Advertisement

ಪಿಲಿಕುಳದಲ್ಲಿ ಹೊಸ ಪ್ರಾಣಿಗಳ ಆಕರ್ಷಣೆ

01:00 AM Feb 20, 2019 | Harsha Rao |

ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ರೆಟಿಕ್ಯುಲೇಟೆಡ್‌ ಹೆಬ್ಟಾವು ಸಹಿತ ಹಲವು ಹೊಸ ಪ್ರಾಣಿಗಳ ಆಗಮನವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

Advertisement

ನಿಕೋಬಾರ್‌ ದ್ವೀಪದ ರೆಟಿಕ್ಯುಲೇಟೆಡ್‌ ಹೆಬ್ಟಾವು ಪ್ರಪಂಚದ ವಿಷರಹಿತ ಹಾವುಗಳಲ್ಲಿ ಅತೀ ಉದ್ದ ಬೆಳೆಯುವ ಹಾವಾಗಿದೆ. ಇದರ ಜತೆಗೆ ಚೆನ್ನೈಯ ವಂಡಲೂರು ಮೃಗಾಲಯದಿಂದ ಒಂದು ಜತೆ ಕಾಡುಕೋಣ (ಕಾಟಿ), 10  ಜತೆ ಬಣ್ಣದ ಕೊಕ್ಕರೆ, 6  ಜತೆ ರಾತ್ರಿ ಕೊಕ್ಕರೆ ಮತ್ತು ಮೂರು ಜೊತೆ ರೆಟಿಕ್ಯುಲೇಟೆಡ್‌ ಹೆಬ್ಟಾವು ಆಗಮಿಸಿವೆ. ಪಿಲಿಕುಳ ಮೃಗಾಲಯದಿಂದ 2 ಜತೆ ಕಾಳಿಂಗ ಸರ್ಪ, ವಿಟೇಕರ್ಸ್‌ ಬೋವಾ ಮತ್ತು ತೋಳ, ಹಾವುಗಳನ್ನು ನೀಡಲಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೇರೆಗೆ ಈ ಕೊಡು-ಕೊಳುಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next