ಕಾಸರಗೋಡು: ಕೇರಳದಲ್ಲಿ ಸಂಚರಿಸುವ ನಾಲ್ಕು ಪ್ರತೀವಾರದ ರೈಲುಗಳ ಸಹಿತ ಆರು ಪ್ರತ್ಯೇಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ರೈಲಿನ ವ್ಯವಹಾರ, ಸುರಕ್ಷಾ ಸಮಸ್ಯೆಗಳನ್ನು ಮುಂದಿರಿಸಿ ಸಂಚಾರ ನಿಲುಗಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಶನಿವಾರ ಸಂಚರಿಸುವ ಮಂಗಳೂರು-ಕೊಯಮತ್ತೂರು ಪ್ರತೀವಾರ ರೈಲು ಜೂನ್ 8ರಿಂದ 29ರ ವರೆಗೆ ಸಂಚಾರ ರದ್ದುಪಡಿಸಲಾಗಿದೆ. ಇದೇ ವೇಳೆ ಮೇ 25, ಜೂನ್ 1ರ ಸಂಚಾರವನ್ನು ಕೂಡ ನಿಲ್ಲಿಸಲಾಗಿದೆ. ಮಂಗಳೂರು-ಕೋಟ್ಟಯಂ ಪ್ರತ್ಯೇಕ ರೈಲನ್ನು ರೈಲ್ವೇ ಮೊದಲೇ ರದ್ದುಗೊಳಿಸಿತ್ತು. ಎಪ್ರಿಲ್ 20ರಿಂದ ಜೂನ್ 1ರ ವರೆಗೆ ಶನಿವಾರದಂದು ಸಂಚರಿಸುವ ರೀತಿಯಲ್ಲಿ ಈ ರೈಲನ್ನು ಘೋಷಿಸಲಾಗಿತ್ತು.ಎಪ್ರಿಲ್ 20ರಂದು ಇದು ಓಡಾಟ ನಡೆಸಿದೆ.
ಕೆಲಸದ ಭಾರ ಕಡಿಮೆ ಮಾಡಬೇಕೆಂದು ಆಗ್ರಹಿಸಿ ಜೂನ್ 1ರಿಂದ ದಕ್ಷಿಣ ರೈಲ್ವೇ ಲೋಕೋ ಪೈಲಟ್‌ಗಳು ಮುಷ್ಕರ ಘೋಷಿಸಿದ್ದಾರೆ.
ಶಾಲೆಗಳು ತೆರೆಯುವ ಸಮಯದಲ್ಲೇ ಪ್ರಯಾಣ ಸಮಸ್ಯೆ ಹೆಚ್ಚಾಗಬಹುದು. ಇದೇ ವೇಳೆ ರೈಲ್ವೇ ರೈಲು ಸಂಚಾರನ್ನು ಮೊಟಕುಗೊಳಿಸಿದೆ. ಮಂಗಳೂರು-ಕೊಯಮತ್ತೂರು ಪ್ರತೀವಾರ ರೈಲು, ಕೊಯಮತ್ತೂರು -ಮಂಗಳೂರು ಪ್ರತೀವಾರ ರೈಲು, ಕೊಚ್ಚುವೇಲಿ-ನಿಜಾಮುದ್ದೀನ್ ಪ್ರತೀವಾರದ ರೈಲು, ನಿಜಾಮುದ್ದೀನ್ – ಕೊಚ್ಚುವೇಲಿ ಪ್ರತೀ
ವಾರ ರೈಲು, ಚೆನ್ನೈ – ವೆಲಂಕಣಿ, ವೆಲಂಕಣಿ-ಚೆನ್ನೈ ರೈಲುಗಳನ್ನು ರದ್ದುಗೊಳಿಸಲಾಗಿದೆ.