Advertisement

ಜನರಲ್ಲಿ ಹಸಿರು ಪ್ರಜ್ಞೆ ಮೂಡಿಸುವ ಪ್ರಯತ್ನ

03:50 AM Jul 04, 2017 | Team Udayavani |

ತಲಪಾಡಿ: ಉಚಿತವಾಗಿ ಗಿಡ ನೀಡುವ ಮೂಲಕ ಜನರಲ್ಲಿ ಹಸಿರು ಪ್ರಜ್ಞೆ ಮೂಡಿಸುವ  ಪ್ರಯತ್ನ ನಡೆಸಲಾಗಿದೆ. ಗಿಡ ಮರಗಳನ್ನು ನೆಟ್ಟು ಪರಿಸರವನ್ನು ಶುಚಿಯಾಗಿಸಿಟ್ಟುಕೊಂಡಲ್ಲಿ ಸ್ವತ್ಛ ಗಾಳಿ, ಬೆಳಕು, ನೀರು ದೊರಕಿ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಅಹ್ಮದ್‌ ಕುಂಞಿ  ಹೇಳಿದರು.

Advertisement

ಚೂಂತಾರು ಸರೋಜಿನಿ ಭಟ್‌ ಪ್ರತಿಷ್ಠಾನ ಮತ್ತು ಸುರûಾ ದಂತ ಚಿಕಿತ್ಸಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುರûಾ ದಂತ ಚಿಕಿತ್ಸಾಲಯದ ವಿಂಶತಿಯ ಸಂಭ್ರಮದ ಅಂಗವಾಗಿ ರೋಗಿಗಳಿಗೆ ಉಚಿತ ಸಾಗುವಾನಿ ಮತ್ತು ನೇರಳೆ ಗಿಡಗಳನ್ನು ಸಾಂಕೇತಿಕವಾಗಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಗಿಗಳಿಗೆ ಉನ್ನತ ಮಟ್ಟದ ದಂತ ಚಿಕಿತ್ಸೆ ನೀಡುವುದರ ಜತೆಗೆ, ವೈದ್ಯಕೀಯ ಲೇಖನ ಗಳನ್ನು ಬರೆದು ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವ ಡಾ| ಮುರಲೀ ಮತ್ತು ಡಾ| ರಾಜಶ್ರೀ ದಂಪತಿಯನ್ನು ಅಭಿನಂದಿಸಿದರು. ಸುಮಾರು ನೂರಕ್ಕೂ ಹೆಚ್ಚು ಮಂದಿಗೆ ಗಿಡಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next