ಅವರು ಮಂಗಳವಾರ ಮಲ್ಪೆ ಮೀನುಗಾರಿಕೆ ಬಂದರು, ಸ್ಲಿಪ್‌ವೇ ಮತ್ತು ಟೆಬ್ಮಾ ಶಿಪ್ ಯಾರ್ಡ್ ಸ್ಥಳವನ್ನು ವೀಕ್ಷಿಸಿ ಬಳಿಕ ಮೀನುಗಾರರ ಮುಖಂಡ ರೊಂದಿಗೆ ಸಮಾಲೋಚನೆ ನಡೆಸಿದರು.
Advertisement
ಬೇಡಿಕೆ ಈಡೇರಿಕೆಗೆ ಮನವಿಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ ಮಾತನಾಡಿ, ಹೊರ ರಾಜ್ಯದಲ್ಲಿ ಮೀನುಗಾರಿಕೆ ನಡೆಸುವಾಗ ಅಲ್ಲಿನ ಮೀನುಗಾರರಿಂದ ಅಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಬೇಕು, ಮೀನುಗಾರಿಕೆ ಬೋಟ್‌ಗಳಿಗೆ ನೀಡಲಾಗುತ್ತಿರುವ ಡೀಸೆಲ್ ಪ್ರಮಾಣವನ್ನು 300 ಲೀ.ನಿಂದ 500 ಲೀ.ಗೆ ಹೆಚ್ಚಿಸಿ ತಿಂಗಳವಾರು ಬದಲು ವಾರ್ಷಿಕ ಕೋಟದಲ್ಲಿ ನೀಡಬೇಕು, ಡೀಸೆಲ್ ಸಹಾಯಧನ ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ಸಿಗಬೇಕು ಎಂದು ಮನವಿ ಮಾಡಿದರು.
ಮೀನು ಮಾರಾಟ ಫೇಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರು 3ನೇ ಹಂತದ ಬಂದರಿನಲ್ಲಿ ನಿರ್ಮಿಸಿದ ಸ್ಲಿಪ್‌ವೇ ನಿರ್ವಹಣೆಯನ್ನು ಮೀನುಗಾರರ ಸಂಘಕ್ಕೆ ನೀಡಬೇಕು ಮತ್ತು ಟೆಬಾ¾ ಶಿಪ್‌ಯಾರ್ಡ್ ಅವಧಿ ಮುಗಿದ ಬಳಿಕ ಆ ಜಾಗವನ್ನು ಕರಾರಿನಂತೆ ಮೀನುಗಾರಿಕೆ ಬಂದರಿನ ಅಭಿವೃದ್ಧಿಗೆ ಮಾತ್ರ ನೀಡಬೇಕೆಂದು ಮನವಿ ಮಾಡಿದರು.
ಮಲ್ಪೆ ಮೀನುಗಾರ ಸಂಘ ಮತ್ತು ಮೀನು ಮಾರಾಟ ಫೆಡರೇಶನಿನ ವತಿಯಿಂದ ಸಚಿವರನ್ನು ಸಮ್ಮಾನಿಸಲಾಯಿತು.
ಮೀನುಗಾರರ ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ವಿಟuಲ ಕರ್ಕೇರ, ನಾಗರಾಜ್ ಬಿ. ಕುಂದರ್, ಪ್ರಧಾನ ಕಾರ್ಯದರ್ಶಿ ಸುಭಾಸ್ ಮೆಂಡನ್, ಕೋಶಾಧಿಕಾರಿ ಶಿವಾನಂದ, ಮೀನುಗಾರ ಮುಖಂಡರಾದ ಸತೀಶ್ ಕುಂದರ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ಗೋಪಾಲ ಆರ್.ಕೆ., ನಾರಾಯಣ ಕರ್ಕೇರ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಎಂಜಿನಿಯರ್ ಮಂಜೇಗೌಡ, ಉಪ ನಿರ್ದೇಶಕ ಗಣೇಶ್ ಕೆ., ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್‌ಉಪಸ್ಥಿತರಿದ್ದರು. ಶೀಘ್ರ ಜಾರಿಗೆ ಪ್ರಯತ್ನ
ಫೆ. 10ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕೆ ಇಲಾಖೆಗೆ ಮತ್ತು ಬಜೆಟ್‌ಗೆ ಸಂಬಂಧಪಟ್ಟ ಸಭೆ ಇದೆ. ಆ ಸಭೆಯಲ್ಲಿ ಡೀಸೆಲ್ ಸಬ್ಸಿಡಿಯನ್ನು ಈ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ದೊರೆಯುವಂತೆ ಮತ್ತು ಸ್ಲಿಪ್‌ವೇ ನಿರ್ವಹಣೆಯನ್ನು ಮೀನುಗಾರ ಸಂಘಕ್ಕೆ ನೀಡುವ ಇನ್ನಿತರ ವಿಷಯಗಳನ್ನು ಅವರ ಗಮನಕ್ಕೆ ತಂದು ಇವೆರಡನ್ನು ಅದಷ್ಟು ಶೀಘ್ರದಲ್ಲಿ ಜಾರಿಗೊಳಿಸುವಂತೆ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಎಸ್. ಅಂಗಾರ ಅವರು ತಿಳಿಸಿದರು.