಲ್ಲಿ ಮತಬೇಟೆ ನಡೆಸಲಿದ್ದಾರೆ.

Advertisement

ರಾಜ್ಯದ ಮೊದಲ ಹಂತದಲ್ಲಿ ಮತದಾನ ನಡೆದ ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಪ್ರದೇಶದಲ್ಲಿ ಮತ ಪ್ರಚಾರ ನಡೆಸಿದ್ದ ಮೋದಿ ಯವರು ಈಗ 2ನೇ ಹಂತದ ಚುನಾ ವಣೆಗಾಗಿ ಉತ್ತರದಲ್ಲಿ ಮತ ಬೇಟೆಗೆ ಮುಂದಾಗಿದ್ದಾರೆ.

ಗೋವಾದಲ್ಲಿ ಪ್ರಚಾರ ಕಾರ್ಯ ಮುಗಿಸಿ ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಹೂಡಿರುವ ಪ್ರಧಾನಿ ರವಿವಾರ ಬೆಳಗಾವಿಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಅಲ್ಲಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತೆರಳುವ ಮೋದಿಯವರು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಅಲ್ಲಿಂದ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮತಬೇಟೆಗಿಳಿಯಲಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಸಮಾವೇಶದಲ್ಲಿ ದಾವಣಗೆರೆ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.

Advertisement

ದಾವಣಗೆರೆಯಿಂದ ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ತೆರಳಲಿದ್ದು, ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ನಾಳೆ ಬಾಗಲಕೋಟೆಯಲ್ಲಿ: ಎ. 29ರಂದು ಮೋದಿಯವರು ಕಿತ್ತೂರು ಕರ್ನಾಟಕದ ಬಾಗಲಕೋಟೆಗೆ ತೆರಳಲಿದ್ದು, ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿಯವರು ಯಾವುದೇ ಕ್ಷೇತ್ರದಲ್ಲಿ ಮತಪ್ರಚಾರ ನಡೆಸಿದರೂ ಸುತ್ತಮುತ್ತಲ ಮೂರ್‍ನಾಲ್ಕು ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದ್ದು, ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಆಶಾಭಾವ ಬಿಜೆಪಿ ಅಭ್ಯರ್ಥಿಗಳದ್ದಾಗಿದೆ.
ಪ್ರಧಾನಿಯವರ ಆಗಮನ ಸಹಜವಾಗಿಯೇ ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯವರು ವಾಸ್ತವ್ಯ ಹೂಡಿರುವುದು ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪುಳಕಿತಗೊಳಿಸುವಂತೆ ಮಾಡಿದೆ.

ಪ್ರಧಾನಿಯವರ ಸ್ವಾಗತಕ್ಕೆ ಶಿರಸಿ, ದಾವಣಗೆರೆ, ಹೊಸಪೇಟೆ ಹಾಗೂ ಬಾಗಲಕೋಟೆ ಸಜ್ಜಾಗಿವೆ.

ಇಂದು ಎಲ್ಲೆಲ್ಲಿ ಪ್ರಧಾನಿ ರ್ಯಾಲಿ?
-ಬೆಳಗ್ಗೆ 10: ಬೆಳಗಾವಿ-ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಗಳ ಪರ ಬೆಳಗಾವಿ ಯಲ್ಲಿ ಪ್ರಚಾರ.
-ಮಧ್ಯಾಹ್ನ 12: ಧಾರವಾಡ- ಉತ್ತರಕನ್ನಡ ಕ್ಷೇತ್ರದ ಅಭ್ಯರ್ಥಿಗಳ ಪರ ಶಿರಸಿಯಲ್ಲಿ ಪ್ರಚಾರ
-ಅಪರಾಹ್ನ 2: ದಾವಣಗೆರೆ-ಹಾವೇರಿ ಕ್ಷೇತ್ರದ ಅಭ್ಯರ್ಥಿಗಳ ಪರ ದಾವಣಗೆರೆ ಯಲ್ಲಿ ಪ್ರಚಾರ
-ಸಂಜೆ 4: ಬಳ್ಳಾರಿ-ಕೊಪ್ಪಳ ಅಭ್ಯರ್ಥಿ ಗಳ ಪರ ಹೊಸಪೇಟೆಯಲ್ಲಿ ಪ್ರಚಾರ

ಎ. 29ರ ಮೋದಿ ಕಾರ್ಯಕ್ರಮ
-ಬೆಳಗ್ಗೆ 10: ಬಾಗಲಕೋಟೆ-ವಿಜಯ ಪುರ ಕ್ಷೇತ್ರದ ಅಭ್ಯರ್ಥಿ ಗಳ ಪರವಾಗಿ ಬಾಗಲಕೋಟೆಯಲ್ಲಿ ಪ್ರಚಾರ

Advertisement

Udayavani is now on Telegram. Click here to join our channel and stay updated with the latest news.

Next