Advertisement

ವಿದ್ಯಾರ್ಥಿಗಳನ್ನು ಮರಳಿಶಾಲೆಗೆ ಕರೆತರಲು ಪ್ರಯತ್ನ

07:27 PM Jan 21, 2021 | Team Udayavani |

ನೆಲಮಂಗಲ: ಕೋವಿಡ್ ದಿಂದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದಂತೆ ಪ್ರತಿಯೊಬ್ಬರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಈ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಹಂತ ಹಂತವಾಗಿ ಕಾರ್ಯ ಯೋಜನೆ ರೂಪಿಸಿ, ಸಮ ನ್ವಯದಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ತು ಸದಸ್ಯ ಪುಟ್ಟಣ್ಣ ಹೇಳಿದರು.

Advertisement

ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಲೆಂಡರ್‌ ಮತ್ತು ಶೈಕ್ಷಣಿಕ ವರ್ಷದ ದಿನಚರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾಭ್ಯಾಸ ದಿಂದ ವಂಚಿತರಾದ ವಿದ್ಯಾರ್ಥಿಗಳನ್ನು ಗುರುತಿಸಿ ಮತ್ತೆ ಶಾಲೆಯತ್ತ ಕರೆತರಲು ಸರ್ಕಾರ ಕಾರ್ಯನಿರ್ವಸುತ್ತದೆ ಎಂದರು.

ಕಾಯ್ದೆಗೆ ಕೇವಲ ರಾಜಕೀಯ ವಿರೋಧ: ರೈತ ಕಾಯ್ದೆಗಳು ಕೇವಲ ರಾಜಕೀಯ ವಿರೋಧವಷ್ಟೇ. ಒಂದು ವರ್ಷಗಳ ಕಾಲ ಕಾಯ್ದೆಯನ್ನು ಜಾರಿಗೆ ತಂದು ಸಾಧಕ-ಬಾಧಕಗಳನ್ನು ಗಮ ನಿಸಿ, ಸರಿಯಿಲ್ಲ ಎಂದರೆ ಹಿಂಪಡೆಯುತ್ತೇವೆ ಎಂದು ಕೇಂದ್ರ ಈಗಾಗಲೇ ಹೇಳಿದೆ. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟು ಕಾಂಗ್ರೆಸ್‌ ನಾಯಕರು ಸಹಕರಿಸಬೇಕು. ರಸ್ತೆ ತಡೆ ಹೋರಾಟಗಳಿಂದ ಆರ್ಥಿಕತೆ ಮತ್ತಷ್ಟು ಕೆಳಹಂತಕ್ಕೆ ಕುಸಿಯುತ್ತದೆ ಎಂದರು.

ಇದನ್ನೂ ಓದಿ:ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚಿಸಿ

ರಾಮನನ್ನು ಪೂಜಿಸುವುದು ನಮ್ಮ ಹಕ್ಕು. ಬೇರೆಯವರನ್ನು ಕೇಳಿ ಪೂಜಿಸುವ ಅಗತ್ಯ ನಮಗಿಲ್ಲ. ನಮ್ಮ ದೇವರಿಗೆ ಮಂದಿರ ಕಟ್ಟಬೇಡಿ ಎಂದು ಹೇಳುವ ಅಧಿಕಾರವಿಲ್ಲ. ರಾಮ ಮಂದಿರದ ವಿರುದ್ಧ ಪುಸ್ತಕಗಳನ್ನು ಹಂಚಿ ಅಪಪ್ರಚಾರ ಮಾಡುವುದು ಹೇಸಿಗೆ ಕೆಲಸ. ಈ ರೀತಿ ಪ್ರಯತ್ನಗಳು ಫ‌ಲ ನೀಡುವುದಿಲ್ಲ ಎಂದು ಹೇಳಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಿರ್ದೇಶಕಿ ಉಷಾದೇವಿ, ಕಾಲೇಜಿನ ಪ್ರಾಂಶುಪಾಲ ಪೊ›.ಸದಾಶಿವ, ಉಪ ಪ್ರಾಂಶುಪಾಲ ಮಂಜುನಾಥ್‌, ಪ್ರಕಾಶ್‌, ಮಹಿಮಣ್ಣ, ನಾಗರಾಜು, ರಾಮಕೃಷ್ಣಯ್ಯ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next