Advertisement

ಅಟಾರ್ನಿ ಜನರಲ್‌ ವೇಣುಗೋಪಾಲ್‌ ಅಧಿಕಾರಾವಧಿ ವಿಸ್ತರಣೆ ?

08:04 PM Jun 28, 2021 | Team Udayavani |

ನವದೆಹಲಿ: ಅಟಾರ್ನಿ ಜನರಲ್‌ ಆಗಿ ಇನ್ನೂ ಒಂದು ವರ್ಷ ಕಾಲ ಕೆ. ಕೆ. ವೇಣುಗೋಪಾಲ್‌(90) ಅವರನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸಾಮಾನ್ಯವಾಗಿ ಅಟಾರ್ನಿ ಜನರಲ್‌ ಅಧಿಕಾರಾವಧಿ ಮೂರು ವರ್ಷ. ವೇಣುಗೋಪಾಲ್‌ ಅವರ ಅಧಿಕಾರಾವಧಿ ಹಿಂದಿನ ವರ್ಷವೇ ಮುಗಿದಿತ್ತು. ಆದರೂ ಅದನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಈಗ ಜುಲೈ 1ಕ್ಕೆ ಈ ಅವಧಿ ಮುಗಿಯಲಿದ್ದು, ಇನ್ನೂ ಒಂದು ವರ್ಷ ವಿಸ್ತರಿಸುವಂತೆ ವೇಣುಗೋಪಾಲ್‌ ಸರ್ಕಾರಕ್ಕೆ ಮನವಿ ಮಾಡಿದ್ದರು.

ಇವರ ಅನುಭವ ಮತ್ತು ಇವರು ನಿರ್ವಹಿಸುತ್ತಿರುವ ವೃತ್ತಿಸಾಮರ್ಥ್ಯ ಹಿನ್ನೆಲೆಯಲ್ಲಿ ಅವರ ಮನವಿ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ :ಚಾರ್‌ಧಾಮ್‌ ಯಾತ್ರೆಗೆ ಹೈಕೋರ್ಟ್ ತಡೆ : ದೇಗುಲದಲ್ಲಿ ನಡೆಯುವ ಪೂಜೆಯ ನೇರ ಪ್ರಸಾರಕ್ಕೆ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next