ಬೆಂಗಳೂರು: ಉಕ್ರೇನ್ ರಷ್ಯಾ ಯುದ್ಧದಲ್ಲಿ ಹಲವು ಕನ್ನಡಿಗರು ಸಿಕ್ಕಿ ಕೊಂಡಿದ್ದಾರೆ, ನಿನ್ನೆ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ ಎಂದು ಸಿಎಂ ಬಸವಾರಾಜ್ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅವರಿಗೆ ಒಂದು ಲಿಸ್ಟ್ ಕಳಿಸಿಕೊಟ್ಟಿದ್ದೆ. ಇವತ್ತು ಭಾರತಕ್ಕೆ ಬರುತ್ತಿರೋರಲ್ಲಿ ಕನ್ನಡಿಗರು ಇದ್ದಾರಾ ಅಂತ ಮಾಹಿತಿ ತರಿಸ್ಕೊಳ್ತಿದ್ದೇವೆ. ಅವರೆಲ್ಲ ಭಾರತಕ್ಕೆ ಬಂದ ಮೇಲೆ ರಾಜ್ಯದವರು ಇದ್ದರೆ ಕರೆಸಿಕೊಳ್ಳುತ್ತೇವೆ. ಅವರವರ ಊರುಗಳಿಗೆ ಸುರಕ್ಷಿತವಾಗಿ ಕಳಿಸಿಕೊಡುತ್ತೇವೆ ಎಂದರು.
ಕೆಲವೇ ದಿನಗಳಲ್ಲಿ ರಸ್ತೆ ಮಾರ್ಗ ಮತ್ತು ವಾಯು ಮಾರ್ಗದ ಮೂಲಕ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುತ್ತೇವೆ. ನಾನೂ ಕೂಡಾ ಕೆಲವು ವಿದ್ಯಾರ್ಥಿಗಳ ಜತೆ ಮಾತಾಡಿದ್ದೇನೆ. ಅವರಿಗೆ ಎಲ್ಲ ರೀತಿಯ ಧೈರ್ಯ ಹೇಳಿದ್ದೇನೆ. ಹೆಚ್ಚಿನ ವಿದ್ಯಾರ್ಥಿಗಳು ಪಶ್ಚಿಮ ಭಾಗದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದೆ. ಉಕ್ರೇನಿನ ಪಶ್ಚಿಮ ಭಾಗದಲದಲಿರೋರು ಸೇಫ್ ಇದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳೋ ಪ್ರಯತ್ನಗಳು ನಡೆಯುತ್ತಿವೆ. ರಸ್ತೆ ಮಾರ್ಗದ ಮೂಲಕ ಅವರನ್ನು ಕರೆಸಿಕೊಳ್ಳುತ್ತೇವೆ ಎಂದರು.
ಈಗಾಗಲೇ ಕೆಲವರು ಬರ್ತಿದ್ದಾರೆ.ಉಕ್ರೇನ್ ನ ಬಹಳಷ್ಟು ನಗರಗಳಲ್ಲಿ ಬಹಳಷ್ಟು ಭಾರತೀಯರು ಸಿಲುಕಿ ಕೊಂಡಿದ್ದಾರೆ. ಏನೂ ತೊಂದರೆ ಆಗಿಲ್ಲ ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಲು ಮನವಿ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ತಿರುಗೇಟು ನೀಡಿದ ಸಿಎಂ, ಪಾದಯಾತ್ರೆ ಯಾಕೆ ಅವರು ಮಾಡ್ತಿದಾರೆ ಅಂತ ಜಗತ್ತಿಗೇ ಗೊತ್ತಿದೆ. ಪಾದಯಾತ್ರೆ ಒನ್ ಯಾಕೆ ಮಾಡಿದ್ರು, ಪಾದಯಾತ್ರೆ ಟು ಯಾಕೆ ಮಾಡ್ತಿದಾರೆ ಅಂತ ಗೊತ್ತಿದೆ ಎಂದರು.