Advertisement

ತಾಂಡಾಗಳ ಅಭಿವೃದ್ಧಿಗೆ ಪ್ರಯತ್ನ

01:04 PM Aug 21, 2017 | |

ದೇವರಹಿಪ್ಪರಗಿ: ಬಂಜಾರಾ ಸಮುದಾಯ ಅತ್ಯಂತ ಪ್ರಾಮಾಣಿಕವಾಗಿ ದುಡಿದು ಜೀವನ ನಡೆಸುವವರು ಆಗಿದ್ದಾರೆ. ಇಡಿ ಸಿಂದಗಿ ಮತಕ್ಷೇತ್ರದಲ್ಲಿಯೇ ಇದು ಅತಿ ಹೆಚ್ಚು ಅಭಿವೃದ್ಧಿ ಹೊಂದಿ ತಾಂಡಾ ಆಗಿದ್ದು ಇನ್ನು ಹೆಚ್ಚಿನ ಅಭಿವೃದ್ಧಿಗೋಸ್ಕರ ಪ್ರಯತ್ನಿಸಲಾಗುವುದು ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ತಿಳಿಸಿದರು. ದೇವರಹಿಪ್ಪರಗಿ ಸಮೀಪದ ಕೊಕಟನೂರ ತಾಂಡಾದ ಸೋಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನನ್ನ ಅಧಿಕಾರವಧಿಯಲ್ಲಿ ಅತಿ ಹೆಚ್ಚು ಅನುದಾನ ನೀಡಿ ಈ ತಾಂಡಾ ಅಭಿವೃದ್ಧಿಗೊಳಿಸಿದ ಸಾರ್ಥಕತೆ ನನಗಿದೆ. ಇಲ್ಲಿಯ ಜನರು ಸಹ ನನಗೆ ಯಾವತ್ತೂ ಕೈ ಬಿಟ್ಟಿಲ್ಲ. ಇನ್ನು ಅಭಿವೃದ್ಧಿಗೋಸ್ಕರ ಸೋಮಲಿಂಗೇಶ್ವರ ದೇವಸ್ಥಾನಕ್ಕೆ 2 ಲಕ್ಷ ರೂ. ಅನುದಾನ ನೀಡಲಾಗುವುದು ಎಂದರು. ಬಿಜೆಪಿ ಮುಖಂಡ ಶ್ರೀಕಾಂತ ಪೂಜಾರಿ ಮಾತನಾಡಿ, ಇಡಿ ಜಿಲ್ಲೆಯಲ್ಲಿಯೇ ಸಿಂದಗಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿ ಶಾಸಕ ರಮೇಶ ಭೂಸನೂರ ಪಾತ್ರ ಮಹತ್ತರ. ಪ್ರತಿಯೊಂದು ಸಮುದಾಯವನ್ನು ಪ್ರೀತಿಯಿಂದ ಕಾಣುತ್ತ ಪ್ರತಿ ಸಮಾಜದ ಅಭಿವೃದ್ಧಿಗಾಗಿ ಅನುದಾನ ಒದಗಿಸಿದ್ದಾರೆ. ವಿಶೇಷವಾಗಿ ಸಿಂದಗಿ ಕ್ಷೇತ್ರದಲ್ಲಿನ ತಾಂಡಾಗಳ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ ಎಂದರು. ಬಿಜೆಪಿ ಮುಖಂಡ ಶಂಕರ ಬಗಲಿ, ಜಿಪಂ ಮಾಜಿ ಸದಸ್ಯ ಯಲ್ಲಪ್ಪ ಹಾದಿಮನಿ, ನ್ಯಾಯವಾದಿ ಎಸ್‌.ಕೆ. ಪೂಜಾರಿ, ಹಿರಿಯ ಮುಖಂಡ ಜೆಟ್ಟೆಪ್ಪ ಹರನಾಳ ಮಾತನಾಡಿದರು. ಕೊಕಟನೂರ ಗದ್ದಿಗೆ ಮಠದ ಮಡಿವಾಳೇಶ್ವರ ಸ್ವಾಮೀಜಿ ಸಾನ್ನಿಧ್ಯ, ಗ್ರಾಪಂ ಅಧ್ಯಕ್ಷ ಹೂವಪ್ಪ ಕನ್ನೂರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಸೋನಾಬಾಯಿ ರಾಠೊಡ, ಗ್ರಾಪಂ ಉಪಾಧ್ಯಕ್ಷೆ ಮೈತ್ರಾಬಾಯಿ ಮಠಪತಿ, ಅಣ್ಣುಗೌಡ ಪಾಟೀಲ, ನಿಂಗನಗೌಡ ಪಾಟೀಲ, ಶಾಂತಯ್ಯ ಹಿರೇಮಠ, ಯಲ್ಲಪ್ಪ ಬಮನಳ್ಳಿ, ಗಲಗಲಿಸಿದ್ದಲಿಂಗ ಪಟ್ಟಣಶೆಟ್ಟಿ, ಉಮಲು ರಾಠೊಡ, ತಾರಾಸಿಂಗ್‌ ಪವಾರ, ದಾಮಲು ರಾಠೊಡ, ಮುಕ್ಕಣ್ಣ ನಾಯಿಕ, ದಸ್ತಗೀರ ಮುಲ್ಲಾ ಇದ್ದರು. ಇದಕ್ಕೂ ಮುನ್ನ ತಾಂಡಾದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ನೂರಾರು ಮಹಿಳೆಯರು ಸಾಂಪ್ರದಾಯಿಕ
ಲಂಬಾಣಿ ಉಡುಗೆ ತೊಟ್ಟು ಕಂಭ ಹೊತ್ತು ಮೆರವಣಿಗೆಗೆ ಕಳೆ ತಂದರು. ಜಾತ್ರಾ ಮಹೋತ್ಸವದಲ್ಲಿ ಕೊಕಟನೂರ ತಾಂಡಾ ಬಮ್ಮನಜೋಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ತಾಂಡಾಗಳ ಭಕ್ತಾದಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next